HomeIndiaLPG ಗ್ರಾಹಕರೇ ಗಮನಿಸಿ..! ಸಿಲಿಂಡರ್ ಡೆಲಿವರಿಗೆ ಹೆಚ್ಚುವರಿ ಹಣ ಕೇಳಿದ್ರೆ ಜಸ್ಟ್ ಹೀಗೆ ದೂರು ನೀಡಿ.!

LPG ಗ್ರಾಹಕರೇ ಗಮನಿಸಿ..! ಸಿಲಿಂಡರ್ ಡೆಲಿವರಿಗೆ ಹೆಚ್ಚುವರಿ ಹಣ ಕೇಳಿದ್ರೆ ಜಸ್ಟ್ ಹೀಗೆ ದೂರು ನೀಡಿ.!

ಗ್ಯಾಸ್ ಸಿಲಿಂಡರ್‌ ಮನೆಗೆ ಡೆಲಿವರಿ ಮಾಡಿದ ಬಳಿಕ ಕೆಲವರು ₹30ರಿಂದ ₹50ರವರೆಗೆ ಹೆಚ್ಚುವರಿ ಹಣ ಕೇಳುವ ಘಟನೆಗಳು ನಡೆಯುತ್ತಿವೆ. ಆದರೆ ಗ್ರಾಹಕರು ಬಿಲ್‌ನಲ್ಲಿ ನಮೂದಿಸಿರುವ ಮೊತ್ತವನ್ನೇ ಪಾವತಿಸಬೇಕು. ಡೆಲಿವರಿ ಹೆಸರಿನಲ್ಲಿ ಹೆಚ್ಚುವರಿ ಹಣಕ್ಕೆ ಒತ್ತಾಯಿಸಿದರೆ ಸುಮ್ಮನಿರಬೇಕಿಲ್ಲ; ಸಂಬಂಧಪಟ್ಟ ಗ್ಯಾಸ್‌ ಏಜೆನ್ಸಿ ಅಥವಾ ಅಧಿಕೃತ ಸಹಾಯವಾಣಿ ಮೂಲಕ ದೂರು ದಾಖಲಿಸಬಹುದು.

LPG ಗ್ಯಾಸ್ ಸಿಲಿಂಡರ್‌ ಅನ್ನು ಆನ್‌ಲೈನ್‌ನಲ್ಲಿ ಬುಕ್ ಮಾಡಿದ ಬಳಿಕ ಸಾಮಾನ್ಯವಾಗಿ ಮೂರು-ನಾಲ್ಕು ದಿನಗಳಲ್ಲಿ ಮನೆ ಬಾಗಿಲಿಗೆ ಡೆಲಿವರಿ ಮಾಡಲಾಗುತ್ತದೆ. ಡೆಲಿವರಿ ಬಾಯ್‌ಗಳು ನೇರವಾಗಿ ಮನೆಗೆ ತಂದು ಸಿಲಿಂಡರ್‌ ನೀಡುತ್ತಾರೆ. ಆದರೆ ಸಿಲಿಂಡರ್‌ ತಂದುಕೊಟ್ಟಿದ್ದಕ್ಕಾಗಿ ಕೆಲವರು ಹೆಚ್ಚುವರಿ ಶುಲ್ಕವನ್ನು ಕೇಳುತ್ತಾರೆ. ₹30ರಿಂದ ₹50ರವರೆಗೆ ಹಣಕ್ಕೆ ಬೇಡಿಕೆ ಇಡುವ ಘಟನೆಗಳೂ ನಡೆಯುತ್ತವೆ. ಕೆಲವೊಮ್ಮೆ ಗ್ರಾಹಕರಿಂದ ಬಲವಂತವಾಗಿ ಹಣ ವಸೂಲಿ ಮಾಡಲಾಗುತ್ತದೆ. ಹಣ ನೀಡದಿದ್ದರೆ ವಾಗ್ವಾದಕ್ಕೂ ಇಳಿಯುವ ಸಂದರ್ಭಗಳಿವೆ.

ಸಿಲಿಂಡರ್‌ ಡೆಲಿವರಿಗೆ ಹೆಚ್ಚುವರಿ ಹಣ ನೀಡಬೇಕೇ?

ಕೆಲವರು ಸಿಲಿಂಡರ್‌ ಡೆಲಿವರಿ ಮಾಡಿದ ಬಳಿಕ ₹50ರವರೆಗೆ ಹೆಚ್ಚುವರಿ ಹಣ ನೀಡಲೇಬೇಕು ಎಂದು ಒತ್ತಾಯಿಸುತ್ತಾರೆ. ಅಗತ್ಯವಿಲ್ಲದಿದ್ದರೂ ಒತ್ತಾಯಕ್ಕೆ ಮಣಿದು ಗ್ರಾಹಕರು ಹಣ ನೀಡುತ್ತಾರೆ. ನಿಯಮಗಳ ಪ್ರಕಾರ ಸಿಲಿಂಡರ್‌ ಬುಕ್ ಮಾಡುವಾಗ ನಿಗದಿಯಾಗಿರುವ ಬೆಲೆಯನ್ನೇ ಪಾವತಿಸಬೇಕು. ಡೆಲಿವರಿ ಬಾಯ್‌ಗಳು ಹೆಚ್ಚುವರಿ ಹಣ ಕೇಳುವುದು ನಿಯಮಕ್ಕೆ ವಿರುದ್ಧವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಡೆಲಿವರಿ ಶುಲ್ಕ ಬಿಲ್‌ನಲ್ಲೇ ಇರುತ್ತದೆ

ಡೆಲಿವರಿ ಬಾಯ್‌ ಹೆಚ್ಚುವರಿ ಹಣ ಕೇಳಿದರೆ ಗ್ರಾಹಕರು ಅದನ್ನು ನೀಡಬೇಕಾಗಿಲ್ಲ. ಗ್ಯಾಸ್‌ ಏಜೆನ್ಸಿಯ ಗೋದಾಮಿನಿಂದ 5 ಕಿಲೋಮೀಟರ್‌ ವ್ಯಾಪ್ತಿಯೊಳಗೆ ಡೆಲಿವರಿ ಮಾಡಲು ಯಾವುದೇ ಸಾರಿಗೆ ಶುಲ್ಕ ಇರುವುದಿಲ್ಲ. 5ರಿಂದ 15 ಕಿಲೋಮೀಟರ್‌ ದೂರದ ಡೆಲಿವರಿಗೆ ಕೆಲವು ಸಂದರ್ಭಗಳಲ್ಲಿ ₹20 ಡೆಲಿವರಿ ಶುಲ್ಕ ಇರಬಹುದು. ಆದರೆ ಈ ಶುಲ್ಕವನ್ನು ಗ್ಯಾಸ್‌ ಬಿಲ್‌ನಲ್ಲೇ ನಮೂದಿಸಲಾಗಿರುತ್ತದೆ. ಹೀಗಾಗಿ ನಿಮ್ಮ ಗ್ಯಾಸ್‌ ಬಿಲ್‌ ಅನ್ನು ಒಮ್ಮೆ ಪರಿಶೀಲಿಸಿ. ಅದರಲ್ಲಿ ಶುಲ್ಕದ ವಿವರಗಳನ್ನು ನೋಡಬಹುದು.

ಹೆಚ್ಚುವರಿ ಹಣ ಕೇಳಿದರೆ ದೂರು ನೀಡುವುದು ಹೇಗೆ?

ಡೆಲಿವರಿ ಬಾಯ್‌ ಹೆಚ್ಚುವರಿ ಹಣ ಕೇಳಿದರೆ ಗ್ರಾಹಕರು ದೂರು ನೀಡಬಹುದು. ಮೊದಲು ಸಂಬಂಧಪಟ್ಟ ಗ್ಯಾಸ್‌ ಏಜೆನ್ಸಿಗೆ ದೂರು ನೀಡಬೇಕು. ಅಲ್ಲಿಂದ ಸೂಕ್ತ ಸ್ಪಂದನೆ ಸಿಗದಿದ್ದರೆ ಆಯಿಲ್‌ ಕಂಪನಿಗಳ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ದೂರು ನೀಡಬಹುದು.

  • ಇಂಡೇನ್‌ ಗ್ಯಾಸ್‌ ಗ್ರಾಹಕರು: 7718955555

  • ಭಾರತ್‌ ಗ್ಯಾಸ್‌ ಗ್ರಾಹಕರು: 1800224344

  • HP ಗ್ಯಾಸ್‌ ಗ್ರಾಹಕರು: 9222201122

ಎಲ್ಲ ಗ್ರಾಹಕರಿಗೂ ಈ ನಂಬರ್‌ಗೆ ದೂರು ನೀಡಬಹುದು

ಯಾವುದೇ ಗ್ಯಾಸ್‌ ಗ್ರಾಹಕರು 18002333555 ಸಂಖ್ಯೆಗೆ ಕರೆ ಮಾಡಿ ದೂರು ನೀಡಬಹುದು. ಅಲ್ಲದೆ ಟ್ವಿಟರ್‌ ಅಥವಾ ಫೇಸ್‌ಬುಕ್‌ ಮೂಲಕವೂ ಸಮಸ್ಯೆಯನ್ನು ತಿಳಿಸಬಹುದು. ಭಾರತ ಸರ್ಕಾರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ MoPNG e-Seva ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆ @MoPNG_eSeva ಅನ್ನು ಟ್ಯಾಗ್‌ ಮಾಡಿ ದೂರು ಸಲ್ಲಿಸಬಹುದು.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular