HomeIndiaವ್ಯಕ್ತಿಯ ಮೇಲಿನ ದ್ವೇಷಕ್ಕೆ ಆತನ 3 ತಿಂಗಳ ಹಸುಗೂಸನ್ನೇ ಕೊಂದ ಕಿರಾತಕ

ವ್ಯಕ್ತಿಯ ಮೇಲಿನ ದ್ವೇಷಕ್ಕೆ ಆತನ 3 ತಿಂಗಳ ಹಸುಗೂಸನ್ನೇ ಕೊಂದ ಕಿರಾತಕ

ಭೋಪಾಲ್: ವ್ಯಕ್ತಿಯೊಬ್ಬರ ಮೇಲಿನ ದ್ವೇಷಕ್ಕೆ ಕಿರಾತಕನೊಬ್ಬ ಆತನ ಮೂರು ತಿಂಗಳ ಮಗುವನ್ನೇ ಕೊಲೆಮಡಿರುವ ಘಟನೆ ಮಧ್ಯಪ್ರದೇಶದ ಸತ್ನಾದಲ್ಲಿ ನಡೆದಿದೆ.

ದೇವಸ್ಥಾನದ ಬಳಿ ತಂದೆಯೊಂದಿಗಿದ್ದ ಮಗುವನ್ನು ಅಪಹರಿಸಿರುವ ಆರೋಪಿ, ಬಳಿಕ ಮಗುವನ್ನು ನೆಲಕ್ಕೆ ಎಸೆದು ಸಾಯಿಸಿದ್ದಾನೆ. ಪ್ರಕರಣ ಸಂಬಂಧ ಹನುಮಂತನಗರದ ನಿವಾಸಿ ವೀರೇಂದ್ರ ಚೌದರಿ ಎಂಬಾತನನ್ನು ಬಂಧಿಸಲಾಗಿದೆ.

ಮೃತ ಮಗುವಿನ ತಂದೆ ಪ್ರಿನ್ಸ್ ಪಾಂಡೆ ಸತ್ನಾದ ಜಿಆರ್ ಪಿ ಠಾಣೆಯಲ್ಲಿ ಮಗು ನಾಪತ್ತೆಯಾಗಿದೆ ಎಂದು ದೂರು ದಾಖಲಿಸಿದ್ದರು. ತಾನು ಹಾಗೂ ತನ್ನ ಪತ್ನಿ ಮಗುವಿನೊಂದಿಗೆದೇವಸ್ಥಾನದ ಬಳಿ ಮಲಗಿದ್ದ ವೇಳೆ ಮಗು ನಾಪತ್ತೆಯಾಗಿದೆ. ಯಾರೋ ಕಿಡ್ನ್ಯಾಪ್ ಮಾಡಿದ್ದಾರೆ ಎಂದು ದೂರು ದಾಖಲಿಸಿದರು. ಪ್ರಕರಣ ದಾಖಲಿಸಿಕೊಂದ ಪೊಲೀಸರು, ತನಿಖೆ ನಡೆಸಿದ್ದಾರೆ. ಈ ವೇಳೆ ಲಾಲ್ ಚೌಕ್ ಬಳಿ ಗೋಣಿ ಚೀಲವೊಂದರಲ್ಲಿ ಮಗುವೊಂದರ ಮೃತದೇಹ ಪತ್ತೆಯಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆರೋಪಿ ಪತ್ತೆಗೆ ತನಿಖೆ ನಡೆಸಿದಾಗ ಸಿಸಿಟಿವಿ ಕ್ಯಾಮರಾ ಆಧಾರದಲ್ಲಿ ವಿರೇಂದ್ರ ಚೌಧರಿ ಎಂಬಾತನನ್ನು ಬಂಧಿಸಿದ್ದಾರೆ. ಆತ ತಾನೇ ಶಿಶುವನ್ನು ಕೊಂದಿದ್ದಾಗಿ ಒಪ್ಪಿಕೊಂಡಿದ್ದಾನೆ. 20 ದಿನಗಳ ಹಿಂದೆ ಪ್ರಿನ್ಸ್ ಪಾಂಡೆ ತನ್ನ ಮೇಲೆ ಹಲ್ಲೆ ನಡೆಸಿದ್ದ. ಇದೇ ದ್ವೇಷಕ್ಕೆ ಆತನ 3 ತಿಂಗಳ ಮಗು ಅಪಹರಿಸಿ ಕೊಂದಿದ್ದಾಗಿ ಬಾಯ್ಬಿಟ್ಟಿದ್ದಾನೆ.

For Latest News Updates, Join Our Whatsapp Community🚩
RELATED ARTICLES

Most Popular