HomeBusinessಪ್ರವಾಸಿಗರಿಗೆ ಮೇಕ್ ಮೈ ಟ್ರಿಪ್ ಬಂಪರ್ ಗಿಫ್ಟ್ ಒನ್ ಸರ್ಕಲ್ ಗ್ಲೋಬಲ್ ರಿವಾರ್ಡ್ಸ್ ಪ್ರೋಗ್ರಾಂ ಆರಂಭ:...

ಪ್ರವಾಸಿಗರಿಗೆ ಮೇಕ್ ಮೈ ಟ್ರಿಪ್ ಬಂಪರ್ ಗಿಫ್ಟ್ ಒನ್ ಸರ್ಕಲ್ ಗ್ಲೋಬಲ್ ರಿವಾರ್ಡ್ಸ್ ಪ್ರೋಗ್ರಾಂ ಆರಂಭ: ನಿಮಗೇನು ಲಾಭ ಗೊತ್ತಾ?

ಬೆಂಗಳೂರು: ನೀವು ಆಗಾಗ ದೇಶ-ವಿದೇಶ ಪ್ರವಾಸ ಮಾಡುವ ಹವ್ಯಾಸ ಹೊಂದಿದ್ದೀರಾ? ಹಾಗಿದ್ದರೆ ನಿಮಗೊಂದು ಸೂಪರ್ ಸಿಹಿಸುದ್ದಿ ಇದೆ ಭಾರತದ ನಂಬರ್ ಒನ್ ಆನ್‌ಲೈನ್ ಟ್ರಾವೆಲ್ ಪ್ಲಾಟ್‌ಫಾರ್ಮ್ ಆದ ಮೇಕ್ ಮೈ ಟ್ರಿಪ್’ (MakeMyTrip) ತನ್ನ ಗ್ರಾಹಕರಿಗಾಗಿ ಅತ್ಯಂತ ಆಕರ್ಷಕ ಹಾಗೂ ಭರ್ಜರಿ ಕೊಡುಗೆಯೊಂದನ್ನು ಘೋಷಿಸಿದೆ. ವಿಶೇಷವಾಗಿ ಭಾರತೀಯ ಪ್ರವಾಸಿಗರ ಅಗತ್ಯತೆಗಳು ಮತ್ತು ಆದ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾದ ಒನ್ ಸರ್ಕಲ್ (One Circle) ಎಂಬ ಬೃಹತ್ ಜಾಗತಿಕ ರಿವಾರ್ಡ್ಸ್ ಕಾರ್ಯಕ್ರಮಕ್ಕೆ ಸಂಸ್ಥೆಯು ಗುರುವಾರ ಅಧಿಕೃತವಾಗಿ ಚಾಲನೆ ನೀಡಿದೆ. ಇನ್ಮುಂದೆ ನೀವು ಟ್ರಾವೆಲ್ ಮಾಡಿದಷ್ಟೂ ನಿಮಗೆ ಜಾಗತಿಕ ಮಟ್ಟದ ಅದ್ಭುತ ಆಫರ್‌ಗಳು ಮತ್ತು ರಿವಾರ್ಡ್ಸ್ ಸಿಗಲಿವೆ

ವಿಶ್ವದಾದ್ಯಂತ 1,002 ನಗರಗಳಲ್ಲಿರುವ ಬರೋಬ್ಬರಿ 13,376 ವಸತಿ ಪ್ರಾಪರ್ಟಿಗಳನ್ನು (ಹೋಟೆಲ್, ಹೋಮ್‌ಸ್ಟೇ, ವಿಲ್ಲಾಗಳು) ಒಂದೇ ವೇದಿಕೆಯಡಿ ತಂದಿರುವುದು ಈ ಯೋಜನೆಯ ಅತಿದೊಡ್ಡ ಮೈಲಿಗಲ್ಲಾಗಿದೆ.

ಶೇ. 10ರಷ್ಟು ರಿವಾರ್ಡ್ ಗ್ಯಾರಂಟಿ, ಗ್ರಾಹಕರಿಗೆ ಬಂಪರ್‌ ಲಾಭ

‘ಒನ್ ಸರ್ಕಲ್’ ನೆಟ್‌ವರ್ಕ್ ಅಡಿ ಬರುವ ಯಾವುದೇ ಹೋಟೆಲ್ ಅಥವಾ ಹೋಮ್‌ಸ್ಟೇ ಅನ್ನು ಗ್ರಾಹಕರು ಬುಕ್ ಮಾಡಿದರೆ, ತಾವು ಪಾವತಿಸಿದ ಒಟ್ಟು ಮೊತ್ತದಲ್ಲಿ ಕನಿಷ್ಠ ಶೇ. 10ರಷ್ಟು ಹಣವನ್ನು ‘ರಿವಾರ್ಡ್ ಪಾಯಿಂಟ್ಸ್’ ರೂಪದಲ್ಲಿ ಮರಳಿ ಪಡೆಯಲಿದ್ದಾರೆ. ವಿಶೇಷವೆಂದರೆ, ಈ ರಿವಾರ್ಡ್ ಪಾಯಿಂಟ್ಸ್‌ಗಳನ್ನು ವಿಶ್ವದ ಯಾವುದೇ ಮೂಲೆಯಲ್ಲಿರುವ ಇದೇ ನೆಟ್‌ವರ್ಕ್‌ನ ಹೋಟೆಲ್‌ಗಳಲ್ಲಿ ತಮ್ಮ ಮುಂದಿನ ಪ್ರವಾಸದ ಬುಕಿಂಗ್ ವೇಳೆ ರಿಯಾಯಿತಿಯಾಗಿ ಬಳಸಿಕೊಳ್ಳಬಹುದು. ಬಜೆಟ್ ಹೋಟೆಲ್‌ಗಳಿಂದ ಹಿಡಿದು ಐಷಾರಾಮಿ ರೆಸಾರ್ಟ್‌ಗಳವರೆಗೆ ಎಲ್ಲಾ ವರ್ಗದ ವಸತಿಗಳಿಗೂ ಇದು ಅನ್ವಯವಾಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬೆಂಗಳೂರು, ಟಿಯರ್‌-2 ನಗರಗಳದ್ದೇ ಪಾರುಪತ್ಯ

ದೇಶೀಯ ಪ್ರವಾಸೋದ್ಯಮದ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು 2ನೇ ಮತ್ತು 3ನೇ ಹಂತದ ನಗರಗಳಿಗೆ ಈ ಯೋಜನೆಯಲ್ಲಿ ಹೆಚ್ಚಿನ ಒತ್ತು ನೀಡಲಾಗಿದೆ. ಈ ನೆಟ್‌ವರ್ಕ್‌ನಲ್ಲಿರುವ ನಾಲ್ಕರಲ್ಲಿ ಮೂರು ಅಂದರೆ ಶೇ. 75ರಷ್ಟು ಹೋಟೆಲ್‌ಗಳು ಈ ಸಣ್ಣ ನಗರಗಳಲ್ಲೇ ಇವೆ.

ಅತಿ ಹೆಚ್ಚು ಪ್ರಾಪರ್ಟಿಗಳನ್ನು ಹೊಂದಿರುವ ನಗರಗಳ ಪಟ್ಟಿಯಲ್ಲಿ ಗುರುಗ್ರಾಮ, ಬೆಂಗಳೂರು ಮತ್ತು ಜೈಪುರ ಟಾಪ್ 3 ಸ್ಥಾನದಲ್ಲಿವೆ. ಹಾಗೆಯೇ, ರಾಜ್ಯಗಳ ಪೈಕಿ ಮಹಾರಾಷ್ಟ್ರ, ರಾಜಸ್ಥಾನ ಮತ್ತು ಕೇರಳ ರಾಜ್ಯಗಳು ಅತಿ ಹೆಚ್ಚು ಹೋಟೆಲ್‌ಗಳನ್ನು ಈ ಯೋಜನೆಗೆ ಒದಗಿಸಿವೆ. ಐಟಿ ಹಬ್‌ಗಳಿಂದ ಹಿಡಿದು ಗಿರಿಧಾಮಗಳು, ಕಡಲತೀರಗಳು ಹಾಗೂ ಆಧ್ಯಾತ್ಮಿಕ ಕೇಂದ್ರಗಳವರೆಗಿನ ಪ್ರವಾಸಿ ತಾಣಗಳನ್ನು ಇದು ಒಳಗೊಂಡಿದೆ.

