HomeKarnatakaರಾಜ್ಯದ ಶಾಲಾ ಮಕ್ಕಳಿಗೆ ಗುಡ್ ನ್ಯೂಸ್: ಕಲಿಕೆ ಸುಧಾರಣೆಗೆ ʼಶಿಕ್ಷಣ ಕೋಪೈಲಟ್ʼ ಯೋಜನೆ ಜಾರಿ: ಶಿಕ್ಷಕರಿಗೆ...

ರಾಜ್ಯದ ಶಾಲಾ ಮಕ್ಕಳಿಗೆ ಗುಡ್ ನ್ಯೂಸ್: ಕಲಿಕೆ ಸುಧಾರಣೆಗೆ ʼಶಿಕ್ಷಣ ಕೋಪೈಲಟ್ʼ ಯೋಜನೆ ಜಾರಿ: ಶಿಕ್ಷಕರಿಗೆ ಎಐ ಚಾಲಿತ ಡಿಜಿಟಲ್ ನೆರವು

ಬೆಂಗಳೂರು: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು, ಶಿಕ್ಷಣ ಫೌಂಡೇಶನ್ ಮತ್ತು ಮೈಕ್ರೋಸಾಫ್ಟ್ ರಿಸರ್ಚ್ ಇಂಡಿಯಾದ ಸಹಯೋಗದೊಂದಿಗೆ ಸರ್ಕಾರಿ ಶಾಲೆಗಳಲ್ಲಿ ಕಲಿಕೆಯ ಫಲಿತಾಂಶಗಳನ್ನು ಸುಧಾರಿಸುವ ಗುರಿಯೊಂದಿಗೆ ʼಶಿಕ್ಷಣ ಕೋಪೈಲಟ್ʼ ಯೋಜನೆಯನ್ನು ಜಾರಿಗೆ ತಂದಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಾದ ಮಧು ಬಂಗಾರಪ್ಪ ತಿಳಿಸಿದ್ದಾರೆ.

ರಾಜ್ಯದ ನಗರ ಮತ್ತು ಗ್ರಾಮೀಣ ಭಾಗಗಳ 750 ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಿಂದ ಆಯ್ದ 1,000 ಶಿಕ್ಷಕರಿಗೆ ʼಶಿಕ್ಷಣ ಕೋಪೈಲಟ್‌ – ಎಐʼ ಚಾಲಿತ ಡಿಜಿಟಲ್‌ ಸಹಾಯವನ್ನು ನೀಡಲಾಗುವುದು. ಶಿಕ್ಷಕರ ಹಿಮ್ಮಾಹಿತಿ ಆಧಾರದ ಮೇಲೆ ಚಟುವಟಿಕೆಗಳು, ಮೌಲ್ಯಮಾಪನಗಳು, ಅನ್ವಯಗಳು, ಸಮಗ್ರ ಪಾಠ ಯೋಜನೆಗಳಂತಹ ಬೋಧನಾ ಸಂಪನ್ಮೂಲ ರಚಿಸಲು ಶಿಕ್ಷಣ ಕೋಪೈಲಟ್‌ ಸಹಾಯಕ ಎಂದು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular