HomeKarnatakaಪ್ರಯಾಣಿಕರ ಗಮನಕ್ಕೆ ; ಮಂಗಳೂರು ಜಂಕ್ಷನ್ – ಯಶವಂತಪುರ ರೈಲು ವೇಳಾಪಟ್ಟಿ ಬದಲಾವಣೆ

ಪ್ರಯಾಣಿಕರ ಗಮನಕ್ಕೆ ; ಮಂಗಳೂರು ಜಂಕ್ಷನ್ – ಯಶವಂತಪುರ ರೈಲು ವೇಳಾಪಟ್ಟಿ ಬದಲಾವಣೆ

ಮಂಗಳೂರು : ಪ್ರಯಾಣಿಕರ ಕೋರಿಕೆಯಂತೆ ಮಂಗಳೂರು ಜಂಕ್ಷನ್ – ಯಶವಂತಪುರ ರೈಲು ಸಂಚಾರದ ವೇಳಾಪಟ್ಟಿ ಬದಲಾವಣೆ ಮಾಡಲಾಗಿದೆ.

ಈ ಬಗ್ಗೆ ಬಿಜೆಪಿ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದು, ಮಂಗಳೂರು ಜಂಕ್ಷನ್ – ಯಶವಂತಪುರಕ್ಕೆ (ರೈಲು ಸಂಖ್ಯೆ 16576) ವಾರಕ್ಕೆ 3 ಬಾರಿ ಕಾರ್ಯಾಚರಿಸುವ ರೈಲಿನ ಸಮಯ ಬದಲಾಯಿಸುವಂತೆ ಬಹುದಿನಗಳಿಂದಲೂ ಸಾರ್ವಜನಿಕರಿಂದ ಮನವಿಯಿತ್ತು. ಇದೀಗ, ಸಾರ್ವಜನಿಕರ ಕೋರಿಕೆಯನ್ನು ಈಡೇರಿಸಲಾಗಿದೆ. ಈ ರೈಲು ಬೆಳಿಗ್ಗೆ 7 ಗಂಟೆಗೆ ಮಂಗಳೂರಿನಿಂದ ಹೊರಟು ಸಂಜೆ 4.30ಕ್ಕೆ ಬೆಂಗಳೂರಿನ ಯಶವಂತಪುರ ತಲುಪಲಿದೆ. ಸಾರ್ವಜನಿಕರು ಈ ರೈಲಿನ ಸೇವೆಯ ಪ್ರಯೋಜನ ಪಡೆದುಕೊಳ್ಳಬೇಕೆಂದು ವಿನಂತಿಸಿಕೊಳ್ಳುತ್ತೇನೆ ಎಂದು ವಿ.ಸೋಮಣ್ಣ ಟ್ವೀಟ್ ನ್ನು ಬಿಜೆಪಿ ಹಂಚಿಕೊಂಡಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular