HomeLive NewsSHOCKING: ತಂದೆ-ತಾಯಿ ಮನೆಯಲ್ಲಿ ಶವವಾಗಿ ಪತ್ತೆ: ರೈಲ್ವೆ ಹಳಿ ಮೇಲೆ ಇಬ್ಬರು ಮಕ್ಕಳ ಮೃತದೇಹ ಪತ್ತೆ:...

SHOCKING: ತಂದೆ-ತಾಯಿ ಮನೆಯಲ್ಲಿ ಶವವಾಗಿ ಪತ್ತೆ: ರೈಲ್ವೆ ಹಳಿ ಮೇಲೆ ಇಬ್ಬರು ಮಕ್ಕಳ ಮೃತದೇಹ ಪತ್ತೆ: ಒಂದೇ ಕುಟುಂಬದ ನಾಲ್ವರು ನಿಗೂಢ ಸಾವು!

ನಾಂದೇಡ್: ಒಂದೇ ಕುಟುಂಬದ ನಾಲ್ವರು ಎರಡು ಪ್ರತ್ಯೇಕ ಸ್ಥಳಗಳಲ್ಲಿ ಒಂದೇ ದಿನ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ. ತಂದೆ-ತಾಯಿ ಮನೆಯಲ್ಲಿ ಹಾಗೂ ಇಬ್ಬರು ಮಕ್ಕಳು ರೈಲ್ವೆ ಹಳಿಗಳ ಮೇಲೆ ಶವವಾಗಿ ಪತ್ತೆಯಾಗಿದ್ದು, ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.

ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಮುದ್ಬೇಡ್ ತಹಶಿಲ್ ನ ಜವಾಲಾ ಮುರಾರ್ ನಲ್ಲಿ ಈ ಘಟನೆ ನಡೆದಿದೆ. ತಂದೆ-ತಾಯಿ ಮನೆಯಲ್ಲಿ ಸಾವನ್ನಪ್ಪಿದ್ದರೆ, ಅವರ ಇಬ್ಬರು ಪುತ್ರರು ರೈಲ್ವೆ ಹಳಿ ಮೇಲೆ ಶವವಾಗಿ ಪತ್ತೆಯಾಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಮ್ರ‍ೇಶ್ ಸೋನಾಜಿ ಲಾಖೆ (51) ಹಾಗೂ ಪತ್ನಿ ರಾಧಾಬಾಯಿ ಲಾಖೆ (45) ಹಾಗೂ ಮಕ್ಕಳಾದ ಉಮೇಶ್ ಲಾಖೆ ಹಾಗೂ ಬಜರಂಗ ಲಾಖೆ ಮೃತ ದುರ್ದೈವಿಗಳು. ದಂಪತಿ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮಕ್ಕಳ ಮೃತದೇಹವನ್ನು ರೈಲ್ವೆ ಹಳಿಯಿಂದ ಹೊರತೆಗೆಯಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಮಕ್ಕಳು ಚಲಿಸುವ ರೈಲಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಆದರೆ ತಂದೆ-ತಾಯಿ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ತನಿಖೆ ಬಳಿಕವೇ ಸಾವಿನ ಬಗ್ಗೆ ಸ್ಪಷ್ಟ ಮಾಹಿತಿ ಸಿಗಲಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular