HomeKarnatakaಪಟಾಕಿ ಹಚ್ಚಿದ್ದನ್ನು ಪ್ರಶ್ನಿಸಿದ್ದಕ್ಕೆ ವ್ಯಕ್ತಿಯನ್ನೇ ಬರ್ಬರವಾಗಿ ಕೊಂದ ದುಷ್ಕರ್ಮಿಗಳು: ಐವರು ಅರೆಸ್ಟ್

ಪಟಾಕಿ ಹಚ್ಚಿದ್ದನ್ನು ಪ್ರಶ್ನಿಸಿದ್ದಕ್ಕೆ ವ್ಯಕ್ತಿಯನ್ನೇ ಬರ್ಬರವಾಗಿ ಕೊಂದ ದುಷ್ಕರ್ಮಿಗಳು: ಐವರು ಅರೆಸ್ಟ್

ರಾಯಚೂರು: ಮನೆ ಬಳಿ ಯಾಕೆ ಪಟಾಕಿ ಹಚ್ಚುತ್ತೀರಿ ಎಂದು ವ್ಯಕ್ತಿ ಪ್ರಶ್ನಿಸಿದ್ದಕ್ಕೆ ಸಿಟ್ಟಿಗೆದ್ದ ದುಷ್ಕರ್ಮಿಗಳು ಆತನನ್ನೇ ಬರ್ಬರವಾಗಿ ಕೊಲೆಗೈದ ಘಟನೆ ರಾಯಚೂರಿನಲ್ಲಿ ನಡೆದಿದೆ.

ನರಸಿಂಹಲು (38) ಮೃತ ದುರ್ದೈವಿ. ರಾಯಚೂರಿನ ರಾಗಿಮನಗುಡ್ಡದ ಕಾರ್ನರ್ ಬಳಿ ಮನೆ ಹೊಂದಿದ್ದ ನರಸಿಂಹಲು ಮನೆ ಬಳಿ ಏರಿಯಾದ ಹುಡುಗರು ನಿನ್ನೆ ರಾತ್ರಿ ಪಟಾಕಿ ಹೊಡೆಯುತ್ತಿದ್ದರು. ಪಟಾಕಿ ಸಿಡಿಸಿ, ಯುವಕರ ಗಲಾಟೆ ಜೋರಾಗುತ್ತಿದ್ದಂತೆ ನರಸಿಂಹಲು ನಮ್ಮ ಮನೆ ಬಳಿ ಯಾಕೆ ಪಟಾಕಿ ಹಚ್ಚುತ್ತೀದ್ದೀರಾ? ಎಂದು ಪ್ರಶ್ನಿಸಿದ್ದಾರಂತೆ. ಆದರೂ ಹುಡುಗರು ಪಟಾಕಿ ಸಿಡಿಸುವುದನ್ನು ಬಿಟ್ಟಿಲ್ಲ.

ಕೋಪಗೊಂಡ ನರಸಿಂಹಲು ಮಚ್ಚಿನಿಂದ ಹುಡುಗರ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದೇ ವೇಳೆ ಹಲ್ಲೆಗೊಳಗಾದ ಹುಡುಗರು ನರಸಿಂಹಲುನನ್ನು ಹತ್ಯೆ ಮಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ನರಸಿಂಹಲು ಹತ್ಯೆ ಮಾಡಲಾಗಿದೆ. ಎರಡೂ ಕಡೆಯಿಂದ ಪರಸ್ಪರ ದೂರು ದಾಖಲಾಗಿದ್ದು, ಪ್ರಕರಣ ಸಂಬಂಧ ಐವರನ್ನು ಪೊಲೀಸರು ಬಂಧಿಸಿದ್ದಾರೆ.

 

For Latest News Updates, Join Our Whatsapp Community🚩
RELATED ARTICLES

Most Popular