HomeKarnatakaಕಾರಿನ ಬಾನೆಟ್ ಮೇಲೆ ಗೂಡ್ಸ್ ವಾಹನ ಚಾಲಕನ ಒಂದು ಕಿ.ಮೀ. ಎಳೆದೊಯ್ದ ವ್ಯಕ್ತಿ ಅರೆಸ್ಟ್

ಕಾರಿನ ಬಾನೆಟ್ ಮೇಲೆ ಗೂಡ್ಸ್ ವಾಹನ ಚಾಲಕನ ಒಂದು ಕಿ.ಮೀ. ಎಳೆದೊಯ್ದ ವ್ಯಕ್ತಿ ಅರೆಸ್ಟ್

ಬೆಂಗಳೂರು: ತನ್ನ ವಾಹನಕ್ಕೆ ತಗುಲಿದೆ ಎಂದು ಕಾರಿನ ಮೇಲೆ ಕುಳಿತಿದ್ದ ಗೂಡ್ಸ್ ವಾಹನ ಚಾಲಕನನ್ನು ಒಂದು ಕಿಲೋಮೀಟರ್ ವರೆಗೂ ಕಾರಿನ ಚಾಲಕ ಎಳೆದೊಯ್ದ ಘಟನೆ ಬೆಂಗಳೂರುನ ಹಲಸೂರು ಪೊಲೀಸ್ ಠಾಣಾ ವ್ಯಾಪ್ತಿಯ ಓಲ್ಡ್ ಏರ್ಪೋರ್ಟ್ ರಸ್ತೆಯಲ್ಲಿ ನಡೆದಿದೆ.

ಬುಧವಾರ ಮಧ್ಯಾಹ್ನ 12:45 ರ ಸುಮಾರಿಗೆ ಘಟನೆ ನಡೆದಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಾಹನ ತಗುಲಿದ ವಿಚಾರಕ್ಕೆ ಗೂಡ್ಸ್ ಚಾಲಕ ನಂಜುಂಡ ಮತ್ತು ಕಾರ್ ನ ಚಾಲಕರ ಸುರೇಶ್ ನಡುವೆ ವಾಗ್ವಾದ ನಡೆದಿದೆ.

ಇದರಿಂದ ಸಿಟ್ಟುಗೊಂಡ ಸರಕು ವಾಹನ ಚಾಲಕ ಕಾರ್ ಬ್ಯಾನೆಟ್ ಮೇಲೆ ಕುಳಿತಿದ್ದಾನೆ. ಆಕ್ರೋಶಗೊಂಡ ಕಾರ್  ಚಾಲಕ ಆತನ ಸಮೇತ ಕಾರ್ ಚಾಲನೆ ಮಾಡಿದ್ದು, ವಾಹನ ನಿಲ್ಲಿಸುವಂತೆ ಕೂಗಾಡಿದರೂ ಸುಮಾರು ಒಂದು ಕಿಲೋ ಮೀಟರ್ ದೂರ ಎಳೆದೊಯ್ದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಹಲಸೂರು ಠಾಣೆ ಪೊಲೀಸರು ಪುಲಿಕೇಶಿ ನಗರದ ಕಾರ್ ಚಾಲಕ ಸುರೇಶ್ ನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular