HomeIndiaಮರದ ಮೇಲೆ ಕುಳಿತು ಡೋನಟ್​ ಮೆಲ್ಲುತ್ತಿರುವ ಅಳಿಲು: ಕುತೂಹಲದ ವಿಡಿಯೋ ವೈರಲ್​

ಮರದ ಮೇಲೆ ಕುಳಿತು ಡೋನಟ್​ ಮೆಲ್ಲುತ್ತಿರುವ ಅಳಿಲು: ಕುತೂಹಲದ ವಿಡಿಯೋ ವೈರಲ್​

ಪ್ರಾಣಿ ಪಕ್ಷಿ ಪ್ರಪಂಚವೇ ಕುತೂಹಲವಾದದ್ದು. ಇದರ ಬಗ್ಗೆ ತಿಳಿದಷ್ಟೂ ಕಡಿಮೆಯೇ. ಅವುಗಳ ಆಹಾರ ಕ್ರಮ, ನಡವಳಿಕೆ ಎಲ್ಲವೂ ಕುತೂಹಲಕಾರಿಯಾದದ್ದು. ಈಗ ಅಂಥದ್ದೇ ಒಂದು ವಿಡಿಯೋ ವೈರಲ್ ಆಗಿದೆ.

ಕಾರಿನಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬರು ಮರದ ಮೇಲೆ ಕುಳಿತಿದ್ದ ಅಳಿಲನ್ನು ಗಮನಿಸಿರೋ ಹಿನ್ನೆಲೆಯಲ್ಲಿ ಈ ಒಂದು ವಿಡಿಯೋ ವೈರಲ್​ ಆಗಿದೆ. ಅಳಿಲನ್ನು ಸಾಮಾನ್ಯವಾಗಿ ಎಲ್ಲರೂ ನೋಡುತ್ತಾರೆ. ಆದರೆ ಇದರ ವಿಶೇಷತೆ ಎಂದರೆ, ಈ ಅಳಿಲು ಡೋನಟ್​ ಅನ್ನು ಕುತೂಹಲ ಎನಿಸುವ ರೀತಿಯಲ್ಲಿ ತಿನ್ನುತ್ತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಾರಿನಲ್ಲಿ ಕುಳಿತ ವ್ಯಕ್ತಿ ಜೇಬಿನಿಂದ ಫೋನ್ ತೆಗೆದುಕೊಂಡು ಈ ಕುತೂಲವನ್ನು ರೆಕಾರ್ಡಿಂಗ್ ಮಾಡಿದ್ದಾರೆ. ಮರದ ಮೇಲೆ ಕುಳಿತ ಅಳಿಲಿನ ಕಡೆ ಮೊಬೈಲ್​ ಅನ್ನು ಝೂಮ್​ ಮಾಡಿದಾಗ ಅದು ಬೃಹತ್ ಡೋನಟ್ ಒಂದನ್ನು ಮೆಲ್ಲುತ್ತಿರುವುದನ್ನು ನೋಡಬಹುದಾಗಿದೆ. ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಈ ವಿಡಿಯೋ ಶೇರ್​ ಮಾಡಿಕೊಳ್ಳಲಾಗಿದ್ದು, 25 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಹೊಂದಿದೆ. ಇಲ್ಲಿಯವರೆಗೆ ಇದು ಬೀಜಗಳನ್ನು ಮಾತ್ರ ತಿನ್ನುತ್ತದೆ ಎಂದುಕೊಂಡಿದ್ದೆವು. ಹೀಗೂ ತಿನ್ನಬಹುದು ಎಂದು ತಿಳಿದೇ ಇರಲಿಲ್ಲ ಎಂದು ಹಲವರು ತಿಳಿಸಿದ್ದಾರೆ.

https://www.youtube.com/watch?v=GE8CrMxsXPg

For Latest News Updates, Join Our Whatsapp Community🚩
RELATED ARTICLES

Most Popular