HomeKarnatakaರಾಜೀನಾಮೆ ಕೊಡುವವರು ಕೊಟ್ಟು ಹೋಗಿ ಅಂತಾರೆ; ಇದು ಡಿ.ಕೆ.ಶಿವಕುಮಾರ್ ಅವರ ಶೈಲಿ: ಸಚಿವ ಸ್ಥಾನ ಕೈತಪ್ಪಿದ್ದಕ್ಕೆ...

ರಾಜೀನಾಮೆ ಕೊಡುವವರು ಕೊಟ್ಟು ಹೋಗಿ ಅಂತಾರೆ; ಇದು ಡಿ.ಕೆ.ಶಿವಕುಮಾರ್ ಅವರ ಶೈಲಿ: ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಮಾಜಿ ಸಚಿವ ಎಂ.ಸಿ.ಸುಧಾಕರ್ ಅಸಮಾಧಾನ

ಚಿಕ್ಕಬಳ್ಳಾಪುರ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಸಚಿವ ಸಂಪುಟ ವಿಸ್ತರಣೆಯಾಗಿದ್ದು, ಹಲವು ನಾಯಕರಿಗೆ ಸಚಿವ ಸ್ಥಾನ ಕೈತಪ್ಪಿದೆ. ಇದರಿಂದ ನಿರಾಸೆಗೊಂಡಿರುವ ಶಾಸಕರ ಅಸಮಾಧಾನ ತೀವ್ರಗೊಂಡಿದೆ. ಸಚಿವ ಸ್ಥಾನ ಸಿಗದಿದ್ದಕೆ ನಮಗೆ ಅವಮಾನವಾಗಿದೆ ಎಂದು ಕೆಲ ಶಾಸಕರು ರಾಜೀನಾಮೆ ನೀಡಿದ್ದರೆ, ಮತ್ತೆ ಕೆಲವರು ರಾಜೀನಾಮೆ ನೀಡಲು ಮುಂದಾಗಿದ್ದಾರೆ.

ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಮಾಜಿ ಸಚಿವ ಎಂ.ಸಿ.ಸುಧಾಕರ್ ಕೂಡ ಬಹಿರಂಗವಾಗಿ ಅಸಮಾಧಾನ ಹೊರ ಹಾಕಿದ್ದಾರೆ. ಈಗಾಗಲೇ ಸಚಿವ ಸಂಪುಟ ವಿಸ್ತರಣೆಯಾಗಿದೆ. ಹಲವು ಶಾಸಕರಿಗೆ ಸಚಿವ ಸ್ಥಾನ ಸಿಗದೇ ನಿರಾಶರಾಗಿದ್ದಾರೆ. ಇರುವ 20 ಸ್ಥಾನಗಳಲ್ಲಿ 19 ಸ್ಥಾನ ಭರ್ತಿಯಾಗಿದೆ. ಹೀಗಾಗಿ ಸಂಪುಟದಲ್ಲಿ ಮತ್ತೆ ಯಾವುದೇ ಬದಲಾವಣೆಯನ್ನೂ ಮಾಡುವುದಿಲ್ಲ. ಮುಂದಿನ ದಿನಗಳಲ್ಲಿ ಮಂತ್ರಿ ಮಾಡುತ್ತೇವೆ ಎಂದು ಭರವಾಸೆ ನೀಡಿ ಸಮಾಧಾನ ಪಡಿಸಲು ಸಾಧ್ಯವಿಲ್ಲ. ಈಗಾಗಲೇ ಎಲ್ಲಾ ಸ್ಥಾನಗಳು ಭರ್ತಿಯಾಗಿದ್ದು, ಇನ್ನೆರಡು ವರ್ಷದಲ್ಲಿ ಚುನಾವಣೆಯೇ ಎದುರಾಗುತ್ತದೆ. ಹಾಗಾಗಿ ಈಗ ಆಗಿರುವ ಅನ್ಯಾಯಕ್ಕೆ ಪರಿಹಾರವೇನು? ಈ ಬಗ್ಗೆ ಹೈಕಮಾಂಡ್ ನಾಯಕರು ಉತ್ತರ ಕೊಡಬೇಕು ಎಂದು ತಿಳಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಚಿವ ಸ್ಥಾನ ಸಿಗಲಿಲ್ಲವೆಂದು ರಾಜೀನಾಮೆ ಕೊಡಲು ಮುಂದಾದರೆ ರಾಜೀನಾಮೆ ಕೊಡುವವರು ಕೊಟ್ಟು ಹೋಗಿ ಎಂದು ಡಿ.ಕೆ.ಶಿವಕುಮಾರ್ ಹೇಳುತ್ತಾರೆ. ಅದು ಅವರ ಶೈಲಿ. ಒಬ್ಬೊಬ್ಬರದ್ದು ಒನ್ನೊಂದು ಶೈಲಿ ಇರುತ್ತದೆ. ಆದರೆ ಇಲ್ಲಿ ನಾವು ಪಕ್ಷದ ಬಿ ಫಾರ್ಮ್ ಇಟ್ಟುಕೊಂಡು ಮಾತ್ರ ಗೆದ್ದಿಲ್ಲ. ವೈಯಕ್ತಿಕ ವರ್ಚಸ್ಸಿನಲ್ಲಿಯೂ ನಾವು ಗೆಲುವು ಸಾಧಿಸಿದ್ದೇವೆ. ವರಿಷ್ಠರು ಗೌರವಯುತವಾಗಿ ಶಾಸಕರ ನೋವು ಆಲಿಸಬೇಕು. ಅಸಮಾಧಾಅನಿತ ಶಾಸಕರನ್ನು ಕರೆದು ಮಾತನಾಡಬೇಕು ಎಂದು ಆಗ್ರಹಿಸಿದರು.

ನಮಗೂ ಸಚಿವ ಸ್ಥಾನ ಮತ್ತೆ ಸಿಗಲಿದೆ ಎಂಬ ಆಸೆಯಿತ್ತು. ಇಲ್ಲ ನಮ್ಮ ಜಿಲ್ಲೆಯ ಸುಬ್ಬಾರೆಡ್ಡಿ ಅವರಿಗಾದರೂ ಮಂತ್ರಿ ಸ್ಥಾನ ಕೊಡಬಹುದು ಎಂಬ ನಿರೀಕ್ಷೆ ಇತ್ತು. ನಮ್ಮ ಜಿಲ್ಲೆಯ ಯಾರನ್ನೇ ಮಂತ್ರಿ ಮಾಡಿದರೂ ನಮಗೆ ಬೇಸರವಿರಲಿಲ್ಲ. ಆದರೆ ಒಂದೇ ಒಂದು ಮಂತ್ರಿ ಸ್ಥಾನವನ್ನೂ ನಮ್ಮ ಜಿಲ್ಲೆಗೆ ಕೊಟ್ಟಿಲ್ಲ ಎಂದು ಕಿಡಿಕಾರಿದರು.

ಕೆಲ ಜಿಲ್ಲೆಗಳಿಗೆ ಮೂರು ಸಚಿವ ಸ್ಥಾನ, ಇನ್ನು ಕೆಲ ಜಿಲ್ಲೆಗಳಿಗೆ ಎರಡು ಸಚಿವ ಸ್ಥಾನ ಕೊಟ್ಟಿದ್ದೀರಿ. ಇನ್ನು ಕೆಲ ಜಿಲ್ಲೆಗಳಿಗೆ ಒಂದೇ ಒಂದು ಸಚಿವ ಸ್ಥಾನ ನೀಡಿಲ್ಲ. ಈ ರೀತಿಯ ನಿರ್ಧಾರ ಕೈಗೊಳ್ಳಲು ಕಾರಣವೇನು? ಇದರಿಂದ ಮುಂಬರುವ ಚುನಾವಣೆಯಲ್ಲಿ ಪಕ್ಷದ ಮೇಲೆ ಹೊಡೆತ ಬೀಳುತ್ತದೆ. ಜಿಲ್ಲೆಗೆ ಒಂದು ಸಚಿವ ಸ್ಥಾನವೂ ಇಲ್ಲದಿದ್ದರೆ ಅಭಿವೃದ್ಧಿ ಹೇಗೆ ಸಾಧ್ಯ? ನಾವು ಯಾವ ಆಧಾರದ ಮೇಲೆ ಜನರ ಬಳಿ ಹೋಗಿ ಸಮಸ್ಯೆ ಆಲಿಸಬೇಕು? ಇದು ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಸಮಸ್ಯೆಯಾಗಲಿದೆ ಎಂದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular