HomeEntertainment'ತಲ್ವಾರ್' ಚಿತ್ರದ ಲಿರಿಕಲ್ ಹಾಡು ರಿಲೀಸ್

‘ತಲ್ವಾರ್’ ಚಿತ್ರದ ಲಿರಿಕಲ್ ಹಾಡು ರಿಲೀಸ್

ಧರ್ಮ ಕೀರ್ತಿರಾಜ್ ಅಭಿನಯದ ಮುಮ್ತಾಜ್ ಮುರಳಿ ನಿರ್ದೇಶನದ ‘ತಲ್ವಾರ್’ ಚಿತ್ರದ ಲಿರಿಕಲ್ ಹಾಡೊಂದನ್ನು ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಲಾಗಿದೆ. ‘ಯಾರಯ್ಯ ನಿನ್ನೋರು’ ಎಂಬ ಈ ಹಾಡಿಗೆ ಶರಣ್ ಧ್ವನಿಯಾಗಿದ್ದು, ಕೆಬಿ ಪ್ರವೀಣ್ ಸಂಗೀತ ಸಂಯೋಜನೆ ನೀಡಿದ್ದಾರೆ. ಇನ್ನುಳಿದಂತೆ ನಿರ್ದೇಶಕ ಮುಮ್ತಾಜ್ ಮುರಳಿ ಅವರ ಸಾಹಿತ್ಯವಿದೆ.

ಈ ಚಿತ್ರವನ್ನು ಟಚ್ ಪಿಚ್ಚರ್ಸ್ ಬ್ಯಾನರ್ ನಲ್ಲಿ ಬಿ ಎಂ ಸುರೇಶ್ ನಿರ್ಮಾಣ ಮಾಡಿದ್ದು, ಧರ್ಮ ಕೀರ್ತಿ ರಾಜ್ ಸೇರಿದಂತೆ ಅದಿತಿ ಜೆಕೆ, ಶರತ್ ಲೋಹಿತಾಶ್ವ, ಅವಿನಾಶ್  ತೆರೆ ಹಂಚಿಕೊಂಡಿದ್ದಾರೆ. ಕೆ ಎಂ ಕಾರ್ತಿಕ್  ಸಂಕಲನ, ಸುರೇಶ್ ಬೈರಸಂದ್ರ   ಛಾಯಾಗ್ರಹಣ, ಡಿಫರೆಂಟ್ ಡ್ಯಾನಿ, ವಿನೋದ್ ಕುಮಾರ್, ಹಾಗೂ ಕುಂಫು ಚಂದ್ರು ಅವರ ಸಾಹಸ ನಿರ್ದೇಶನವಿದೆ.

For Latest News Updates, Join Our Whatsapp Community🚩
RELATED ARTICLES

Most Popular