HomeIndiaತಿರುಪತಿಯಲ್ಲಿ ಆಘಾತಕಾರಿ ಘಟನೆ: ಸೆಲ್ಫಿ ತೆಗೆದುಕೊಳ್ಳಲು ಬಳಿಗೆ ಬಂದವನ ತಿಂದು ತೇಗಿದ ಸಿಂಹ

ತಿರುಪತಿಯಲ್ಲಿ ಆಘಾತಕಾರಿ ಘಟನೆ: ಸೆಲ್ಫಿ ತೆಗೆದುಕೊಳ್ಳಲು ಬಳಿಗೆ ಬಂದವನ ತಿಂದು ತೇಗಿದ ಸಿಂಹ

ತಿರುಪತಿ: ತಿರುಪತಿ ಮೃಗಾಲಯದಲ್ಲಿ ಗುರುವಾರ ಸಿಂಹದೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಯತ್ನಿಸಿದ ವ್ಯಕ್ತಿಯೊಬ್ಬನನ್ನು ಕೊಂದು ಹಾಕಿದ ಘಟನೆ ನಡೆದಿದೆ.

ರಾಜಸ್ಥಾನದ ಅಲ್ವಾರ್‌ನ 38 ವರ್ಷದ ಪ್ರಹ್ಲಾದ್ ಗುಜ್ಜರ್ ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ. ಅವರು ಸಾರ್ವಜನಿಕರಿಗೆ ನಿಷೇಧ ಇರುವ ಪ್ರದೇಶವನ್ನು ಪ್ರವೇಶಿಸಿದರು. ಎಚ್ಚರಿಕೆಯನ್ನು ನಿರ್ಲಕ್ಷಿಸಿ 25 ಅಡಿ ಎತ್ತರದ ಬೇಲಿಯನ್ನು ಹತ್ತಿ ಆವರಣಕ್ಕೆ ಹಾರಿದರು. ಸಿಂಹಗಳಿದ್ದ ಆವರಣದೊಳಗೆ ಪ್ರವೇಶಿಸಿ ಸಿಂಹದೊಂದಿಗೆ ಫೋಟೋ ತೆಗೆಯಲು ಪ್ರಹ್ಲಾದ್ ಪ್ರಯತ್ನಿಸಿದ್ದಾರೆ ಎಂದು ಶ್ರೀ ವೆಂಕಟೇಶ್ವರ ಝೂಲಾಜಿಕಲ್ ಪಾರ್ಕ್‌ನ ಅಧಿಕಾರಿಗಳು ತಿಳಿಸಿದ್ದಾರೆ.

ಕಾವಲುಗಾರ ಬರುವಷ್ಟರಲ್ಲಿ ಡೊಂಗಲ್‌ಪುರ ಎಂಬ ಹೆಸರಿನ ಸಿಂಹವು ಗುಜ್ಜರ್‌ ನನ್ನು ಕೊಂದು ಹಾಕಿತು. ಪೊಲೀಸ್ ಕೇಸ್ ದಾಖಲಾಗಿದ್ದು ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದ್ದು, ಗುಜ್ಜರ್ ಆವರಣಕ್ಕೆ ಪ್ರವೇಶಿಸಿದಾಗ ಕುಡಿದ ಸ್ಥಿತಿಯಲ್ಲಿದ್ದನೆ ಎಂಬುದರ ಬಗ್ಗೆ ತನಿಖೆ ನಡೆಸಲಾಗಿದೆ. ಗುಜ್ಜರ್ ಒಬ್ಬನೇ ಮೃಗಾಲಯಕ್ಕೆ ಭೇಟಿ ನೀಡಿದ್ದು, ಅಧಿಕಾರಿಗಳು ಆತನ ಕುಟುಂಬವನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೃಗಾಲಯದಲ್ಲಿ ಕುಮಾರ್, ಸುಂದರಿ ಮತ್ತು ಡೊಂಗಲ್ಪುರ್ ಹೆಸರಿನ ಮೂರು ಸಿಂಹಗಳಿವೆ. ಡೊಂಗಲ್‌ಪುರ ಸಿಂಹವನ್ನು ಪಂಜರಕ್ಕೆ ಸ್ಥಳಾಂತರಿಸಲಾಗಿದ್ದು, ನಿಗಾದಲ್ಲಿ ಇರಿಸಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular