HomeEntertainmentWatch Video: ಲೆಹಂಗಾ, ಹೆಲ್ಮೆಟ್ ಧರಿಸಿ ರೈಲ್ವೆ ನಿಲ್ದಾಣದಲ್ಲಿ ಯುವಕನ ಡಾನ್ಸ್....!

Watch Video: ಲೆಹಂಗಾ, ಹೆಲ್ಮೆಟ್ ಧರಿಸಿ ರೈಲ್ವೆ ನಿಲ್ದಾಣದಲ್ಲಿ ಯುವಕನ ಡಾನ್ಸ್….!

ಸಾಮಾಜಿಕ ಜಾಲತಾಣದಲ್ಲಿ ದಿನಕ್ಕೆ ನೂರಾರು ವಿಡಿಯೋ ವೈರಲ್‌ ಆಗ್ತಿರುತ್ತದೆ. ಕೆಲವೊಂದು ಅಚ್ಚರಿ ಹುಟ್ಟಿಸುವಂತಿದ್ರೂ ಅದಕ್ಕೆ ಮಿಲಿಯನ್‌ ವೀವ್ಸ್‌ ಸಿಗ್ತಿದೆ. ಇದನ್ನು ನೋಡಿದ ಜನರು ಸಾರ್ವಜನಿಕ ಪ್ರದೇಶದಲ್ಲೂ ಲಜ್ಜೆ ಬಿಟ್ಟು ಡಾನ್ಸ್‌ ಮಾಡ್ತಿದ್ದಾರೆ. ಚಿತ್ರವಿಚಿತ್ರ ಡ್ರೆಸ್‌ ಧರಿಸಿ ವಿಡಿಯೋ ಮಾಡ್ತಿದ್ದಾರೆ. ಈಗ ಸಾಮಾಜಿಕ ಜಾಲತಾಣದಲ್ಲಿ ರೈಲ್ವೆ ನಿಲ್ದಾಣದಲ್ಲಿ ಮಾಡಿದ ಡಾನ್ಸ್‌ ವಿಡಿಯೋ ಒಂದು ವೈರಲ್‌ ಆಗಿದೆ.

 

rahulsaha274 ಹೆಸರಿನ ಇನ್ಸ್ಟಾ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಸಾಹಾ, ಮಹಿಳೆಯರ ಡ್ರೆಸ್‌ ಧರಿಸಿ ಅನೇಕ ವಿಡಿಯೋಗಳನ್ನು ಮಾಡಿದ್ದಾರೆ. ಈ ವಿಡಿಯೋದಲ್ಲಿ ಲೆಹಂಗಾ ಧರಿಸಿರುವ ಆತ, ತಲೆಗೆ ಹೆಲ್ಮೆಟ್‌ ಹಾಕಿಕೊಂಡಿದ್ದಾನೆ. ಹಾಡು ಬರ್ತಿದ್ದಂತೆ ಸ್ಟೆಪ್‌ ಹಾಕುವ ಸಾಹಾ, ಮಹಿಳೆಯೊಬ್ಬರ ಕೈ ಹಿಡಿಯುವ ಪ್ರಯತ್ನ ನಡೆಸ್ತಾರೆ. ಮಹಿಳೆ ಮುಂದೆ ಹೋಗುವ ಕಾರಣ, ಅಲ್ಲಿಯೇ ಇದ್ದ ಪ್ರಯಾಣಿಕರೊಬ್ಬರನ್ನು ಎತ್ಕೊಂಡು ಡಾನ್ಸ್‌ ಮಾಡ್ತಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ವೀಡಿಯೊವನ್ನು 6 ಮಿಲಿಯನ್ ಗಿಂತಲೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. 100,000 ಕ್ಕೂ ಹೆಚ್ಚು ಲೈಕ್ಸ್‌ ಬಂದಿದೆ. ಅನೇಕರು ಈ ವಿಡಿಯೋಕ್ಕೆ ತಮಾಷೆಯ ಕಮೆಂಟ್‌ ಮಾಡಿದ್ದಾರೆ. ಕೆಲ ಬಳಕೆದಾರರು ಉರ್ಫಿ ಜಾವೇದ್‌ ಡ್ರೆಸ್‌ ನಂತಿದೆ ಎಂದಿದ್ದಾರೆ.‌

 

For Latest News Updates, Join Our Whatsapp Community🚩
RELATED ARTICLES

Most Popular