HomeIndiaBIG NEWS: ಬಾವಿ ಅಗೆಯುವಾಗ ದುರಂತ: ಮಣ್ಣು ಕುಸಿದು ಐವರು ದುರ್ಮರಣ

BIG NEWS: ಬಾವಿ ಅಗೆಯುವಾಗ ದುರಂತ: ಮಣ್ಣು ಕುಸಿದು ಐವರು ದುರ್ಮರಣ

ಅಜಯ್ ಗಢ: ಬಾವಿ ಅಗೆಯುವಾಗ ಮಣ್ಣು ಕುಸಿದು ಬಿದ್ದ ಪರಿಣಾಮ ಐವರು ಕಾರ್ಮಿಕರು ಮೃತಪಟ್ಟಿರುವ ದಾರುಣ ಘಟನೆ ಮಧ್ಯಪ್ರದೇಶ ಪನ್ನಾದ ಅಜಯ್‌ಗಢ್ ತೆಹಸಿಲ್‌ನ ಬಿಹಾರಪೂರ್ವ ಗ್ರಾಮ ಪಂಚಾಯತ್‌ನಲ್ಲಿ ನಡೆದಿದೆ.

ಬಾವಿ ನಿರ್ಮಾಣದ ವೇಳೆ ಏಕಾಏಕಿ ಮಣ್ಣು ಕುಸಿತವಾಗಿದೆ. ಅವಸೇಷಗಳ ಅಡಿಯಲ್ಲಿ ಸಿಲುಕಿ ಐವರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಕಳೆದ 10 ದಿನಗಳಿಂದ ಬಾವಿ ನಿರ್ಮಾಣ ಕಾರ್ಯ ನಡೆಯುತ್ತಿತ್ತು. ಅಜಯ್‌ಗಢ ಜಿಲ್ಲೆಯ ಬಿಹಾರಪುರ್ವಾ ಗ್ರಾಮದ ನಯಪೂರ್ವ್ವಾದಲ್ಲಿರುವ ಬಿನ್ನು ಅಹಿರ್ವಾರ್ ಅವರ ಹೊಲದಲ್ಲಿ ಬಾವಿ ನಿರ್ಮಾಣ ಕೆಲಸ ಮಾಡಲಾಗುತ್ತಿತ್ತು. ಇಂದು ಕೂಡ ಎಂದಿನಂತೆ ಕಾರ್ಮಿಕರು ಬಾವಿ ಅಗೆಯುತ್ತಿದ್ದಾಗ ಬೆಳಿಗ್ಗೆ 11ಗಂಟೆಯ ಸುಮಾರಿಗೆ ಬಾವಿಯ ಹೂಳು ಇದ್ದಕ್ಕಿದ್ದಂತೆ ಕುಸಿದಿದೆ. ಈ ಅವಘಡದ ಸಮಯದಲ್ಲಿ ಐದು ಕಾರ್ಮಿಕರು ಬಾವಿಯೊಳಗೆ ಕೆಲಸ ಮಾಡುತ್ತಿದ್ದರು. ಇಬ್ಬರು ನೀರು ಕುಡಿಯಲು ಮೇಲಕ್ಕೆ ಬಂದಿದ್ದರು. ಐವರು ಸಾವನ್ನಪ್ಪಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಚುನ್ನು ಯಾದವ್, ರಾಜ್‌ಕುಮಾರ್ ಯಾದವ್, ಆಶಿಶ್ ಯಾದವ್ ಮತ್ತು ಚುನ್ವಾಡ್ ಪಾಲ್ ಸೇರಿದಂತೆ ಐದು ಕಾರ್ಮಿಕರು ಮೃತಪಟ್ಟಿದ್ದಾರೆ. ಘಟನೆ ಬೆನ್ನಲ್ಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಕಂದಾಯ ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ರಾಜ್‌ಕುಮಾರ್ ಯಾದವ್ ಮತ್ತು ಇನ್ನೊಬ್ಬ ಕಾರ್ಮಿಕನ ಶವಗಳು ಪತ್ತೆಯಾಗಿದ್ದು, ಉಳಿದ ಕಾರ್ಮಿಕರಿಗಾಗಿ ಶೋಧ ನಡೆಸಲಾಗುತ್ತಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular