HomeTourismಒಮ್ಮೆ ದರ್ಶನ ಮಾಡಿ ಬನ್ನಿ ಶಕ್ತಿ ಸ್ಥಳ ಕೊಲ್ಲಾಪುರದ ಮಹಾಲಕ್ಷ್ಮಿ

ಒಮ್ಮೆ ದರ್ಶನ ಮಾಡಿ ಬನ್ನಿ ಶಕ್ತಿ ಸ್ಥಳ ಕೊಲ್ಲಾಪುರದ ಮಹಾಲಕ್ಷ್ಮಿ

ಮಹಾರಾಷ್ಟ್ರದಲ್ಲಿರುವ ಕೊಲ್ಲಾಪುರದ ಅತಿ ಪ್ರಸಿದ್ಧ ಸ್ಥಳಗಳಲ್ಲಿ ‘ಮಹಾಲಕ್ಷ್ಮಿ’ಅಥವಾ ‘ಅಂಬಾಬಾಯಿ ದೇವಾಲಯ’ವೂ ಒಂದು. ಪುರಾಣೋಕ್ತ 108 ಶಕ್ತಿ ಸ್ಥಳಗಳಲ್ಲಿ ಇದೂ ಒಂದು. ಕ್ರಿ.ಶ. 7 ನೆಯ ಶತಮಾನದಲ್ಲಿ ಚಾಲುಕ್ಯರ ರಾಜ, ‘ಕರ್ಣದೇವ’ನು ಈ ದೇವಾಲಯ ನಿರ್ಮಾಣವನ್ನು ಪ್ರಾರಂಭಿಸಿದನು. ಮುಂದೆ ಕ್ರಿ.ಶ. ಒಂಭತ್ತನೆಯ ಶತಮಾನದಲ್ಲಿ ‘ಶಿಲಾಹಾರ ಯಾದವ ರಾಜರು’ ಇದನ್ನು ಇನ್ನಷ್ಟು ಅಭಿವೃದ್ಧಿ ಪಡಿಸಿದರು.

40 ಕಿಲೋ ತೂಗುವ ಇಲ್ಲಿಯ ಮಹಾಲಕ್ಷ್ಮಿ ಸ್ವಯಂಭೂ ಮೂರ್ತಿಯಾಗಿದ್ದು , ಇದನ್ನು ಯಾವುದೇ ಶಿಲ್ಪ ಕೃತಿಯಂತೆ ಕಟೆಯದೇ ಮೂಲ ರೂಪದಲ್ಲಿಯೇ ಉಳಿಸಿಕೊಳ್ಳಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಹಾವಿಷ್ಣುವೇ ಮಹಾಲಕ್ಷ್ಮಿಯ ರೂಪದಲ್ಲಿ ಇಲ್ಲಿ ನೆಲೆಸಿರುವುದರಿಂದ ಈ ಕ್ಷೇತ್ರವನ್ನು ‘ದಕ್ಷಿಣ ಕಾಶಿ’ಯೆಂದೂ ಕರೆಯುವ ವಾಡಿಕೆಯಿದೆ. ದೇವಿಗೆ ಸಮರ್ಪಣೆ ಮಾಡಲು ‘ಕಮಲ ಪುಷ್ಪ’ಗಳು ಇಲ್ಲಿ ಸಿಗುತ್ತವೆ.

ಬೆಂಗಳೂರಿಂದ ಕೊಲ್ಲಾಪುರಕ್ಕೆ 796 ಕಿಲೋ ಮೀಟರ್ ಇದ್ದು, ಇಲ್ಲಿಗೆ ರೈಲಿನ ವ್ಯವಸ್ಥೆ ಚೆನ್ನಾಗಿದೆ. ಅಲ್ಲಿಂದ ನಾಲ್ಕು ಕಿಲೋ ಮೀಟರ್ ದೂರವಿರುವ ದೇವಸ್ಥಾನಕ್ಕೆ ಹೋಗಲು ಟ್ಯಾಕ್ಸಿ – ಆಟೋಗಳ ವ್ಯವಸ್ಥೆ ಇದೆ.

For Latest News Updates, Join Our Whatsapp Community🚩
RELATED ARTICLES

Most Popular