HomeKarnatakaBIG NEWS: ಪಾದಯಾತ್ರೆ ತೆರಳುತ್ತಿದ್ದ ಭಕರ ಮೇಲೆ ಕಾಡಾನೆ ದಾಳಿ; ಮಹಿಳೆ ದುರ್ಮರಣ

BIG NEWS: ಪಾದಯಾತ್ರೆ ತೆರಳುತ್ತಿದ್ದ ಭಕರ ಮೇಲೆ ಕಾಡಾನೆ ದಾಳಿ; ಮಹಿಳೆ ದುರ್ಮರಣ

ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ತೆರಳುತ್ತಿದ್ದ ಭಕ್ತರ ಮೇಲೆ ಕಾಡಾನೆ ದಾಳಿ ನಡೆಸಿದ್ದು, ಓರ್ವ ಮಹಿಳೆ ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆಯ ಮಹದೇಶ್ವರ ಬೆಟ್ಟದ ಆನೆತಲೆದಿಂಬದ ಬಳಿ ನಡೆದಿದೆ.

ಮಳವಳ್ಳಿ ತಾಲೂಕಿನ ಹೊನ್ನೇನಹಳ್ಳಿಯ ಲಕ್ಷ್ಮೀ (40) ಮೃತ ದುರ್ದೈವಿ. ಮಹಿಳೆ ಲಕ್ಷ್ಮೀ ಇತರ ಮೂವರು ಭಕ್ತರ ಜೊತೆ ಪಾದಯಾತ್ರೆ ಮೂಲಕ ಬೆಟ್ಟ ಹತ್ತುತ್ತಿದ್ದರು. ಈ ವೇಳೆ ಕಾಡಾನೆ ಹಠಾತ್ ದಾಳಿ ನಡೆಸಿದೆ.

ಕಾಡಾನೆ ದಾಳಿಯಲ್ಲಿ ಲಕ್ಷ್ಮೀ ಸಾವನ್ನಪ್ಪಿದ್ದಾರೆ. ಮಲೆ ಮಹದೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular