HomeRecipiesಬಾಯಲ್ಲಿ ನೀರೂರಿಸುವ ಕಡಲೇಬೀಜ ಉಂಡೆ ಮಾಡಿ ಸವಿಯಿರಿ

ಬಾಯಲ್ಲಿ ನೀರೂರಿಸುವ ಕಡಲೇಬೀಜ ಉಂಡೆ ಮಾಡಿ ಸವಿಯಿರಿ

ಬೇಕಾಗುವ ಸಾಮಾಗ್ರಿಗಳು:

ಕಡಲೇಬೀಜ – 2 ಕಪ್, ಬೆಲ್ಲ – 2 ಕಪ್, ತುಪ್ಪ – 2 ಟೀ ಸ್ಪೂನ್,

ಮಾಡುವ ವಿಧಾನ:

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೊದಲಿಗೆ ಮಧ್ಯಮ ಉರಿಯಲ್ಲಿ ಕಡಲೇಬೀಜವನ್ನು ಚೆನ್ನಾಗಿ ಹುರಿಯಿರಿ. ನಂತರ ಇದನ್ನು ಒಂದು ಬಟ್ಟೆಗೆ ಹಾಕಿ ಆರಿದ ನಂತರ ಅದರ ಸಿಪ್ಪೆಯನ್ನು ತೆಗೆಯಿರಿ. ಬಳಿಕ ಸ್ವಲ್ಪ ಕುಟ್ಟಿ ಪುಡಿ ಮಾಡಿಕೊಳ್ಳಿ.

ನಂತರ ಬಾಣಲೆಗೆ ಬೆಲ್ಲ ಹಾಕಿ ಸ್ವಲ್ಪ ನೀರು ಹಾಕಿ ಕುದಿಸಿ. ಪಾಕ ಆದ ಬಳಿಕ ತುಪ್ಪ ಹಾಕಿ ನಂತರ ಕಡಲೇಬೀಜ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ, ಸ್ಟೌ ಆಫ್ ಮಾಡಿ ಚೆನ್ನಾಗಿ ಮಿಕ್ಸ್ ಮಾಡಿ. ಪಾಕ ಸ್ವಲ್ಪ ಆರಿದ ಮೇಲೆ ಉಂಡೆ ಕಟ್ಟಿದರೆ ಸವಿಯಲು ರುಚಿಯಾದ ಕಡಲೇಬೀಜ ಉಂಡೆ ರೆಡಿ.

For Latest News Updates, Join Our Whatsapp Community🚩
RELATED ARTICLES

Most Popular