HomeBeautyಕೈಗಳ ಅಂದ ಹೆಚ್ಚಿಸಲು ಮನೆಯಲ್ಲೇ ಮಾಡಿ ʼಮ್ಯಾನಿಕ್ಯೂರ್‌ʼ

ಕೈಗಳ ಅಂದ ಹೆಚ್ಚಿಸಲು ಮನೆಯಲ್ಲೇ ಮಾಡಿ ʼಮ್ಯಾನಿಕ್ಯೂರ್‌ʼ

ಉಗುರುಗಳನ್ನು ಕತ್ತರಿಸಿ ಅದನ್ನು ಶುಚಿಯಾಗಿ, ಆಕರ್ಷಕವಾಗಿ ಇಡುವುದು ಒಂದು ಕಲೆ. ಇಲ್ಲಿ ನಾವು ಬಿಳಿ ಬಣ್ಣದ ಉಗುರಿನ ಸೌಂದರ್ಯ ಪಡೆಯುವುದು ಹೇಗೆ ಅಂತ ವಿವರಿಸಿದ್ದೇವೆ ನೋಡಿ.

* ಎರಡು ಪಾತ್ರೆಯಲ್ಲಿ ಉಗುರು ಬೆಚ್ಚಗಿನ ನೀರು ಹಾಗೂ ಅದಕ್ಕೆ 1 ಚಮಚ ಉಪ್ಪು ಹಾಕಿ ಆ ನೀರಿನಲ್ಲಿ ಕೈಯನ್ನು ಇಳಿಬಿಟ್ಟು 10 ನಿಮಿಷ ರಿಲ್ಯಾಕ್ಸ್ ಆಗಿ. ಕಾಲನ್ನು ಬಕೆಟ್ ನೀರಿನಲ್ಲಿ ಇಳಿಬಿಟ್ಟು ಕೂರಿ.

* ನಂತರ ನಿಂಬೆ ಹಣ್ಣಿನಿಂದ ಉಗುರುಗಳನ್ನು ತಿಕ್ಕಿ, ನಂತರ ಮತ್ತೆ ಉಗುರು ಬೆಚ್ಚಗಿನ ನೀರಿನಲ್ಲಿ ಕೈ ಮತ್ತು ಕಾಲುಗಳನ್ನು ತೊಳೆಯಿರಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

* ನಂತರ ಟವಲ್‌ ನಿಂದ ಉಗುರುಗಳನ್ನು ಒರೆಸಿ, ನಂತರ ಉಗುರಿಗೆ ಶೇಪ್‌ ಕೊಡಿ.

* ಅದಾದ ನಂತರ ಉಗುರನ್ನು ಆಲೀವ್ ಎಣ್ಣೆ ಅಥವಾ ಬಾದಾಮಿ ಎಣ್ಣೆ, ಹರಳೆಣ್ಣೆಯಿಂದ ಮಸಾಜ್‌ ಮಾಡಿ. ಇಷ್ಟು ಮಾಡಿದರೆ ಉಗುರುಗಳು ಶೈನಿಯಾಗಿರುತ್ತದೆ.

* ಉಗುರಿಗೆ ಉತ್ತಮ ಗುಣ ಮಟ್ಟದ ನೇಲ್‌ ಪಾಲಿಷ್‌ ಹಚ್ಚಿ. ಅಲ್ಲದೆ ನೇಲ್ ಪಾಲಿಷ್‌ ಹಚ್ಚುವ ಮುನ್ನ ಪ್ರೀಮಿಯರ್ ಅಥವಾ ಬೇಸ್‌ ಕೋಟ್‌ ಹಚ್ಚಿ.

* ಆಗಾಗ ನೇಲ್‌ ಪಾಲಿಷ್‌ ಗೆ ಬ್ರೇಕ್‌ ಕೊಟ್ಟು ನೈಸರ್ಗಿಕವಾಗಿ ಇರಿ.

For Latest News Updates, Join Our Whatsapp Community🚩
RELATED ARTICLES

Most Popular