HomeLifestyleಮಾಡಿ ಸವಿಯಿರಿ ಹೆಸರು ಬೇಳೆ 'ಹಲ್ವಾ'

ಮಾಡಿ ಸವಿಯಿರಿ ಹೆಸರು ಬೇಳೆ ‘ಹಲ್ವಾ’

ಬೇಕಾಗುವ ಸಾಮಾಗ್ರಿಗಳು :

ಹೆಸರು ಬೇಳೆ – 1/2 ಕಪ್‌, ಬೆಲ್ಲ – 1/2 ಕಪ್‌,  ಹಾಲು – 2 ಕಪ್‌, ತುಪ್ಪ 1/2 ಕಪ್‌,  ಗೋಡಂಬಿ, ಬದಾಮ್ – 1/2 ಟೇಬಲ್‌ ಸ್ಪೂನ್‌, ಏಲಕ್ಕಿ ಪುಡಿ – 1/2 ಟೀ ಸ್ಪೂನ್‌

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಾಡುವ ವಿಧಾನ :

ಮೊದಲು ಹೆಸರು ಬೇಳೆಯನ್ನ ತೆಗೆದುಕೊಂಡು ಎರಡು ಬಾರಿ ಚೆನ್ನಾಗಿ ತೊಳೆದು ಅದನ್ನ ಬಾಣಲೆಗೆ ಹಾಕಿ ಸಣ್ಣ ಉರಿಯಲ್ಲಿ ಹುರಿದುಕೊಳ್ಳಿ. ಅದರ ಹಸಿ ವಾಸನೆ ಹೋಗಿ ಕಂದು ಬಣ್ಣಕ್ಕೆ ತಿರುಗುತ್ತಿದ್ದಂತೆ ಉರಿಯನ್ನ ಆರಿಸಿ. ಹುರಿದ ಹೆಸರುಕಾಳನ್ನು ಮಿಕ್ಸರ್‌ ಜಾರ್‌ಗೆ ಹಾಕಿ ಪುಡಿ ಮಾಡಿಕೊಳ್ಳಿ.

ಇದರ ಜೊತೆಜೊತೆಗೇ ಮತ್ತೊಂದು ಪಾತ್ರೆಯಲ್ಲಿ ಅರ್ಧ ಕಪ್‌ ಬೆಲ್ಲವನ್ನ ತೆಗೆದುಕೊಂಡು ಅದಕ್ಕೆ ಸ್ವಲ್ಪ ನೀರು ಸಿಂಪಡಿಸಿ ಸಣ್ಣ ಉರಿಯ ಮೇಲಿಟ್ಟು ಬೆಲ್ಲದ ಸಿರಪ್‌ ತಯಾರಿಸಿಟ್ಟುಕೊಳ್ಳಿ. ಈಗ ಸ್ವಲ್ಪ ದಪ್ಪ ತಳದ ಬಾಣಲೆಯನ್ನ ತೆಗೆದುಕೊಂಡು ಅದಕ್ಕೆ ಒಂದು ಟೇಬಲ್‌ ಸ್ಪೂನ್‌ ತುಪ್ಪ ಹಾಕಿ ಗೋಡಂಬಿ ಮತ್ತು ಬದಾಮ್‌ ತುಣುಕುಗಳನ್ನ ಹುರಿದು ತೆಗೆದಿಟ್ಟುಕೊಳ್ಳಿ.

ನಂತರ ಬಾಣಲೆಯಲ್ಲಿ ಉಳಿದಿದ್ದ ತುಪ್ಪಕ್ಕೆ ಇನ್ನೊಂದು ಟೇಬಲ್‌ ಸ್ಪೂನ್ ತುಪ್ಪ ಸೇರಿಸಿ ಅದಕ್ಕೆ ಹೆಸರು ಬೇಳೆಯ ಹಿಟ್ಟನ್ನು ಹಾಕಿ ಹುರಿಯಿರಿ ತುಪ್ಪದೊಂದಿಗೆ ಸೇರಿ ಹೆಸರು ಬೇಳೆಯ ಪುಡಿ ಮಡ್ಡಿಯಾಗುತ್ತಿದ್ದಂತೆ ಅದಕ್ಕೆ ಬಿಸಿ ಹಾಲನ್ನು ಹಾಕಿ ಚನ್ನಾಗಿ ಕಲಕಿ. ಹಾಲಿನಲ್ಲಿ ಹೆಸರು ಬೇಳೆಯ ಹಿಟ್ಟು ಬೇಯುತ್ತಿದ್ದಂತೆ ಉಳಿದ ತುಪ್ಪ ಮತ್ತು ಬೆಲ್ಲದ ಸಿರಪ್‌ನ್ನೂ ಸೇರಿಸಿ ಸಣ್ಣ ಉರಿಯಲ್ಲಿ ಸರಿಯಾಗಿ ತಿರುವಿ.

ಮಿಶ್ರಣ ಸರಿಯಾಗಿ ಬೆಂದಾಗ ಅದು ತುಪ್ಪ ಬಿಡುತ್ತದೆ. ಆಗ ಹಲ್ವಾ ಸಿದ್ಧಗೊಂಡಿದೆ ಎಂದು ಅರ್ಥ. ಸಿದ್ಧಗೊಂಡ ಹಲ್ವಾಕ್ಕೆ ಏಲಕ್ಕಿ ಪುಡಿ ಮತ್ತು ಮೊದಲೇ ಹುರಿದು ಇಟ್ಟುಕೊಂಡಿದ್ದ ಗೋಡಂಬಿ, ಬದಾಮ್‌ ತುಣುಕುಗಳನ್ನ ಸೇರಿಸಿ ತಿರುವಿ ಸರ್ವ್ ಮಾಡಿದರೆ, ರುಚಿ ರುಚಿಯಾದ ಹೆಸರು ಬೇಳೆಯ ಹಲ್ವಾ ಸವಿಯಲು ಸಿದ್ಧ.

For Latest News Updates, Join Our Whatsapp Community🚩
RELATED ARTICLES

Most Popular