HomeEntertainmentಸನ್ಯಾಸಿಯಾಗಿದ್ದ ನಟಿ ಮತ್ತೆ ಗ್ಲಾಮರಸ್ ಅಖಾಡಕ್ಕೆ! ರಾಜಸ್ಥಾನ ಫಿಲ್ಮ್ ಫೆಸ್ಟಿವಲ್‌ನಲ್ಲಿ ಮಮತಾ ಕುಲಕರ್ಣಿ ಭರ್ಜರಿ ಕುಣಿತ!

ಸನ್ಯಾಸಿಯಾಗಿದ್ದ ನಟಿ ಮತ್ತೆ ಗ್ಲಾಮರಸ್ ಅಖಾಡಕ್ಕೆ! ರಾಜಸ್ಥಾನ ಫಿಲ್ಮ್ ಫೆಸ್ಟಿವಲ್‌ನಲ್ಲಿ ಮಮತಾ ಕುಲಕರ್ಣಿ ಭರ್ಜರಿ ಕುಣಿತ!

90ರ ದಶಕದ ಬಾಲಿವುಡ್‌ನ ಜನಪ್ರಿಯ ನಟಿ ಮಮತಾ ಕುಲಕರ್ಣಿ ಅವರು ತಮ್ಮ ಹಳೆಯ ಸೂಪರ್ ಹಿಟ್ ಹಾಡುಗಳಿಗೆ ಭರ್ಜರಿಯಾಗಿ ಹೆಜ್ಜೆ ಹಾಕಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದ್ದು, ರಸಿಕರ ಗಮನ ಸೆಳೆದಿದೆ.

ಜೈಪುರದಲ್ಲಿ ನಡೆದ 14ನೇ ರಾಜಸ್ಥಾನ ಚಲನಚಿತ್ರೋತ್ಸವದಲ್ಲಿ ಮಮತಾ ಕುಲಕರ್ಣಿ ಅವರಿಗೆ ‘ಲೈಫ್‌ಟೈಮ್ ಅಚೀವ್‌ಮೆಂಟ್ ಆಫ್ಟರ್’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಅವರ ಅಭಿನಯದ ‘ಘಾತಕ್’ ಚಿತ್ರದ ‘ಕೋಯಿ ಜಾಯೆ ತೋ ಲೇ ಆಯೆ’, ‘ಕರಣ್ ಅರ್ಜುನ್’ ಸಿನಿಮಾದ ‘ಏಕ್ ಮುಂಡಾ ಮೇರಿ ಉಮರ್ ಕಾ’ ಹಾಗೂ ‘ಸಬ್ಸೆ ಬಡಾ ಖಿಲಾಡಿ’ ಚಿತ್ರದ ‘ಲಂಬಾ ಲಂಬಾ ಘೂಂಘಟ್’ ಹಾಡುಗಳು ಪ್ಲೇ ಆದಾಗ ನಟಿ ವೇದಿಕೆಯಲ್ಲಿದ್ದ ವಿದ್ಯಾರ್ಥಿಗಳೊಂದಿಗೆ ಮನಸೋ ಇಚ್ಛೆ ಹೆಜ್ಜೆ ಹಾಕಿದರು.

2025ರ ಆರಂಭದಲ್ಲಿ ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾಕುಂಭ ಮೇಳದಲ್ಲಿ ಸನ್ಯಾಸತ್ವ ಸ್ವೀಕರಿಸಿ ಕಾಷಾಯ ವಸ್ತ್ರಧಾರಿಣಿಯಾಗಿದ್ದ ಮಮತಾ, ಇದೀಗ ಗ್ಲಾಮರಸ್ ಉಡುಪಿನಲ್ಲಿ ಬಂದು ಹಳೆಯ ಶೈಲಿಯಲ್ಲಿ ಕುಣಿದಿರುವುದು ನೆಟ್ಟಿಗರಲ್ಲಿ ಅಚ್ಚರಿ ಮೂಡಿಸಿದೆ. “ಇವರೇನೋ ಸನ್ಯಾಸಿಯಾಗಿದ್ದರಲ್ಲವೇ?” ಎಂದು ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಕಾಮೆಂಟ್ ಮಾಡುತ್ತಿದ್ದು, ಇನ್ನು ಕೆಲವರು ಅವರ ಬದಲಾಗದ ಸೌಂದರ್ಯ ಹಾಗೂ ಗ್ಲಾಮರ್ ಅನ್ನು ಹಾಡಿ ಹೊಗಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

90ರ ದಶಕದ ಬ್ಲಾಕ್ ಬಸ್ಟರ್ ಚಿತ್ರಗಳಲ್ಲಿ ನಟಿಸಿ ಮೆರೆದಿದ್ದ ಮಮತಾ, ಡ್ರಗ್ಸ್ ಪ್ರಕರಣವೊಂದರಲ್ಲಿ ಸಿಲುಕಿ ಸುದೀರ್ಘ ಕಾಲ ಚಿತ್ರರಂಗದಿಂದ ದೂರವಿದ್ದರು. 2024 ರಲ್ಲಿ ಮುಂಬೈ ಹೈಕೋರ್ಟ್ ಆ ಪ್ರಕರಣವನ್ನು ವಜಾಗೊಳಿಸಿದ ಬಳಿಕ ಅವರು ಭಾರತಕ್ಕೆ ಮರಳಿದ್ದರು. ಸದ್ಯ ಆಧ್ಯಾತ್ಮಿಕ ಹಾದಿಯಲ್ಲಿದ್ದರೂ ಚಲನಚಿತ್ರೋತ್ಸವದ ವೇದಿಕೆಯಲ್ಲಿ ಅವರ ಈ ಬಣ್ಣದ ಅವತಾರ ಮತ್ತೆ ಹಳೆಯ ದಿನಗಳನ್ನು ನೆನಪಿಸಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular