HomeLatest Newsನನ್ನ ಶಿಫ್ಟ್ ಮುಗಿಯಿತು ಎಂದು ಮಹಾ ಡಿಸಿಎಂ ಅವರನ್ನು ಅರ್ಧದಲ್ಲೇ ಬಿಟ್ಟು ಹೋದ ಪೈಲಟ್: ಪೇಚಿಗೆ...

ನನ್ನ ಶಿಫ್ಟ್ ಮುಗಿಯಿತು ಎಂದು ಮಹಾ ಡಿಸಿಎಂ ಅವರನ್ನು ಅರ್ಧದಲ್ಲೇ ಬಿಟ್ಟು ಹೋದ ಪೈಲಟ್: ಪೇಚಿಗೆ ಸಿಲುಕಿದ ಏಕನಾಥ್ ಶಿಂಧೆ ಪರದಾಟ

ಮುಂಬೈ: ಮಹಾರಾಷ್ಟ್ರ ಡಿಸಿಎಂ ಏಕನಾಥ್ ಶಿಂಧೆ ಅವರ ಖಾಸಗಿ ವಿಮಾನ ಪೈಲಟ್ ಅರ್ಧದಲ್ಲಿಯೇ ಅವರನ್ನು ಬಿಟ್ಟು ಶಿಫ್ಟ್ ಮುಗಿದಿದೆ ಎಂದು ಹೋದ ಘಟನೆ ಬೆಳಕಿಗೆ ಬಂದಿದೆ.

ಡಿಸಿಎಂ ಏಕನಾಥ್ ಶಿಂಧೆ ಶುಕ್ರವಾರ ಜಲಗಾಂವ್ ನಿಂದ ಮುಂಬೈಗೆ ಪ್ರಯಣಿಸಬೇಕಿತ್ತು. ಆದರೆ ವಿಮಾನದ ಪೈಲಟ್ ತನ್ನ ಶಿಫ್ಟ್ ಅವಧಿ ಮುಗಿದಿದೆ ಎಂದು ಅವರನ್ನು ಅರ್ಧದಲ್ಲೇ ಬಿಟ್ಟು ಹೋಗಿದ್ದಾರೆ. ಇದರಿಂದ ಪೇಚಿಗೆ ಸಿಲುಕಿದ ಡಿಸಿಎಂ ವಿಮಾನ ಪ್ರಯಾಣಕ್ಕೆ ಪರದಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಳಿಕ ವಿಮಾನ ಪ್ರಯಾಣವನ್ನು ಮೊಟಕುಗೊಳಿಸಿದ ಡಿಸಿಎಂ ಏಕನಾಥ್ ಶಿಂಧೆ ರಸ್ತೆ ಮಾರ್ಗದ ಮೂಲಕ ಮುಂಬೈಗೆ ಪ್ರಯಾಣಿಸಿದರು. ಈ ವೇಳೆ ಸಚಿವ ಗಿರೀಶ್ ಮಹಾಜನ್ ಕೂಡ ಉಪಸ್ಥಿತಿತ್ತರಿದ್ದರು.

ಪಾಲ್ಖಿ ಯಾತ್ರೆಯಲ್ಲಿ ಭಾಗವಹಿಸಿ, ಸಂತ ಮುಕ್ತಾಯಿ ದೇವಸ್ಥಾನಕ್ಕೆ ಭೇಟಿ ನೀಡಿ, ಅಲ್ಲಿಂದ ಶಿಂಧೆ ಮತ್ತು ಇತರ ಸಚಿವರು, ಅಧಿಕಾರಿಗಳು ರಾತ್ರಿ 9:15ಕ್ಕೆ ಜಲಗಾಂವ್ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಆದರೆ ಪೈಲಟ್ ತನ್ನ ಕೆಲಸದ ಸಮಯ ಮುಗಿದಿದೆ ಎಂದು ವಿಮಾನಯಾನಕ್ಕೆ ನಿರಾಕರಿಸಿದ್ದಾರೆ. ನನ್ನ ಶಿಫ್ಟ್ ಅವಧಿ ಮುಗಿದಿರುವುದರಿಂದ ಮತ್ತೆ ಹಾರಾಟ ನಡೆಸಲು ಹೊಸದಾಗಿ ಅನುಮತಿ ಪಡೆಯಲು ಕೆಲ ಸಮಯ ಬೇಕು ಎಂದಿದ್ದಾರೆ. ಮೂಲಗಳ ಪ್ರಕಾರ ಪೈಲಟ್ ಟೇಕಾಫ್ ಮಾಡಲು ನಿರಾಕರಿಸಲು ಅನಾರೋಗ್ಯ ಕಾರಣವೂ ಇತ್ತು ಎನ್ನಲಾಗಿದೆ.

ಡಿಸಿಎಂ ಜೊತೆಗಿದ್ದ ಇತರ ಸಚಿವರು, ಅಧಿಕಾರಿಗಳು ಪೈಲಟ್ ಮನವೊಲಿಸಿ ಬಳಿಕ ವಿಮಾನದಲ್ಲಿ ಮುಂಬೈಗೆ ತೆರಳಿದ್ದಾರೆ ಎಂದು ತಿಳಿದುಬಂದಿದೆ.

For Latest News Updates, Join Our Whatsapp Community🚩
RELATED ARTICLES

Most Popular