HomeEntertainment'ತರ್ಕ' ಚಿತ್ರದ ಲಿರಿಕಲ್ ಹಾಡು ರಿಲೀಸ್

‘ತರ್ಕ’ ಚಿತ್ರದ ಲಿರಿಕಲ್ ಹಾಡು ರಿಲೀಸ್

ಈಗಾಗಲೇ ತನ್ನ ಟೈಟಲ್ ನಿಂದಲೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಅಂಜನ್ ಅಭಿನಯದ ‘ತರ್ಕ’ ಚಿತ್ರದ ‘ಕಾದಲ್ ಬೇಬಿ’ ಎಂಬ ಲಿರಿಕಲ್ ಹಾಡನ್ನು ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಈ ಹಾಡಿಗೆ ಅನುರಾಮ್ ಧ್ವನಿಯಾಗಿದ್ದು, ಅವರದ್ದೇ  ಸಾಹಿತ್ಯವಿದೆ. ಇನ್ನುಳಿದಂತೆ ಸೂರಜ್ ಜೋಯಿಸ್ ಮ್ಯೂಸಿಕ್ ಕಂಪೋಸ್  ಮಾಡಿದ್ದಾರೆ.

ಪುನೀತ್ ಮಾನವ ನಿರ್ದೇಶನದ ಈ ಚಿತ್ರವನ್ನು ವಿಸ್ಮಯ ಎಂಟರ್ ಪ್ರೈಸಸ್ ಬ್ಯಾನರ್ ನಲ್ಲಿ ರಶ್ಮಿತಾ ಸಂತೋಷ್ ಕುಮಾರ್ ನಿರ್ಮಾಣ ಮಾಡಿದ್ದು, ಉಜ್ವಲಚಂದ್ರ ಸಂಕಲನ. ಅರುಣ್ ಕುಮಾರ್ ಮತ್ತು ನಿವಾಸ್ ನಾರಾಯಣ್ ಛಾಯಾಗ್ರಹಣವಿದೆ. ಅಂಜನ್ ಸೇರಿದಂತೆ ಪ್ರತಿಮಾ, ನಿವಾಸ್, ಶ್ವೇತಾ ಶ್ರೀನಿವಾಸ್, ಮುರಳಿ ಮೋಹನ್ ತೆರೆ ಹಂಚಿಕೊಂಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular