HomeCrimeಪ್ರೀತ್ಸೆ ಎಂದು ಪುತ್ರಿಗೆ ಪೀಡಿಸುತ್ತಿದ್ದವನ ಕೊಂದ ಯುವತಿಯ ತಂದೆ

ಪ್ರೀತ್ಸೆ ಎಂದು ಪುತ್ರಿಗೆ ಪೀಡಿಸುತ್ತಿದ್ದವನ ಕೊಂದ ಯುವತಿಯ ತಂದೆ

ತಿಪಟೂರು: ಪ್ರೀತಿಸುವಂತೆ ಪುತ್ರಿಯ ಹಿಂದೆ ಬಿದ್ದಿದ್ದ ವ್ಯಕ್ತಿಯನ್ನು ಯುವತಿಯ ತಂದೆ ಹತ್ಯೆ ಮಾಡಿ ಪೊಲೀಸರಿಗೆ ಶರಣಾಗಿದ್ದಾರೆ.

ತಿಪಟೂರಿನ ಚೇತನ್(25) ಕೊಲೆಯಾದ ವ್ಯಕ್ತಿ. ಲೋಕೇಶ್ ಕೊಲೆ ಆರೋಪಿಯಾಗಿದ್ದಾನೆ. ಪತ್ನಿಯಿಂದ ದೂರವಾಗಿದ್ದ ಚೇತನ್ ಆಲೂರು ಮೂಲದ ಯುವತಿಯ ಹಿಂದೆ ಬಿದ್ದು ಪ್ರೀತಿಸುವಂತೆ ಕಾಡುತ್ತಿದ್ದ. ಭಾನುವಾರ ಹಾಲ್ಕುರಿಕೆ ರಸ್ತೆಯ ಯುವತಿಯ ತಂದೆ ಲೋಕೇಶ್ ಅವರ ಅಂಗಡಿಯ ಬಳಿ ಹೋಗಿ ಜಗಳವಾಡಿದ್ದಾನೆ. ಮಗಳನ್ನು ಎಲ್ಲಿಗೆ ಕಳುಹಿಸಿದ್ದೀರಿ, ನನಗೆ ಮದುವೆ ಮಾಡಿಕೊಡಿ ಎಂದೆಲ್ಲ ಪೀಡಿಸಿದ್ದಾನೆ. ಈತನ ಕಾಟದಿಂದ ಆಕ್ರೋಶಗೊಂಡ ಲೋಕೇಶ್ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.

ಶಿವಮೊಗ್ಗ ಮೂಲದ ಯುವತಿಯನ್ನು ಪ್ರೀತಿಸಿ ಕೆಲವು ವರ್ಷಗಳ ಹಿಂದೆ ಮದುವೆಯಾಗಿದ್ದ ಚೇತನ್ ದಂಪತಿಗೆ ಮೂರು ವರ್ಷದ ಹೆಣ್ಣು ಮಗು ಇದೆ. ಕೌಟುಂಬಿಕ ಕಲಹದಿಂದಾಗಿ ಚೇತನ್ ಪತ್ನಿ ತವರು ಮನೆ ಸೇರಿದ್ದಾರೆ. ಇನ್ನೂ ವಿಚ್ಛೇದನ ನೀಡಿಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪತ್ನಿ ತವರಿಗೆ ಹೋದ ನಂತರ ಲೋಕೇಶ್ ಅವರ ಮಗಳ ಹಿಂದೆ ಬಿದ್ದಿದ್ದ ಚೇತನ್ 2ನೇ ಮದುವೆಗೆ ಮುಂದಾಗಿದ್ದ. ಆತ ಅನ್ಯ ಜಾತಿಗೆ ಸೇರಿದ್ದು ಮತ್ತು ಬೇರೆ ಮದುವೆಯಾಗಿರುವುದರಿಂದ ಲೋಕೇಶ್ ದಂಪತಿ ಚೇತನ್ ಗೆ ಮಗಳನ್ನು ಕೊಟ್ಟು ಮದುವೆ ಮಾಡಲು ಒಪ್ಪಿಲ್ಲ. ಆಕೆಯನ್ನು ಬೇರೆ ಊರಿಗೆ ಕಳುಹಿಸಿದ್ದರು. ಇದು ಗೊತ್ತಾಗಿ ಲೋಕೇಶ್ ಅವರ ಅಂಗಡಿ ಬಳಿ ಹೋಗಿ ಗಲಾಟೆ ಮಾಡಿದಾಗ ಬಲವಾದ ಆಯುಧದಿಂದ ಹೊಡೆದು ಚೇತನ್ ನನ್ನು ಕೊಲೆ ಮಾಡಿ ಪೊಲೀಸರಿಗೆ ಶರಣಾಗಿದ್ದಾರೆ ಎನ್ನಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular