HomeEntertainmentಬಾಲಿವುಡ್ ಅಂಗಳದಲ್ಲಿ ಹೊಸ ಲವ್ ಸ್ಟೋರಿ: ಗೆಳತಿ ಜೊತೆ ಮನೀಶ್ ಮಲ್ಹೋತ್ರಾ ಪಾರ್ಟಿಯಲ್ಲಿ ಮಾಧುರಿ ದೀಕ್ಷಿತ್...

ಬಾಲಿವುಡ್ ಅಂಗಳದಲ್ಲಿ ಹೊಸ ಲವ್ ಸ್ಟೋರಿ: ಗೆಳತಿ ಜೊತೆ ಮನೀಶ್ ಮಲ್ಹೋತ್ರಾ ಪಾರ್ಟಿಯಲ್ಲಿ ಮಾಧುರಿ ದೀಕ್ಷಿತ್ ಮಗ!

ಬಾಲಿವುಡ್‌ನ ಧಕ್ ಧಕ್ ಗರ್ಲ್ ಮಾಧುರಿ ದೀಕ್ಷಿತ್ ಮತ್ತು ಡಾ. ಶ್ರೀರಾಮ್ ನೆನೆ ಅವರ ಹಿರಿಯ ಮಗ ಅರಿನ್ ನೆನೆ, ತಮ್ಮ ರೂಮರ್ಡ್ ಗರ್ಲ್‌ಫ್ರೆಂಡ್ ಖುಷಿ ಜೊತೆ ಕಾಣಿಸಿಕೊಳ್ಳುವ ಮೂಲಕ ಸುದ್ದಿಯಲ್ಲಿದ್ದಾರೆ. ಮುಂಬೈನಲ್ಲಿ ಆಯೋಜಿಸಲಾಗಿದ್ದ ಪ್ರಸಿದ್ಧ ಡಿಸೈನರ್ ಮನೀಶ್ ಮಲ್ಹೋತ್ರಾ ಅವರ ಅದ್ಧೂರಿ ದೀಪಾವಳಿ ಪಾರ್ಟಿಯಲ್ಲಿ ಅರಿನ್ ನೆನೆ ತಮ್ಮ ಗೆಳತಿಯೊಂದಿಗೆ ಜೋಡಿಯಾಗಿ ಆಗಮಿಸಿ ಕಣ್ಣಿಡಿಸಿದ ಸನ್ನಿವೇಶ ವೈರಲ್ ಆಗಿದೆ.

ಐಎಎನ್‌ಎಸ್ ಹಂಚಿಕೊಂಡಿರುವ ವಿಡಿಯೋದಲ್ಲಿ, ಅರಿನ್ ನೆನೆ ಮತ್ತು ಖುಷಿ ಕೆಮೆರಾಗಳಿಗೆ ಜೊತೆಯಾಗಿ ಪೋಸ್ ನೀಡಿದ್ದು, ಪರಸ್ಪರ ಆತ್ಮೀಯತೆಯಿಂದ ಕಂಗೊಳಿಸಿದ್ದಾರೆ. ಹಬ್ಬದ ವಿಶೇಷ ಉಡುಪಿನಲ್ಲಿ ಮಿಂಚಿದ ಈ ಜೋಡಿ, ಮಾಧುರಿ ದೀಕ್ಷಿತ್ ಹಾಗೂ ಶ್ರೀರಾಮ್ ನೆನೆ ಅವರೊಂದಿಗೆ ನಿಂತು ಗ್ರೂಪ್ ಫೋಟೋಗಳಿಗೂ ಪೋಸ್ ನೀಡಿದೆ. ಮಾಧುರಿ ದೀಕ್ಷಿತ್ ಅವರು ಗುಲಾಬಿ ಬಣ್ಣದ ಮನೀಶ್ ಮಲ್ಹೋತ್ರಾ ಸೀರೆಯಲ್ಲಿ ಮಿಂಚಿದ್ದಾರೆ.

ಮೂಲಗಳ ಪ್ರಕಾರ ಅರಿನ್ ಮತ್ತು ಖುಷಿ ಕಳೆದ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದು, ಅಮೆರಿಕದಲ್ಲಿದ್ದಾಗ ತೆಗೆಸಿಕೊಂಡ ಹಲವು ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಈ ಹಿಂದೆ ಕರಣ್ ಜೋಹರ್ ನಿರ್ದೇಶನದ ‘ರಾಕಿ ಔರ್ ರಾನಿ ಕೀ ಪ್ರೇಮ್ ಕಹಾನಿ’ ಸಿನಿಮಾದಲ್ಲಿ ಅರಿನ್ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಬಾಲಿವುಡ್ ದಿಗ್ಗಜ ನಟಿಯ ಮಗನಾಗಿದ್ದರೂ ಅರಿನ್ ಮಾಧ್ಯಮಗಳ ಬೆಳಕಿನಿಂದ ದೂರ ಉಳಿದುಕೊಂಡಿದ್ದರು, ಆದರೆ ಈ ದೀಪಾವಳಿ ಪಾರ್ಟಿಯಲ್ಲಿ ಗೆಳತಿಯೊಂದಿಗೆ ಕಾಣಿಸಿಕೊಂಡು ಎಲ್ಲರ ಗಮನ ಸೆಳೆದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular