ವಾಣಿಜ್ಯ ಸಿಲಿಂಡರ್‌ಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ ಬೆಂಗಳೂರು ನಗರದಲ್ಲಿ ಹೋಟೆಲ್‌ಗಳು ಬಂದ್ ಆಗುತ್ತಿವೆ. ಅನೇಕ ಹೋಟೆಲ್‌ಗಳಲ್ಲಿ ಮೆನು ಕಡಿತವಾಗಿದೆ.
ನಗರದ ಪ್ರಸಿದ್ಧ ವಿದ್ಯಾರ್ಥಿ ಭವನದಲ್ಲಿ ಮಸಾಲೆ ದೋಸೆ ಸಿಗಲಿದೆಯೇ? ಎಂಬುದು ಎಲ್ಲ ಪ್ರಶ್ನೆ. ಈ ಕುರಿತು ವಿದ್ಯಾರ್ಥಿ ಭವನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದೆ.
‘ನಮ್ಮ ಸೇವೆಗಳ ಕುರಿತು ಮಹತ್ವದ ಮಾಹಿತಿ ಪ್ರಿಯ ಗ್ರಾಹಕರೇ, ವಾಣಿಜ್ಯ LPG ಸರಬರಾಜಿನ ಮೇಲೆ ಉಂಟಾದ ಪ್ರಸ್ತುತ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ಸಂಪೂರ್ಣವಾಗಿ ಸೇವೆಯನ್ನು ನಿಲ್ಲಿಸದೆ ನಿಮಗೆ ಸೇವೆ ನೀಡಲು ನಾವು ಪರ್ಯಾಯ ಅಡುಗೆ ವಿಧಾನಗಳನ್ನು ಪರಿಶೀಲಿಸುತ್ತಿದ್ದು, ನಮ್ಮ ಕಾರ್ಯಾಚರಣೆಯಲ್ಲಿ ಕೆಲವು ತಾತ್ಕಾಲಿಕ ಬದಲಾವಣೆಗಳನ್ನು ಮಾಡುತ್ತಿದ್ದೇವೆ’ ಎಂದು ಹೇಳಿದೆ.
- ಮಿತವಾದ ಮೆನು: ನಮ್ಮ ಪ್ರಸಿದ್ಧ ಮಸಾಲೆ ದೋಸೆ ಎಂದಿನಂತೆ ಲಭ್ಯವಾಗುತ್ತದೆ. ಇತರ ಕೆಲವು ಪದಾರ್ಥಗಳು ಮಾತ್ರ ನಿರ್ದಿಷ್ಟ ಸಮಯಗಳಲ್ಲಿ ಲಭ್ಯವಾಗಬಹುದು.
- ಪರಿಷ್ಕೃತ ಸಮಯಗಳು: ನಾವು ತಾತ್ಕಾಲಿಕವಾಗಿ ಕಡಿತಗೊಂಡ ಸಮಯದಲ್ಲಿ ಕಾರ್ಯನಿರ್ವಹಿಸುತ್ತಿದ್ದೇವೆ. ದೈನಂದಿನ ಮಾಹಿತಿಗಾಗಿ ದಯವಿಟ್ಟು ನಮ್ಮ ಇನ್ಸ್ಟಾಗ್ರಾಮ್ / ಫೇಸ್ ಬುಕ್ ಸ್ಟೋರಿ ಪರಿಶೀಲಿಸಿ.
- ಆನ್‌ಲೈನ್ ಆರ್ಡರ್‌ಗಳು: ಪರಿಸ್ಥಿತಿ ಸಾಮಾನ್ಯವಾಗುವವರೆಗೆ ಸ್ವಿಗ್ಗಿಮತ್ತು ಝೋಮಾಟೊ ಮೂಲಕ ಆನ್‌ಲೈನ್ ಆರ್ಡರ್‌ಗಳು ಕೆಲ ಸಮಯಗಳಲ್ಲಿ ಲಭ್ಯವಿರದೇ ಇರಬಹುದು.
ಈ ಅವಧಿಯಲ್ಲಿ ನಿಮ್ಮ ಸಹಕಾರ ಮತ್ತು ಸಹನೆಯನ್ನು ಕೋರುತ್ತೇವೆ. ಶೀಘ್ರದಲ್ಲೇ ಪೂರ್ಣ ಪ್ರಮಾಣದ ಸೇವೆಯನ್ನು ಪುನರಾರಂಭಿಸಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಪೋಸ್ಟ್‌ನಲ್ಲಿ ವಿದ್ಯಾರ್ಥಿ ಭವನ ಹೇಳಿದೆ.

