HomeEntertainmentಮನೆಯಲ್ಲಿ ಡ್ರಗ್ಸ್ ಪತ್ತೆ: ಖ್ಯಾತ ನಟಿ ಅರೆಸ್ಟ್

ಮನೆಯಲ್ಲಿ ಡ್ರಗ್ಸ್ ಪತ್ತೆ: ಖ್ಯಾತ ನಟಿ ಅರೆಸ್ಟ್

ತಿರುವನಂತಪುರಂ: ಖ್ಯಾತ ನಟಿಯೊಬ್ಬರ ಮನೆಯಲ್ಲಿ ನಿಷೇಧಿತ ಡ್ರಗ್ಸ್ ಪತ್ತೆಯಾಗಿರುವ ಕಾರಣಕ್ಕೆ ಮಲಯಾಳಂ ಕಿರುತೆರೆ ನಟಿ ಅರೆಸ್ಟ್ ಆಗಿರುವ ಘಟನೆ ನಡೆದಿದೆ.

34 ವರ್ಷದ ಶ್ಯಾಮನಾಥ್ ಬಂಧಿತ ನಟಿ. ಕೇರಳದ ಓಝಿವುಪುರದಲ್ಲಿರುವ ಅವರ ಮನೆಯಿಂದ ಪರವೂರು ಠಾಣೆ ಪೊಲೀಸರು ಶ್ಯಾಮನಾಥ್ ಅವರನ್ನು ಬಂಧಿಸಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಸಿದಾಗ ನಟಿಯ ಮನೆಯಲ್ಲಿ ನಿಷೇಧಿತ ಮಾದಕ ವಸ್ತುಗಳು ಪತ್ತೆಯಾಗಿವೆ. ಎಂಡಿಎಂಎ ಸೇರಿದಂತೆ ಕೆಲ ನಿಷೇಧಿತ ಡ್ರಗ್ಸ್ ಪತ್ತೆಯಾಗಿದ್ದು, ಈ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಶ್ಯಾಮನಾಥ್ ವಿರುದ್ಧ ನಾರ್ಕೋಟಿಕ್ ಡ್ರಗ್ಸ್ ಹಾಗೂ ಸೈಕೋಟ್ರೋಪಿಕ್ ಸಬ್ ಸ್ಟೆನ್ಸ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular