HomeLatest NewsBREAKING: ಮದ್ದೂರು ಸಂಪೂರ್ಣ ಬಂದ್: ಪಟ್ಟಣದಾದ್ಯಂತ 1,500ಕ್ಕೂ ಹೆಚ್ಚು ಪೊಲೀಸರ ನಿಯೋಜನೆ; ಎಲ್ಲೆಡೆ ಕಟ್ಟೆಚ್ಚರ

BREAKING: ಮದ್ದೂರು ಸಂಪೂರ್ಣ ಬಂದ್: ಪಟ್ಟಣದಾದ್ಯಂತ 1,500ಕ್ಕೂ ಹೆಚ್ಚು ಪೊಲೀಸರ ನಿಯೋಜನೆ; ಎಲ್ಲೆಡೆ ಕಟ್ಟೆಚ್ಚರ

ಮಂಡ್ಯ: ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ, ಘಟನೆ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಪೊಲೀಸರ ಲಾಠಿ ಚಾರ್ಜ್ ಖಂಡಿಸಿ ಇಂದು ಮದ್ದೂರು ಬಂದ್ ಗೆ ಕರೆ ನೀಡಲಾಗಿದೆ.

ಹಿಂದೂಪರ ಸಂಘಟನೆಗಳು ಮದ್ದೂರು ಬಂದ್ ಗೆ ಕರೆ ನೀಡಿದ್ದು, ಪಟ್ಟಣದಾದ್ಯಂತ ಸ್ವಯಂ ಪ್ರೇರಿತವಾಗಿ ಅಂಗಡಿ, ಮುಂಗಟ್ಟುಗಳನ್ನು ಬಂದ್ ಮಾಡಲಾಗಿದೆ. ವ್ಯಾಪಾರ-ವಹಿವಾಟು ಸಂಪೂರ್ಣ ಸ್ಥಗಿತಗೊಂಡಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಪಟ್ಟಣದಾದ್ಯಂತ ನಾಳೆವರೆಗೂ ನಿಷೇಧಾಜ್ಞೆ ಜಾರಿ ಗೊಳಿಸಿದ್ದಾರೆ.

ಮದ್ದೂರು ಬಂದ್ ಬೆನ್ನಲ್ಲೇ ಪಟ್ಟಣದಾದ್ಯಂತ 1500ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಎಸ್ ಪಿ ಮಲ್ಲಿಕಾರ್ಜುನ ಬಾಲದಂಡಿ ನೇತ್ವತ್ವದಲ್ಲಿ ರೌಂಡ್ಸ್ ನಡೆಸಲಾಗುತ್ತಿದೆ. ನಾಲ್ವರು ಹೆಚ್ಚುವರಿ ಎಸ್ ಪಿಗಳು, 15 ಡಿವೈಎಸ್ ಪಿ, 35 ಇನ್ಸ್ ಪೆಕ್ಟರ್ ಗಳು, 80 ಪಿಎಸ್ ಐಗಳು , 10 ಡಿಎ ಆರ್ ತುಕಡಿ 15 ಕೆ ಎಸ್ ಆರ್ ಪಿ ಸೇರಿ 800ಕ್ಕೂ ಹೆಚ್ಚು ಪೊಲೀಸರು ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ. ಪಟ್ಟಣದಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular