HomeIndiaLPG ಗ್ರಾಹಕರಿಗೆ ಬಿಗ್ ಅಲರ್ಟ್ ; ಇನ್ಮುಂದೆ ಸಿಲಿಂಡರ್ ಪಡೆಯಲು ಇದು ಕಡ್ಡಾಯ!

LPG ಗ್ರಾಹಕರಿಗೆ ಬಿಗ್ ಅಲರ್ಟ್ ; ಇನ್ಮುಂದೆ ಸಿಲಿಂಡರ್ ಪಡೆಯಲು ಇದು ಕಡ್ಡಾಯ!

ಎಲ್‌ಪಿಜಿ ಗ್ಯಾಸ್‌ ಸಿಲಿಂಡರ್‌ ಬಳಕೆದಾರರಿಗೆ ಕೇಂದ್ರ ಸರ್ಕಾರ ಮಹತ್ವದ ಸೂಚನೆ ನೀಡಿದೆ. 2026ರ ಅಕ್ಟೋಬರ್‌ 1ರಿಂದ ಸಬ್ಸಿಡಿ ಗ್ಯಾಸ್‌ ಸಿಲಿಂಡರ್‌ ಪಡೆಯಲು ಆಧಾರ್‌ ಆಧಾರಿತ ಬಯೋಮೆಟ್ರಿಕ್‌ ದೃಢೀಕರಣ (ಆಥೆಂಟಿಕೇಶನ್‌) ಕಡ್ಡಾಯವಾಗಲಿದೆ ಎಂದು ತಿಳಿಸಲಾಗಿದೆ.

ಅರ್ಹ ಫಲಾನುಭವಿಗಳಿಗೆ ಮಾತ್ರ ಸಬ್ಸಿಡಿ ಸೌಲಭ್ಯ ತಲುಪಬೇಕು ಎಂಬ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ದೇಶಾದ್ಯಂತ ಈಗಾಗಲೇ 89.9% ಅಂದರೆ ಸುಮಾರು 27.43 ಕೋಟಿ ಗ್ಯಾಸ್‌ ಸಂಪರ್ಕಗಳಿಗೆ ಆಧಾರ್‌ ಸೀಡಿಂಗ್‌ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗ್ರಾಹಕರು ತಮ್ಮ ಅನುಕೂಲಕ್ಕೆ ತಕ್ಕಂತೆ ಆಧಾರ್‌ ಪರಿಶೀಲನೆ ಪೂರ್ಣಗೊಳಿಸಲು ತೈಲ ಕಂಪನಿಗಳು ಹಲವು ಆಯ್ಕೆಗಳನ್ನು ನೀಡಿವೆ. ಗ್ಯಾಸ್‌ ಸಿಲಿಂಡರ್‌ ವಿತರಿಸುವ ಸಂದರ್ಭದಲ್ಲಿ ಡಿಲಿವರಿ ಬಾಯ್‌ ಮೂಲಕ, ನೇರವಾಗಿ ಗ್ಯಾಸ್‌ ಏಜೆನ್ಸಿಗೆ ತೆರಳಿ ಅಥವಾ ಸಂಬಂಧಿತ ಮೊಬೈಲ್‌ ಆ್ಯಪ್‌ಗಳ ಮೂಲಕ ಆಧಾರ್‌ ದೃಢೀಕರಣ ಮಾಡಿಕೊಳ್ಳಬಹುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈಗಾಗಲೇ ಆಧಾರ್‌ ಪರಿಶೀಲನೆ ಪೂರ್ಣಗೊಳಿಸಿರುವ ಗ್ರಾಹಕರು ಮತ್ತೆ ಪ್ರಕ್ರಿಯೆ ನಡೆಸುವ ಅಗತ್ಯವಿಲ್ಲ ಎಂದು ತೈಲ ಕಂಪನಿಗಳು ಸ್ಪಷ್ಟಪಡಿಸಿವೆ. ಇನ್ನೂ ಪರಿಶೀಲನೆ ಪೂರ್ಣಗೊಳಿಸದ ಗ್ರಾಹಕರು ಯಾವುದೇ ತೊಂದರೆಯಿಲ್ಲದೆ ಸಬ್ಸಿಡಿ ಸಿಲಿಂಡರ್‌ ಪಡೆಯಲು ತಕ್ಷಣವೇ ಆಧಾರ್‌ ಬಯೋಮೆಟ್ರಿಕ್‌ ದೃಢೀಕರಣ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ.

ಗ್ಯಾಸ್‌ ಸಿಲಿಂಡರ್‌ಗೆ e-KYC (ಇ-ಕೆವೈಸಿ) ಮಾಡಿಸಲು ಸಾಮಾನ್ಯವಾಗಿ ಈ ವಿಧಾನಗಳಲ್ಲಿ ಯಾವುದನ್ನಾದರೂ ಬಳಸಬಹುದು:

  1. ಗ್ಯಾಸ್‌ ಡೆಲಿವರಿ ವೇಳೆ: ಸಿಲಿಂಡರ್‌ ತರುವ ಡೆಲಿವರಿ ಸಿಬ್ಬಂದಿಗೆ ಆಧಾರ್‌ e-KYC ಮಾಡಿಸಿಕೊಳ್ಳುವಂತೆ ಕೇಳಿ. ಬಯೋಮೆಟ್ರಿಕ್‌ ದೃಢೀಕರಣ ಮಾಡಿಸಬಹುದು.

  2. ಗ್ಯಾಸ್‌ ಏಜೆನ್ಸಿಯಲ್ಲಿ: ನಿಮ್ಮ ಗ್ಯಾಸ್‌ ಏಜೆನ್ಸಿಗೆ ಹೋಗಿ ಆಧಾರ್‌ ಕಾರ್ಡ್‌/ಆಧಾರ್‌ ಸಂಖ್ಯೆ ಮತ್ತು ನೋಂದಾಯಿತ ಮೊಬೈಲ್‌ ವಿವರ ನೀಡಿ e-KYC ಮಾಡಿಸಿಕೊಳ್ಳಿ.

  3. ಮೊಬೈಲ್‌ ಆ್ಯಪ್‌ ಮೂಲಕ: ನಿಮ್ಮ ಗ್ಯಾಸ್‌ ಕಂಪನಿಯ ಅಧಿಕೃತ ಆ್ಯಪ್‌ನಲ್ಲಿ e-KYC/ಆಧಾರ್‌ Authentication ಆಯ್ಕೆ ಇದ್ದರೆ, ಅದರಲ್ಲಿ ಸೂಚಿಸುವ ಹಂತಗಳನ್ನು ಅನುಸರಿಸಿ.

  4. ಈಗಾಗಲೇ ಮಾಡಿಸಿದ್ದರೆ: ಮತ್ತೆ e-KYC ಮಾಡುವ ಅಗತ್ಯವಿಲ್ಲ.

ಮುಖ್ಯವಾಗಿ: OTP ಅಥವಾ ಬಯೋಮೆಟ್ರಿಕ್‌ ವಿವರಗಳನ್ನು ಅನಧಿಕೃತ ವ್ಯಕ್ತಿಗಳೊಂದಿಗೆ ಹಂಚಿಕೊಳ್ಳಬೇಡಿ.

 ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ಪುರುಷ ಬಂದಿಗಳಿಗೆ 30 ದಿನಗಳ ಉಚಿತ ಟೈಲರಿಂಗ್ ತರಬೇತಿಗೆ ಚಾಲನೆ

ನಗರದ ಕೇಂದ್ರ ಕಾರಾಗೃಹದ ಆವರಣದಲ್ಲಿ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆಯ (ಆರ್‌ಸೆಟಿ) ಸಹಯೋಗದೊಂದಿಗೆ ಪುರುಷ ಬಂದಿಗಳಿಗಾಗಿ ಆಯೋಜಿಸಲಾಗಿರುವ 30 ದಿನಗಳ ಉಚಿತ ಟೈಲರಿಂಗ್ ತರಬೇತಿ ಕಾರ್ಯಾಗಾರಕ್ಕೆ ಬುಧವಾರ ಚಾಲನೆ ನೀಡಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಶಶಿಕಾಂತ್ ಶಿವಪೂರೆ ಅವರು, ಇಂದಿನ ದಿನಗಳಲ್ಲಿ ಪ್ರತಿಯೊಂದು ಕ್ಷೇತ್ರದಲ್ಲೂ ತೀವ್ರ ಪೈಪೋಟಿ ಇದೆ. ಬಂದಿಗಳು ಆಸಕ್ತಿಯಿಂದ ಇಂತಹ ಕೌಶಲ್ಯಗಳನ್ನು ಕಲಿತು ಸಮಾಜದ ಮುಂಚೂಣಿಗೆ ಬರಬೇಕು. ಪ್ರತಿಯೊಬ್ಬರೂ ತಮ್ಮನ್ನು ತಾವು ಸಕಾರಾತ್ಮಕ ಕೆಲಸಗಳಲ್ಲಿ ತೊಡಗಿಸಿಕೊಂಡು, ಜೀವನದಲ್ಲಿ ಯಶಸ್ಸು ಗಳಿಸುವ ಮೂಲಕ ಕುಟುಂಬದ ಆರ್ಥಿಕ ಅಭಿವೃದ್ಧಿಗೆ ನೆರವಾಗಬೇಕು ಎಂದು ಕರೆ ನೀಡಿದರು.

ಕೇಂದ್ರ ಕಾರಾಗೃಹದ ಅಧೀಕ್ಷಕ ವಿ. ಕೃಷ್ಣಮೂರ್ತಿ ಅವರು ಮಾತನಾಡಿ, ಬಂದಿಗಳಿಗೆ ಇಂತಹ ಸ್ವ-ಉದ್ಯೋಗ ತರಬೇತಿಗಳನ್ನು ನೀಡುವುದರಿಂದ ಅವರು ಸಮಾಜದ ಮುಖ್ಯವಾಹಿನಿಗೆ ಮರಳಲು ಸಾಧ್ಯವಾಗುತ್ತದೆ. ಶಿಕ್ಷೆ ಮುಗಿದು ಬಿಡುಗಡೆಯಾದ ಬಳಿಕ ಸ್ವಂತ ಉದ್ಯೋಗ ಕಂಡುಕೊಂಡು ಸ್ವಾವಲಂಬಿ ಹಾಗೂ ಗೌರವಯುತ ಜೀವನ ನಡೆಸಲು ಇದು ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಜೊತೆಗೆ, ಇಂತಹ ಉಪಯುಕ್ತ ತರಬೇತಿ ಆಯೋಜಿಸಿದ ಕೆನರಾ ಬ್ಯಾಂಕ್ ಆರ್‌ಸೆಟಿ ಸಂಸ್ಥೆಗೆ ತುಂಬು ಹೃದಯದ ಕೃತಜ್ಞತೆ ಸಲ್ಲಿಸಿದರು.

ಕೆನರಾ ಬ್ಯಾಂಕ್‌ನ ಜಿಲ್ಲಾ ಲೀಡ್ ವ್ಯವಸ್ಥಾಪಕ ಗಿರೀಶ್ ವಿ. ಕುಲಕರ್ಣಿ ಅವರು ಮಾತನಾಡಿ, ಸ್ವ-ಉದ್ಯೋಗ ಕೈಗೊಳ್ಳಲು ವಿವಿಧ ಬ್ಯಾಂಕುಗಳಲ್ಲಿ ದೊರೆಯುವ ಸಾಲ ಸೌಲಭ್ಯಗಳು ಹಾಗೂ ಆರ್ಥಿಕ ನೆರವಿನ ಬಗ್ಗೆ ಬಂದಿಗಳಿಗೆ ಮಾಹಿತಿ ನೀಡಿದರು.

ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆಯ ನಿರ್ದೇಶಕ ವಿನಯ್ ಕುಮಾರ್ ಬಿ. ಕೊಳೂರುಮಠ ಅವರು ಮಾತನಾಡಿ, ಸಂಸ್ಥೆಯ ವತಿಯಿಂದ ಟೈಲರಿಂಗ್ ತರಬೇತಿಯ ಜೊತೆಗೆ ವ್ಯಕ್ತಿತ್ವ ವಿಕಸನ, ಆತ್ಮವಿಶ್ವಾಸ ವೃದ್ಧಿ ಹಾಗೂ ಸಂವಹನ ಕೌಶಲ್ಯಗಳ ತರಬೇತಿಯನ್ನೂ ನೀಡಲಾಗುತ್ತದೆ. ಇದು ಅವರ ಮುಂದಿನ ವೃತ್ತಿ ಬದುಕಿಗೆ ಅತ್ಯಂತ ಸಹಕಾರಿಯಾಗಲಿದೆ ಎಂದರು.

ಈ ಸಂದರ್ಭದಲ್ಲಿ ಕಾರಾಗೃಹದ ಸಹಾಯಕ ಅಧೀಕ್ಷಕ ಟಿ. ಬಿ. ಭಜಂತ್ರಿ, ಜೈಲರ್ ಪ್ರಕಾಶ್ ಶಿಂಧೆ, ಸಂಪನ್ಮೂಲ ವ್ಯಕ್ತಿ ಅಕ್ಬರ್ ಬಾಷ, ಉಪನ್ಯಾಸಕರಾದ ಜಡೆಪ್ಪ ಜಿ., ದಿನೇಶ್ ಕುಮಾರ್ ಜಿ., ಸಿಬ್ಬಂದಿಗಳಾದ ಸಿದ್ದಲಿಂಗಮ್ಮ, ಸಂತೋಷ್ ಕುಮಾರ್, ಪರಮೇಶ್ ಹಾಗೂ ತರಬೇತಿಯ 25 ಜನ ಶಿಬಿರಾರ್ಥಿ ಬಂದಿಗಳು ಉಪಸ್ಥಿತರಿದ್ದರು.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular