HomeAutoಎಲೆಕ್ಟ್ರಿಕ್ ರೂಪದಲ್ಲಿಯೂ ಧೂಳೆಬ್ಬಿಸಲು ಬರಲಿದೆ ಮಹೀಂದ್ರಾ ಥಾರ್...!

ಎಲೆಕ್ಟ್ರಿಕ್ ರೂಪದಲ್ಲಿಯೂ ಧೂಳೆಬ್ಬಿಸಲು ಬರಲಿದೆ ಮಹೀಂದ್ರಾ ಥಾರ್…!

ಆಗಸ್ಟ್ 15ರಂದು ದಕ್ಷಿಣ ಆಫ್ರಿಕಾದಲ್ಲಿ ಮೊದಲ ಪ್ರವೇಶಕ್ಕೆ ಸಿದ್ಧವಾಗಿರುವ ಮಹೀಂದ್ರಾ ಥಾರ್, ಅದಕ್ಕೂ ಮುನ್ನ ಎಲೆಕ್ಟ್ರಿಕ್ ರೂಪದಲ್ಲಿ ಧೂಳೆಬ್ಬಿಸಲಿದೆ. ಥಾರ್ ಎಲೆಕ್ಟ್ರಿಕ್ ಎಸ್ ಯುವಿಯ ಟೀಸರ್ ಬಿಡುಗಡೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.

ಟೀಸರ್ ಪ್ರಕಾರ ಥಾರ್ ಎಲೆಕ್ಟ್ರಿಕ್ ಎಸ್ ಯುವಿ ಕಾನ್ಸೆಪ್ಟ್ ನ್ನು ಥಾರ್.ಇ ಎಂದು ಕರೆಯಲಾಗುತ್ತಿದೆ. ಮುಂಬರುವ ಮಹೀಂದ್ರ ಥಾರ್.ಇ ಸ್ಕ್ವಾರಿಶ್ ಹೆಡ್ ಲ್ಯಾಂಪ್ ಗಳು ಮತ್ತು ಟೈಲ್ ಲ್ಯಾಂಪ್ ಗಳನ್ನು 3D ಸ್ಟೈಲಿಂಗ್ ನೊಂದಿಗೆ ಹೊಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಲ್ಲದೇ ಮಾದರಿಯು ಬೋಲ್ಡ್ ಲುಕಿಂಗ್ ಫ್ರಂಟ್ ಮತ್ತು ರಿಯರ್ ಬಂಪರ್ ಗಳೊಂದಿಗೆ ಪ್ರಮುಖವಾಗಿ ಕಾಣುವ ಟೋ ಹುಕ್ ಗಳೊಂದಿಗೆ ಬರಲಿದೆ ಎಂಬ ನಿರೀಕ್ಷೆ ಇದೆ.

ಥಾರ್.ಇ ಕಾನ್ಸೆಪ್ಟ್ ಕ್ವಾಡ್ ಮೋಟಾರ್ ಸೆಟಪ್ ನೊಂದಿಗೆ ಪ್ರತಿ ಚಕ್ರವನ್ನು ಚಾಲನೆ ಮಾಡುವ ಪ್ರತಿ ಮೋಟಾರ್ ನೊಂದಿಗೆ ಬರುತ್ತದೆ ಎಂದು ಹೇಳಲಾಗುತ್ತಿದೆ.

For Latest News Updates, Join Our Whatsapp Community🚩
RELATED ARTICLES

Most Popular