HomeLatest NewsSHOCKING : ಶಾಲಾ ಬಸ್ ಹರಿದು 1 ವರ್ಷದ ಪುಟ್ಟ ಕಂದಮ್ಮ ಸಾವು : ಆಘಾತಕಾರಿ...

SHOCKING : ಶಾಲಾ ಬಸ್ ಹರಿದು 1 ವರ್ಷದ ಪುಟ್ಟ ಕಂದಮ್ಮ ಸಾವು : ಆಘಾತಕಾರಿ ವೀಡಿಯೋ ವೈರಲ್ |WATCH VIDEO

ಮುಂಬೈನ ಗಿರಗಾಂವ್ ಪ್ರದೇಶದಲ್ಲಿ ಶಾಲಾ ಬಸ್‌ವೊಂದು ಹರಿದ ಪರಿಣಾಮ ಒಂದು ವರ್ಷದ ಮಗು  ಮೃತಪಟ್ಟಿದ್ದು, ಅಜ್ಜಿ ತೀವ್ರವಾಗಿ ಗಾಯಗೊಂಡಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ಈ ಭೀಕರ ಘಟನೆಯು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಚಂದ್ರಕಲಾ ಶಿವರಾಂ ವ್ಯಾಸ್ ಎಂಬುವವರು ಅವರು ತಮ್ಮ ಮೊಮ್ಮಗಳನ್ನು ಶಾಲಾ ಬಸ್‌ನಿಂದ ಕರೆದೊಯ್ಯಲು ಬಸ್ ನಿಲ್ದಾಣಕ್ಕೆ ಬಂದಿದ್ದರು. ಈ ವೇಳೆ ಅವರು ತಮ್ಮ ಒಂದು ವರ್ಷದ ಮೊಮ್ಮಗ ಅವೀರ್ ವ್ಯಾಸ್‌ನನ್ನು ಕೈಯಲ್ಲಿ ಎತ್ತಿಕೊಂಡಿದ್ದರು. ಮೊಮ್ಮಗಳು ಬಸ್‌ನಿಂದ ಇಳಿದ ನಂತರ, ಚಂದ್ರಕಲಾ ಅವರು ವಾಹನದ ಮುಂಭಾಗದಿಂದ ರಸ್ತೆ ದಾಟಲು ಪ್ರಾರಂಭಿಸಿದರು. ಅವರು ರಸ್ತೆ ದಾಟುತ್ತಿದ್ದಾಗ, ಬಸ್ ಚಾಲಕನು ಅವರನ್ನು  ಗಮನಿಸದೇ ಬಸ್ಸನ್ನು ಮುಂದಕ್ಕೆ ಚಲಾಯಿಸಿದ್ದಾನೆ.

ಬಸ್ ಚಂದ್ರಕಲಾ ಮತ್ತು ಮಗುವಿಗೆ ಡಿಕ್ಕಿ ಹೊಡೆದು ಅವರ ಮೇಲೆ ಹರಿದಿದೆ. ಇದರಿಂದ ಇಬ್ಬರಿಗೂ ಗಂಭೀರ ಗಾಯಗಳಾಗಿವೆ.ತಕ್ಷಣವೇ ಅಲ್ಲಿದ್ದ ಜನರು ಸಹಾಯಕ್ಕೆ ಧಾವಿಸಿ, ಗಾಯಾಳುಗಳನ್ನು ಗಿರಗಾಂವ್‌ನ ರಿಲಯನ್ಸ್ ಆಸ್ಪತ್ರೆಗೆ ತುರ್ತು ಚಿಕಿತ್ಸೆಗಾಗಿ ದಾಖಲಿಸಿದ್ದಾರೆ.ಆದರೆ, ಆಸ್ಪತ್ರೆಗೆ ತಲುಪುವಷ್ಟರಲ್ಲಿ ಮಗು ಸಾವನ್ನಪ್ಪಿದೆ ಎಂದು ವೈದ್ಯರು ಘೋಷಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ
https://twitter.com/i/status/2016727577294156177

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular