HomeLifestyleಉಳಿದ ಚಪಾತಿಯಲ್ಲಿ ತಯಾರಿಸಿ ಹೊಸ ರೀತಿಯ ಬ್ರೇಕ್ ಫಾಸ್ಟ್

ಉಳಿದ ಚಪಾತಿಯಲ್ಲಿ ತಯಾರಿಸಿ ಹೊಸ ರೀತಿಯ ಬ್ರೇಕ್ ಫಾಸ್ಟ್

ಪ್ರತಿದಿನ ಬೆಳಗ್ಗೆ ಏನು ತಿಂಡಿ ಮಾಡುವುದು, ಮಾಡಿದ್ದನ್ನೇ ಮತ್ತೆ ಮಾಡಿ ತಿನ್ನಲು ಬೇಜಾರು, ಹೊಸ ತಿನಿಸು ಏನಿದೆ ಎಂದೆಲ್ಲಾ ಯೋಚಿಸುವವವರಿಗೆ ಇಲ್ಲಿದೆ ಹೊಸ ರೀತಿಯ ಬ್ರೇಕ್ ಫಾಸ್ಟ್.

ಇದನ್ನು ಮಾಡಲು ಚಪಾತಿ ಉಳಿದಿದ್ದರೆ ಸಾಕು. ಫಟಾಫಟ್ ಚಪಾತಿ ಉಪ್ಪಿಟ್ಟು ತಯಾರಿಸುವ ವಿಧಾನ ಇಲ್ಲಿದೆ.

ಬೇಕಾಗುವ ಸಾಮಾಗ್ರಿಗಳು

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತಂಗಳು ಚಪಾತಿ-5
ಈರುಳ್ಳಿ-1
ಹಸಿ ಮೆಣಸಿನಕಾಯಿ-2
ಟೊಮ್ಯಾಟೋ-1
ಒಗ್ಗರಣೆಗೆ ಉದ್ದಿನ ಬೇಳೆ, ಜೀರಿಗೆ, ಕಡಲೇ ಬೇಳೆ ತಲಾ 1 ಚಮಚ, ಕರಿಬೇವು ಸ್ವಲ್ಪ, ಕೊತ್ತಂಬರಿ ಸೊಪ್ಪು ಸ್ವಲ್ಪ,
ಎಣ್ಣೆ-4 ಚಮಚ
ಉಪ್ಪು ರುಚಿಗೆ ತಕ್ಕಷ್ಟು

ಮಾಡುವ ವಿಧಾನ

ಚಪಾತಿಗಳನ್ನು ಮುರಿದು ಚಿಕ್ಕ ಚಿಕ್ಕ ತುಂಡುಗಳನ್ನು ಮಾಡಿಡಿ. ಕಾದ ಎಣ್ಣೆಗೆ ಕರಿಬೇವು, ಜೀರಿಗೆ, ಹಸಿ ಮೆಣಸಿನಕಾಯಿ, ಉದ್ದಿನ ಬೇಳೆ, ಕಡಲೇ ಬೇಳೆಯ ಒಗ್ಗರಣೆ ಮಾಡಿ.

ಹೆಚ್ಚಿದ ಈರುಳ್ಳಿ ಮತ್ತು ಟೊಮ್ಯಾಟೋ ಹಾಕಿ ಹುರಿಯಿರಿ. ನಂತರ ಮೂರು ಕಪ್‌ ನೀರು, ಉಪ್ಪು ಮತ್ತು ಕೊತ್ತಂಬರಿ ಸೊಪ್ಪು ಹಾಕಿ ಕುದಿಸಿ. ನಂತರ ಇದಕ್ಕೆ ಚಪಾತಿ ತುಂಡುಗಳನ್ನು ಹಾಕಿ ಎಂಟು ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಕುದಿಸಿದರೆ ಚಪಾತಿ ಉಪ್ಪಿಟ್ಟು ರೆಡಿ.

For Latest News Updates, Join Our Whatsapp Community🚩
RELATED ARTICLES

Most Popular