HomeKarnatakaನಾಪತ್ತೆಯಾಗಿದ್ದ ನಟ ದರ್ಶನ್ ಮ್ಯಾನೇಜರ್ ಏಕಾಏಕಿ ಪ್ರತ್ಯಕ್ಷ: ಸುದ್ದಿಗೋಷ್ಠಿಯಲ್ಲಿ ಮುಂದಿನ ಯೋಜನೆಗಳ ಅಪ್ ಡೇಟ್ ಕೊಡ್ತೀನಿ...

ನಾಪತ್ತೆಯಾಗಿದ್ದ ನಟ ದರ್ಶನ್ ಮ್ಯಾನೇಜರ್ ಏಕಾಏಕಿ ಪ್ರತ್ಯಕ್ಷ: ಸುದ್ದಿಗೋಷ್ಠಿಯಲ್ಲಿ ಮುಂದಿನ ಯೋಜನೆಗಳ ಅಪ್ ಡೇಟ್ ಕೊಡ್ತೀನಿ ಎಂದು ಸುತ್ತೋಲೆ

ಬೆಂಗಳೂರು: ನಟ ದರ್ಶನ್ ಹಾಗೂ ಗ್ಯಾಂಗ್ ನಿಂದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಸಂದರ್ಭದಲ್ಲಿಯೇ ದರ್ಶನ್ ಮಾಜಿ ಮ್ಯಾನೇಜರ್ ಮಲ್ಲಿ ಅಲಿಯಾಸ್ ಮಲ್ಲಿಕಾರ್ಜುನ ಸಂಕನಗೌಡ ನಾಪತ್ತೆ ಪ್ರಕರಣ ಭಾರಿ ಚರ್ಚೆಗೆ ಕಾರಣವಗಿತ್ತು. ಮಲ್ಲಿಕಾರ್ಜುನ್ ಹಲವರಿಗೆ ವಂಚಿಸಿ ಎಸ್ಕೇಪ್ ಆಗಿದ್ದಾರೆ ಎಂಬ ಆರೋಪವೂ ಕೇಳಿಬಂದಿತ್ತು. ಇದೀಗ ಇದ್ದಕ್ಕಿದ್ದಂತೆ ಪ್ರತ್ಯಕ್ಷರಾಗಿದ್ದಾರೆ.

ನಾಪತ್ತೆಯಾಗಿದ್ದ ಮಲ್ಲಿಕಾರ್ಜುನ್ ಈಗ ಎಲ್ಲರ ಎದುರು ಬಂದಿದ್ದು, ಇಷ್ಟು ದಿನ ತಲೆಮರಿಸಿಕೊಂಡಿದ್ದಾಗಿ ತಿಳಿಸಿದ್ದಾರೆ. ಮಲ್ಲಿಕಾರ್ಜುನ ಅವರು ವೃತ್ತಿಯಲ್ಲಿ ನಿರ್ಮಾಪಕರಾಗಿದ್ದರು. ವಿತರಣೆ ಕೂಡ ಮಾಡುತ್ತಿದ್ದರು. ಅವರು ಯಶ್ ಅಭಿನಯದ ‘ಮೊದಲ ಸಲ’ ಚಿತ್ರದ ನಿರ್ಮಾಣದಲ್ಲಿ ಕೈ ಜೋಡಿಸಿದ್ದರು. ಅವರು ಹೋಟೆಲ್ ಉದ್ಯಮ ಕೂಡ ನಡೆಸುತ್ತಿದ್ದರು ಎನ್ನಲಾಗಿದೆ. ಆ ಬಳಿಕ ದರ್ಶನ್ ಮ್ಯಾನೇಜರ್ ಆದರು. ನಂತರ ಅವರು ಕೆಲವು ವರ್ಷ ನಾಪತ್ತೆಯಾಗಿದ್ದರು. ಎಲ್ಲಿಗೆ ಹೋದರು? ಏನಾದರು ಎಂಬ ಬಗ್ಗೆಯೂ ಸುಳಿವಿರಲಿಲ್ಲ. ಮಲ್ಲಿಕಾರ್ಜುನ ನಾಪತ್ತೆ ಪ್ರಕರಣದ ತನಿಖೆಯೂ ಆಗಬೇಕು ಎಂಬ ಒತ್ತಾಯ ಕೂಡ ಕೇಳಿ ಬಂದಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈಗ ಪತ್ತೆಯಾಗಿರುವ ಮಲ್ಲಿಕಾರ್ಜುನ ಇಂದು ಸುದ್ದಿಗೋಷ್ಠಿ ಕರೆದಿದ್ದಾರೆ. ಈ ಬಗ್ಗೆ ಸುತ್ತೋಲೆ ನೀಡಿರೋ ಅವರು, ‘ನಾನು ಮಲ್ಲಿಕಾರ್ಜುನ್ ಬಿ ಸಂಕನಗೌಡರ. ಮೂಲತಃ ಗದಗದವನು. 18 ವರ್ಷಗಳ ಕಾಲ ನಾನು ಚಲನಚಿತ್ರ ಕ್ಷೇತ್ರದಲ್ಲಿ ಹಲವಾರು ಪ್ರಾಜೆಕ್ಟ್‌ಗಳಲ್ಲಿ ಸಹಾಯಕ ನಿರ್ದೇಶಕ ನಾಗಿ,ಸಹ ನಿರ್ದೇಶಕನಾಗಿ, ನಿರ್ಮಾಪಕನಾಗಿ, ವಿತರಕನಾಗಿ, ಕೆಲಸ ಮಾಡಿದ್ದೇನೆ. ಕೆಲವು ಅನಿವಾರ್ಯ ಕಾರಣಗಳಿಂದ, ವೈಯಕ್ತಿಕ ಸಮಸ್ಯೆಗಳ ಹಿನ್ನೆಲೆ ಮತ್ತು ಉದ್ಯಮದಲ್ಲಿ ನಷ್ಟ ಉಂಟಾದ ಹಿನ್ನೆಲೆಯಲ್ಲಿ ಕೆಲವು ವರ್ಷಗಳ ಹಿಂದೆ ನಾನು ಬೆಂಗಳೂರನ್ನು ತಾತ್ಕಾಲಿಕವಾಗಿ ಬಿಡುವಂತಹ ಪರಿಸ್ಥಿತಿ ಬಂತು’ ಎಂದು ಹೇಳಿಕೊಂಡಿದ್ದಾರೆ.

ಕೆಲವು ವರ್ಷಗಳಾದ ಮೇಲೆ ಮತ್ತೆ ನಾನು ವಾಪಾಸ್ ಬಂದಿದ್ದೀನಿ. ನನ್ನ ಮುಂದಿನ ಯೋಜನೆಗಳ ಬಗ್ಗೆ ನಿಮ್ಮೊಂದಿಗೆ ಮಾತನಾಡುತ್ತೇನೆ. ತಮ್ಮ ವೈಯಕ್ತಿಕ ಸಮಸ್ಯೆಗಳು ಮತ್ತು ಉದ್ಯಮದಲ್ಲಿ ಆದ ನಷ್ಟದಿಂದ ತಾತ್ಕಾಲಿಕವಾಗಿ ಬೆಂಗಳೂರು ತೊರೆದಿದ್ದೆ. ಸುದ್ದಿಗೋಷ್ಠಿಯಲ್ಲಿ ಎಲ್ಲಾ ವಿಚಾರಗಳನ್ನು ಹಾಗೂ ಮುಂದಿನ ಯೋಜನೆಗಳ ಬಗ್ಗೆಯೂ ವಿವರಿಸುತ್ತೇನೆ ಎಂದು ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular