HomeIndiaSHOCKING NEWS: ಆತ್ಮಹತ್ಯೆ ಪ್ರಕರಣದ ತನಿಖೆ ವಿಳಂಬ; ಬೆರಳನ್ನೇ ಕತ್ತರಿಸಿಕೊಂಡು ಪ್ರತಿಭಟಿಸಿದ ನೊಂದ ವ್ಯಕ್ತಿ

SHOCKING NEWS: ಆತ್ಮಹತ್ಯೆ ಪ್ರಕರಣದ ತನಿಖೆ ವಿಳಂಬ; ಬೆರಳನ್ನೇ ಕತ್ತರಿಸಿಕೊಂಡು ಪ್ರತಿಭಟಿಸಿದ ನೊಂದ ವ್ಯಕ್ತಿ

ಥಾಣೆ: ಆತ್ಮಹತ್ಯೆ ಪ್ರಕರಣದ ತನಿಖೆ ವಿಳಂಬವಾಗುತ್ತಿರುವುದನ್ನು ವಿರೋಧಿಸಿ ವ್ಯಕ್ತಿಯೊಬ್ಬ ಬೇಸತ್ತು ತನ್ನ ಬೆರಳನ್ನೇ ಕತ್ತರಿಸಿಕೊಂಡಿರುವ ಘೋರ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ನಂದಕುಮಾರ್ ನಾನಾವರೆ ಹಾಗೂ ಅವರ ಪತ್ನಿ ಉಜ್ವಲಾ ನಾನಾವರೆ ಥಾಣೆಯಲ್ಲಿನ ಉಲ್ಲಾಸನಗರದಲ್ಲಿರುವ ಮನೆಯ ಮೇಲಿಂದ ಹಾರಿ ಆತ್ಮಹತ್ಯೆಗೆ ಶರಣಾಗಿದ್ದರು. ಆಗಸ್ಟ್ 1ರಂದು ಈ ಘಟನೆ ನಡೆದಿತ್ತು. ದಂಪತಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪೊಲೀಸರು ಪ್ರಕರಣದ ತನಿಖೆ ನಡೆಸಲು ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿ ನಂದಕುಮಾರ್ ಸಹೋದರ ಧನಂಜಯ ನಾನವರೆ ಪ್ರತಿಭಟನೆ ನಡೆಸಿದ್ದರು. ಬಳಿಕ ತನ್ನ ಬೆರಳನ್ನೇ ಕಠಾರಿಯಿಂದ ಕತ್ತರಿಸಿಕೊಂಡು ವಿಡಿಯೋ ಮಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಪೊಲೀಸರು, ಕೆಲವೇ ಗಂಟೆಗಳಲ್ಲಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ನಾಲ್ವರು ಆರೊಪಿಗಳನ್ನು ಬಂಧಿಸಿದ್ದರು.

ಡೆತ್ ನೋಡ್ ಆಧರಿಸಿ ಕಮಲೇಶ್ ನಿಕಮ್, ನರೇಶ್ ಗಾಯಕವಾಡ, ಗಣಪತಿ ಕಾಂಬಳೆ ಹಾಗೂ ಶಶಿಕಾಂತ್ ಬಂಧಿತರು.

ಇನ್ನು ತನ್ನ ಅಣ್ಣ-ಅತ್ತಿಗೆ ಸಾವಿಗೆ ಸಚಿವರೊಬ್ಬರು ಕಾರಣ ಎಂದು ಧನಂಜಯ್ ನಾನಾವರೆ ಆರೋಪಿಸಿದ್ದು, ಅವರ ವಿರುದ್ಧ ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ನಮ್ಮ ಕುಟುಂಬಕ್ಕೆ ನ್ಯಾಯ ಸಿಗುವವರೆಗೂ ತನ್ನ ದೇಹದ ಒಂದೊಂದೇ ಅಂಗಾಂಗಗಳನ್ನು ಕತ್ತರಿಸಿ ಸರ್ಕಾರಕ್ಕೆ ಕಳುಹಿಸುತ್ತೇನೆ ಎಂದು ವಿಡಿಯೋದಲ್ಲಿ ಹೇಳಿದ್ದಾರೆ. ಧನಂಜಯ್ ಅವರನ್ನು ಸಧ್ಯ ಪುಣೆ ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ.

For Latest News Updates, Join Our Whatsapp Community🚩
RELATED ARTICLES

Most Popular