ವಿದೇಶಿ ಪ್ರವಾಸಕ್ಕೂ ಸೈ

ದೇಶದಲ್ಲಿ ಮಾತ್ರವಲ್ಲದೆ, ಭಾರತೀಯರು ಅತಿ ಹೆಚ್ಚು ಭೇಟಿ ನೀಡುವ 39 ದೇಶಗಳ 134 ಪ್ರವಾಸಿ ತಾಣಗಳಲ್ಲಿನ 1,046 ಪ್ರಾಪರ್ಟಿಗಳನ್ನು ಸಹ ಈ ರಿವಾರ್ಡ್ಸ್ ಕಾರ್ಯಕ್ರಮದಡಿ ಸೇರಿಸಲಾಗಿದೆ. ಗ್ರಾಹಕರ ರೇಟಿಂಗ್ಸ್ ಹಾಗೂ ಮೇಕ್ ಮೈ ಟ್ರಿಪ್ ತಂಡದ ನೇರ ಪರಿಶೀಲನೆಯ ನಂತರವೇ ಅತ್ಯುತ್ತಮ ಹೋಟೆಲ್‌ಗಳನ್ನು ಈ ನೆಟ್‌ವರ್ಕ್‌ಗೆ ಸೇರ್ಪಡೆಗೊಳಿಸಲಾಗಿದೆ.

ಈ ಹೊಸ ಯೋಜನೆಯ ಕುರಿತು ಮತ್ತಷ್ಟು ವಿವರಗಳನ್ನು ಹಂಚಿಕೊಂಡಿರುವ ಮೇಕ್ ಮೈ ಟ್ರಿಪ್‌ನ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಗ್ರೂಪ್ ಸಿಇಒ ರಾಜೇಶ್ ಮಾಗೋವ್, “ಪ್ರವಾಸಿಗರು ಕೈಗೊಳ್ಳುವ ಪ್ರತಿಯೊಂದು ಪ್ರವಾಸವೂ ಅವರಿಗೆ ಲಾಭದಾಯಕವಾಗಿರಬೇಕು. ಜೊತೆಗೆ ನಮ್ಮ ಪಾಲುದಾರ ಹೋಟೆಲ್‌ಗಳಿಗೆ ನಿರಂತರವಾಗಿ ಲಾಭ ಒದಗಿಸಬೇಕು ಎಂಬ ಸರಳ ಉದ್ದೇಶದಿಂದ ‘ಒನ್ ಸರ್ಕಲ್’ ಅನ್ನು ಹುಟ್ಟುಹಾಕಲಾಗಿದೆ. ಇದು ಗ್ರಾಹಕರಿಗೆ ಭರ್ಜರಿ ಉಳಿತಾಯ ಮಾಡುವುದರ ಜೊತೆಗೆ, ಹೋಟೆಲ್ ಮಾಲೀಕರಿಗೆ ಹೊಸ ಗ್ರಾಹಕರನ್ನು ಸೆಳೆಯಲು ನೆರವಾಗಲಿದೆ,” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಭಾರತದ ಪ್ರವಾಸೋದ್ಯಮ ವಲಯದಲ್ಲಿ ಕ್ರಾಂತಿ ಮಾಡಿರುವ ಮೇಕ್ ಮೈ ಟ್ರಿಪ್, ಕೃತಕ ಬುದ್ಧಿಮತ್ತೆ ಆಧಾರಿತ ಟ್ರಾವೆಲ್ ಪ್ಲಾಟ್‌ಫಾರ್ಮ್ ಆಗಿದೆ. MakeMyTrip, Goibibo ಮತ್ತು redBus ಬ್ರ್ಯಾಂಡ್‌ಗಳ ಮೂಲಕ ವಿಮಾನ, ಹೋಟೆಲ್ ಮತ್ತು ಬಸ್ ಬುಕಿಂಗ್ ಸೇವೆಗಳನ್ನು ಅತ್ಯಂತ ಸುಲಭವಾಗಿ ಒದಗಿಸುತ್ತಾ ಗ್ರಾಹಕರ ವಿಶ್ವಾಸ ಗಳಿಸಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular