HomeLatest Newsಖ್ಯಾತ ನಟ ಮಹೇಶ್ ಮಂಜ್ರೇಕರ್ ಪತ್ನಿ ಮೇಧಾಗೆ ಕ್ಯಾನ್ಸರ್: ಭಾವನಾತ್ಮಕ ಪೋಸ್ಟ್ ಹಂಚಿಕೊಂಡ ನಟಿ

ಖ್ಯಾತ ನಟ ಮಹೇಶ್ ಮಂಜ್ರೇಕರ್ ಪತ್ನಿ ಮೇಧಾಗೆ ಕ್ಯಾನ್ಸರ್: ಭಾವನಾತ್ಮಕ ಪೋಸ್ಟ್ ಹಂಚಿಕೊಂಡ ನಟಿ

ಮರಾಠಿ ಚಿತ್ರರಂಗದ ಖ್ಯಾತ ನಟಿ ಹಾಗೂ ನಿರ್ದೇಶಕ-ನಟ ಮಹೇಶ್ ಮಂಜ್ರೇಕರ್ ಅವರ ಪತ್ನಿ ಮೇಧಾ ಮಂಜ್ರೇಕರ್ (೫೮) ಅವರು ತಮಗೆ ಕ್ಯಾನ್ಸರ್ ಇರುವುದು ದೃಢಪಟ್ಟಿದೆ ಎಂಬ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಭಾನುವಾರ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಆಸ್ಪತ್ರೆಯ ಕೆಲವು ಚಿತ್ರಗಳೊಂದಿಗೆ ಅತ್ಯಂತ ಭಾವನಾತ್ಮಕ ಬರಹವನ್ನು ಹಂಚಿಕೊಳ್ಳುವ ಮೂಲಕ ಈ ಕಠಿಣ ಜರ್ನಿಯ ಬಗ್ಗೆ ಅವರು ಬರೆದುಕೊಂಡಿದ್ದಾರೆ.

ತಮ್ಮ ಚಿಕಿತ್ಸೆಯ ಒಂದು ಪ್ರಮುಖ ಹಂತ ಪೂರ್ಣಗೊಂಡಿರುವ ಸಂದರ್ಭದಲ್ಲಿ ಪೋಸ್ಟ್ ಮಾಡಿರುವ ಅವರು, ಜೀವನವನ್ನು ಶಾಶ್ವತವಾಗಿ ಬದಲಾಯಿಸುವ ಕೆಲವು ಪ್ರಯಾಣಗಳಲ್ಲಿ ಇದು ಕೂಡ ಒಂದು ಎಂದು ಕರೆದಿದ್ದಾರೆ. ಈ ಕಷ್ಟದ ಸಮಯದಲ್ಲಿ ತಮಗೆ ಎದುರಾದ ರೋಗ, ಸರ್ಜರಿ, ಕೀಮೋಥೆರಪಿ ಅಥವಾ ರೇಡಿಯೇಶನ್ ಬಗ್ಗೆ ಯೋಚಿಸುವ ಬದಲು, ತಮಗೆ ಧೈರ್ಯ ತುಂಬಿ ಜೊತೆಗೆ ನಿಂತವರನ್ನು ನೆನೆಯಲು ಇಷ್ಟಪಡುವುದಾಗಿ ಅವರು ಹೇಳಿದ್ದಾರೆ.

ನನ್ನನ್ನು ಮುನ್ನಡೆಸಿದ್ದು ಅದೃಶ್ಯ ಶಕ್ತಿ: ಜನರು ನನ್ನನ್ನು ಈ ಕಷ್ಟದ ಪರಿಸ್ಥಿತಿಯನ್ನು ಹೇಗೆ ಎದುರಿಸಿದ್ದೀರಿ ಎಂದು ಕೇಳುತ್ತಾರೆ. ಆದರೆ ನಾನು ಈ ಹಾದಿಯಲ್ಲಿ ಎಂದಿಗೂ ಒಂಟಿಯಾಗಿರಲಿಲ್ಲ. ನಾನು ಹೆಜ್ಜೆ ಇಡಲು ಸಾಧ್ಯವಾಗದಿದ್ದಾಗಲೆಲ್ಲಾ ಯಾರೋ ಒಬ್ಬರು ಬಂದು ನನ್ನ ಜೊತೆಯಾಗುತ್ತಿದ್ದರು. ಇವೆಲ್ಲವೂ ಕಾಕತಾಳೀಯವಲ್ಲ, ನನ್ನ ಕೈಹಿಡಿದು ನಡೆಸಿದ ದೇವರ ಮಾರ್ಗಗಳು ಎಂದು ಮೇಧಾ ನೆನೆದಿದ್ದಾರೆ. ದೇವರು ನಮಗೆ ನೇರವಾಗಿ ಬರುವುದಿಲ್ಲ, ವೈದ್ಯರು, ನರ್ಸ್‌ಗಳು, ಕುಟುಂಬಸ್ಥರು ಮತ್ತು ಸ್ನೇಹಿತರ ರೂಪದಲ್ಲಿ ಬಂದು ನಮಗೆ ಆಶೀರ್ವಾದವಾಗುತ್ತಾರೆ ಎಂಬುದನ್ನು ಈ ಜರ್ನಿ ಕಲಿಸಿದೆ ಎಂದು ಅವರು ಭಾವುಕರಾಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಕ್ಕಳು ಮತ್ತು ಪತಿ ಮಹೇಶ್‌ಗೆ ಧನ್ಯವಾದ: ತಮ್ಮ ಚಿಕಿತ್ಸೆಯ ಅವಧಿಯಲ್ಲಿ ನೆರಳಾಗಿ ನಿಂತ ಹೆಣ್ಣುಮಕ್ಕಳಾದ ಸಾಯಿ ಮಂಜ್ರೇಕರ್ ಮತ್ತು ಗೌರಿ ಇಂಗಾವಲೆ ಅವರಿಗೆ ವಿಶೇಷ ಧನ್ಯವಾದ ತಿಳಿಸಿರುವ ಮೇಧಾ, ತಾಯಿಯಾದವಳು ಯಾವಾಗಲೂ ಮಕ್ಕಳ ಕೈಹಿಡಿಯುತ್ತೇನೆ ಎಂದುಕೊಳ್ಳುತ್ತಾಳೆ, ಆದರೆ ಈ ಪ್ರಯಾಣದಲ್ಲಿ ಮಕ್ಕಳು ಅಮ್ಮನ ಕೈಹಿಡಿದು ಮುನ್ನಡೆಸುತ್ತಾರೆ ಎಂಬುದನ್ನು ನನ್ನ ಹೆಣ್ಣುಮಕ್ಕಳು ಸಾಬೀತುಪಡಿಸಿದ್ದಾರೆ ಎಂದಿದ್ದಾರೆ. ಇದೇ ವೇಳೆ ತಮ್ಮ ಕಠಿಣ ದಿನಗಳಲ್ಲಿ ಜೊತೆಯಾಗಿ ನಿಂತ ಪತಿ ಮಹೇಶ್ ಮಂಜ್ರೇಕರ್ ಅವರಿಗೂ ಧನ್ಯವಾದ ಅರ್ಪಿಸಿದ್ದಾರೆ.

ಸ್ನೇಹಿತರ ಅಪಾರ ಪ್ರೀತಿ: ಚಿಕಿತ್ಸೆಯ ಕಾರಣದಿಂದ ತಮಗೆ ಹಸಿವಿಲ್ಲದಿದ್ದಾಗ ಸ್ನೇಹಿತರು ತಮಗಿಷ್ಟವಾದ ಧೋಕ್ಲಾ, ಇಡ್ಲಿ, ಪಾನಿಪುರಿಗಳನ್ನು ಪ್ರೀತಿಯಿಂದ ತಂದುಕೊಡುತ್ತಿದ್ದರು. ಒಬ್ಬ ಸ್ನೇಹಿತೆಯಂತೂ ಕ್ರ್ಯಾನ್‌ಬೆರಿ ಜ್ಯೂಸ್ ಅನ್ನು ಶಾಂಪೇನ್ ಗ್ಲಾಸ್‌ನಲ್ಲಿ ಕುಡಿಯಲು ನೀಡಿ ನನ್ನ ಆಲೋಚನಾ ಶೈಲಿಯನ್ನೇ ಬದಲಾಯಿಸಿದ್ದರು ಎಂದು ಕಷ್ಟದ ದಿನಗಳಲ್ಲೂ ಖುಷಿ ತಂದ ಸಣ್ಣ ಸಣ್ಣ ಕ್ಷಣಗಳನ್ನು ನೆನಪಿಸಿಕೊಂಡಿದ್ದಾರೆ. ಮೇಧಾ ಅವರ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಮರಾಠಿ ಚಿತ್ರರಂಗದ ಗಣ್ಯರಾದ ಸ್ವಪ್ನಿಲ್ ಜೋಶಿ, ನೀನಾ ಕುಲಕರ್ಣಿ ಸೇರಿದಂತೆ ಹಲವರು ಅವರು ಶೀಘ್ರವಾಗಿ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ. ಮೇಧಾ ಮಂಜ್ರೇಕರ್ ಅವರು ಹಲವು ಪ್ರಸಿದ್ಧ ಮರಾಠಿ ಹಾಗೂ ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ.

https://www.instagram.com/p/Dar4Sb4EfBa

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular