HomeKarnatakaಗಡಿ ವಿವಾದದ ಬಳಿಕ ಮಹದಾಯಿ ವಿಚಾರದಲ್ಲಿ ಮೂಗು ತೂರಿಸಿದ ಮಹಾರಾಷ್ಟ್ರ

ಗಡಿ ವಿವಾದದ ಬಳಿಕ ಮಹದಾಯಿ ವಿಚಾರದಲ್ಲಿ ಮೂಗು ತೂರಿಸಿದ ಮಹಾರಾಷ್ಟ್ರ

ಮಹದಾಯಿ ನದಿ ನೀರು ಹಂಚಿಕೆ ವಿಚಾರದಲ್ಲಿ ಗೋವಾ ಮತ್ತೆ ತಗಾದೆ ತೆಗೆದಿದೆ. ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರಿಗೆ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಬೆಂಬಲ ನೀಡಿದ್ದಾರೆ.

ಗಡಿ ವಿವಾದ ಬಳಿಕ ಮಹದಾಯಿ ವಿಚಾರದಲ್ಲಿ ಮಹಾರಾಷ್ಟ್ರ ಮೂಗು ತೂರಿಸಿದೆ. ಮಹಾರಾಷ್ಟ್ರದ ತಿಲಾರಿ ಅಣೆಕಟ್ಟು ಯೋಜನೆ ವಿಚಾರವಾಗಿ ನಿನ್ನೆ ಮುಂಬೈನಲ್ಲಿ ಅಂತರರಾಜ್ಯ ನಿಯಂತ್ರಣ ಮಂಡಳಿ ಸಭೆ ನಡೆಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಭೆಯಲ್ಲಿ ಮಹಾರಾಷ್ಟ್ರ ಸಿಎಂ ಏಕನಾಥ ಶಿಂದೆ, ಡಿಸಿಎಂ ದೇವೇಂದ್ರ ಫಡ್ನವಿಸ್, ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮತ್ತು ಸಚಿವ ಸುಭಾಷ್ ಭಾಗವಹಿಸಿದ್ದು, ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯಲ್ಲಿರುವ ಕಿಲಾರಿ ಅಣೆಕಟ್ಟು ಯೋಜನೆಯ ನೆಪದಲ್ಲಿ ಮಹಾದಾಯಿ ಕುರಿತಾಗಿ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ.

ಮಹದಾಯಿ ಹೋರಾಟದಲ್ಲಿ ಶಿಂದೆ ಖ್ಯಾತೆ ತೆಗೆದಿದ್ದಾರೆ. ಮಹದಾಯಿ ಹೋರಾಟದಲ್ಲಿ ಗೋವಾ ಜೊತೆ ಇರುತ್ತೇವೆ ಎಂದು ಹೇಳಿದ್ದಾರೆ. ಈ ಮೂಲಕ ಗಡಿ ವಿವಾದದ ಬಳಿಕ ಮಹಾರಾಷ್ಟ್ರ ಮಹದಾಯಿ ವಿಚಾರದಲ್ಲಿ ಮೂಗು ತೂರಿಸಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular