ಮಂಡ್ಯ: ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಅಕ್ಕಮ್ಮನಕೊಪ್ಪಲು ಗ್ರಾಮದಲ್ಲಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾರೆ. ಮನೆ ಜಗುಲಿಯಲ್ಲಿ ಅನುಮಾನಾಸ್ಪದವಾಗಿ ಮಂಜು(44) ಶವ ಪತ್ತೆಯಾಗಿದೆ.
ದುಷ್ಕರ್ಮಿಗಳು ಕೊಲೆ ಮಾಡಿ ಶವವನ್ನು ಬಿಸಾಕಿರುವ ಶಂಕೆ ವ್ಯಕ್ತವಾಗಿದೆ. ಮಂಜು ಮುಖ ಮತ್ತು ಕತ್ತಿನಲ್ಲಿ ಗಂಭೀರವಾದ ಗಾಯದ ಗುರುತು ಪತ್ತೆಯಾಗಿದೆ. ಬನ್ನೂರಿನಲ್ಲಿ ಅಂಗಡಿ ಇಟ್ಟುಕೊಂಡು ಕುಟುಂಬದ ಜೊತೆಗೆ ಮಂಜು ವಾಸವಾಗಿದ್ದರು. ಸಂಬಂಧಿಕರ ಗೃಹಪ್ರವೇಶ ಎಂದು ಹುಲ್ಲೇಗಾಲಕ್ಕೆ ಹೋಗಿದ್ದ ಮಂಜು ಮನೆಗೆ ವಾಪಸ್ ಆಗದ ಹಿನ್ನೆಲೆಯಲ್ಲಿ ಮಂಜು ಪತ್ನಿ ಆತಂಕಗೊಂಡಿದ್ದರು. ಬೆಳಗ್ಗೆ ಹುಟ್ಟೂರು ಅಕ್ಕಮ್ಮನಕೊಪ್ಪಲಿನ ಮನೆಯ ಜಗದಲ್ಲಿ ಶವ ಪತ್ತೆಯಾಗಿದೆ. ಮಳವಳ್ಳಿ ಪೊಲೀಸ್ ಠಾಣೆಗೆ ಮಂಜು ಸಹೋದರ ದೂರು ನೀಡಿದ್ದಾರೆ.

