HomeLatest Newsಮಾಡಿಕೊಂಡು ಸವಿಯಿರಿ ಆರೋಗ್ಯಕರವಾದ ʼಪಾಲಕ್ʼ ದೋಸೆ

ಮಾಡಿಕೊಂಡು ಸವಿಯಿರಿ ಆರೋಗ್ಯಕರವಾದ ʼಪಾಲಕ್ʼ ದೋಸೆ

ಪಾಲಕ್ ಪನ್ನೀರ್, ಪಾಲಕ್ ಸೊಪ್ಪಿನ ಸಾಂಬಾರು ಮಾಡಿಕೊಂಡು ಸವಿಯುತ್ತಾ ಇರುತ್ತೇವೆ. ಪಾಲಕ್ ಸೊಪ್ಪಿನಿಂದ ರುಚಿಕರವಾದ ದೋಸೆ ಕೂಡ ಮಾಡಿಕೊಂಡು ಸವಿಯಬಹುದು. ಮಾಡುವ ವಿಧಾನ ಹೀಗಿದೆ ನೋಡಿ.

2 ಹಿಡಿಯಷ್ಟು ಪಾಲಕ್ ಸೊಪ್ಪು, 1.5 ಕಪ್ ಅಕ್ಕಿ, ಕಡಲೆಬೇಳೆ-2 ಟೇಬಲ್ ಸ್ಪೂನ್, ಉದ್ದಿನಬೇಳೆ-3 ಟೇಬಲ್ ಸ್ಪೂನ್, ಹಸಿಮೆಣಸು-8, ಕೊತ್ತಂಬರಿ ಬೀಜ-1 ಟೇಬಲ್ ಸ್ಪೂನ್, ಕಾಳುಮೆಣಸು1 ಟೀ ಸ್ಪೂನ್, ಜೀರಿಗೆ -1 ಟೀ ಸ್ಪೂನ್, ಕಾಯಿತುರಿ-1/2 ಕಪ್, ಶುಂಠಿ ತುರಿ-1 ಟೇಬಲ್ ಸ್ಪೂನ್, ಈರುಳ್ಳಿ-1, ಇಂಗು-ಚಿಟಿಕೆ, ಬೆಲ್ಲ-2 ಟೇಬಲ್ ಸ್ಪೂನ್, ಉಪ್ಪು ರುಚಿಗೆ ತಕ್ಕಷ್ಟು, ಎಣ್ಣೆ-ಸ್ವಲ್ಪ, ಹುಣಸೆಹಣ್ಣು-ಲಿಂಬೆಹಣ್ಣಿನ ಗಾತ್ರದಷ್ಟು. (ನೀರಿನಲ್ಲಿ ನೆನೆಸಿಡಿ.).

ಮೊದಲಿಗೆ ಒಂದು ಪಾತ್ರೆಗೆ ಅಕ್ಕಿ, ಉದ್ದಿನಬೇಳೆ, ಕಡಲೆಬೇಳೆಯನ್ನು ಹಾಕಿ ತೊಳೆದು ನೀರು ಹಾಕಿ 5 ಗಂಟೆಗಳ ಕಾಲ ನೆನೆಸಿಡಿ. ನಂತರ ಒಂದು ಮಿಕ್ಸಿ ಜಾರಿಗೆ ನೆನೆಸಿದ ಅಕ್ಕಿ ಬೇಳೆ, ಬೆಲ್ಲ, ಹಸಿಮೆಣಸು, ಕೊತ್ತಂಬರಿ, ಜೀರಿಗೆ, ಕಾಳುಮೆಣಸು, ತೆಂಗಿನಕಾಯಿ ತುರಿ ಹಾಕಿ ರುಬ್ಬಿಕೊಳ್ಳಿ. ನಂತರ ಶುಂಠಿ ಹಾಕಿ ನಯವಾಗಿ ರುಬ್ಬಿಕೊಳ್ಳಿ. ಇದನ್ನು ಒಂದು ಪಾತ್ರೆಗೆ ತೆಗೆದುಕೊಳ್ಳಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 ನಂತರ ಇದಕ್ಕೆ ನೆನೆಸಿಟ್ಟುಕೊಂಡ ಹುಣಸೆಹಣ್ಣಿನ ರಸ ಸೇರಿಸಿ. ನಂತರ ಪಾಲಕ್ ಹಾಗೂ ಈರುಳ್ಳಿಯನ್ನು ಚಿಕ್ಕದ್ದಾಗಿ ಕತ್ತರಿಸಿಕೊಂಡು ಅದನ್ನು ಹಿಟ್ಟಿನ ಮಿಶ್ರಣಕ್ಕೆ ಸೇರಿಸಿ. ನಂತರ ಉಪ್ಪು, ಇಂಗು ಸೇರಿಸಿ ಮಿಶ್ರಣ ಮಾಡಿಕೊಳ್ಳಿ. ದೋಸೆ ಹಿಟ್ಟಿನ ಹದಕ್ಕೆ ಮಾಡಿಕೊಂಡು ತವಾ ಬಿಸಿಯಾದ ಮೇಲೆ ಹಿಟ್ಟಿನ ಮಿಶ್ರಣ ಹಾಕಿ ತೆಳುವಾಗಿ ದೋಸೆ ಮಾಡಿಕೊಳ್ಳಿ.

For Latest News Updates, Join Our Whatsapp Community🚩
RELATED ARTICLES

Most Popular