HomeIndiaSHOCKING: ಸಂಬಂಧಿಯಿಂದಲೇ ಬಾಲಕಿ ಕಿಡ್ನ್ಯಾಪ್, ಅತ್ಯಾಚಾರ: ಕೃತ್ಯದ ಬಳಿಕ ಕಾಲುವೆಗೆ ಎಸೆದ ಕಿರಾತಕ

SHOCKING: ಸಂಬಂಧಿಯಿಂದಲೇ ಬಾಲಕಿ ಕಿಡ್ನ್ಯಾಪ್, ಅತ್ಯಾಚಾರ: ಕೃತ್ಯದ ಬಳಿಕ ಕಾಲುವೆಗೆ ಎಸೆದ ಕಿರಾತಕ

ಭೋಪಾಲ್: ಮಲಗಿದ್ದ 7 ವರ್ಷದ ಬಾಕಿಯನ್ನು ಕಿಡ್ನ್ಯಾಪ್ ಮಾಡಿದ ಸಂಬಂಧಿಯೊಬ್ಬ ಆಕೆಯ ಮೇಲೆ ಅತ್ಯಾಚಾರವೆಸಗಿ, ಕೃತ್ಯದ ಬಳಿಕ ಬಾಲಕಿಯನ್ನು ಕಾಲುವೆಗೆ ಎಸೆದ ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ.

ಮಧ್ಯಪ್ರದೇಶದ ಬರ್ವಾನಿ ಜಿಲ್ಲೆಯಲ್ಲಿ ಈ ಭಯಾನಕ ಘಟನೆ ನಡೆದಿದ್ದು, ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಕುಟುಂಬದೊಂದಿದೆ 7 ವರ್ಷದ ಬಾಲಕಿ ಮನೆಯಲ್ಲಿ ನಿದ್ರೆಗೆ ಜಾರಿದ್ದಳು. ಸಂಬಂಧಿಕನೇ ಆಗಿರುವ 17 ವರ್ಷದ ಅಪ್ರಾಪ್ತ ಬಾಲಕಿಯನ್ನು ಆಕೆ ಮನೆಯಿಂದ ಅಪಹರಿಸಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಲಗಿದ್ದ ಬಾಲಕಿಯನ್ನು ಎತ್ತಿಕೊಂಡು ಹೋಗಿದ್ದು, ಸಮೀಪವೇ ಇರುವ ಇಂದಿರಾ ಸಾಗರ್ ಕಾಲುವೆಬಳಿ ಕರೆದೊಯ್ದಿದ್ದಾನೆ. ಅಲ್ಲಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ ಬಾಲಕಿ ಕುರುಚಾಡುತ್ತಿದ್ದಂತೆ ಆಕೆಯನ್ನು ಹೊಡೆದು ಕಾಲುವೆಗೆ ಎಸೆದು ಎಸ್ಕೇಪ್ ಆಗಿದ್ದಾನೆ. ಬಾಲಕಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾಳೆ.

ಜನವರಿ 26ರಂದು ಬೆಳಿಗ್ಗೆ ಸ್ಥಳಿಯರು ಬಾಲಕಿಯೊಬ್ಬಳ ಶವ ಕಾಲುವೆಯಲ್ಲಿ ಪತ್ತೆಯಾಗಿದ್ದನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಾಲಕಿಯ ಮೇಲೆ ಗಾಯಗಳಾಗಿದ್ದವು, ನೀರಿನಲ್ಲಿ ಮುಳುಗಿದ್ದರಿಂದ ಬಾಲಕಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದು ದೃಢಪಟ್ಟಿದೆ.

ಪ್ರಕರಣ ಸಂಬಂಧ 17 ವರ್ಷದ ಅಪ್ರಾಪ್ತನನ್ನು ಬಂಧಿಸಿ ವಿಚಾರಣೆ ನಡೆಸಲಾಗಿದ್ದು, ಈ ವೇಳೆ ಬಾಲಕಿಯನ್ನು ಕಿಡ್ನ್ಯಾಪ್ ಮಾಡಿ ಅತ್ಯಾಚಾರವೆಸಗಿದ್ದ ಬಗ್ಗೆ ಬಾಯ್ಬಿಟ್ಟಿದ್ದಾನೆ.

For Latest News Updates, Join Our Whatsapp Community🚩
RELATED ARTICLES

Most Popular