ಜನರು ತಮ್ಮ ಪ್ರೀತಿಪಾತ್ರರನ್ನು ಅಚ್ಚರಿಗೊಳಿಸುವುದರಲ್ಲಿ ಮತ್ತು ಅವರ ಹೃದಯದಲ್ಲಿ ಶಾಶ್ವತವಾಗಿ ಉಳಿಯುವ ವಿಶೇಷ ಕ್ಷಣವನ್ನು ರಚಿಸುವಲ್ಲಿ ಸದಾ ಒಂದು ಹೆಜ್ಜೆ ಮುಂದೆ ಇರುತ್ತಾರೆ. ಈ ಸಮಯದಲ್ಲಿ, ಒಬ್ಬ ವ್ಯಕ್ತಿ ತನ್ನ ಪ್ರೇಮಿ ವಿಮಾನದಲ್ಲಿ ಹೋಗುತ್ತಿರುವ ಸಂದರ್ಭದಲ್ಲಿ ಅದೇ ವಿಮಾನವನ್ನು ಹತ್ತುವ ಮೂಲಕ ಪ್ರಪೋಸ್ ಮಾಡಲು ನಿರ್ಧರಿಸಿದ್ದು ಅದರ ವಿಡಿಯೋ ಈಗ ವೈರಲ್ ಆಗಿದೆ.
ಏರ್ ಇಂಡಿಯಾ ವಿಮಾನವು 35 ಸಾವಿರ ಅಡಿಗಳಷ್ಟು ಮೇಲೆ ಹಾರುತ್ತಿರುವಾಗ ಯುವತಿಗೆ ಯುವಕ ಪ್ರಪೋಸ್ ಮಾಡಲು ಒಂದು ಮೊಣಕಾಲಿನ ಮೇಲೆ ಕುಳಿತಿರುವುದನ್ನು ವಿಡಿಯೋದಲ್ಲಿ ನೋಡಬಹುದು.
ರಮೇಶ್ ಕೋಟಾನಾ ಎಂಬ ವ್ಯಕ್ತಿ ಹಂಚಿಕೊಂಡಿರುವ ಈ ವಿಡಿಯೋದಲ್ಲಿ, ಯುವಕ ಗುಲಾಬಿ ಬಣ್ಣದ ಚಾರ್ಟ್ ಪೇಪರ್ ಅನ್ನು ಹಿಡಿದುಕೊಂಡು ತನ್ನ ಪ್ರೇಯಸಿಯ ಕಡೆಗೆ ಪ್ರಪೋಸ್ ಮಾಡಲು ಹೋಗುತ್ತಿರುವುದನ್ನು ಕಾಣಬಹುದು. ಲಂಡನ್-ಮುಂಬೈ ವಿಮಾನದಲ್ಲಿ ಈ ಘಟನೆ ನಡೆದಿದೆ. ಈತ ಅಲ್ಲಿ ಇರುವುದು ಯುವತಿಗೆ ತಿಳಿದಿರಲಿಲ್ಲ. ಅವನನ್ನು ನೋಡುತ್ತಿದ್ದಂತೆಯೇ ಯುವತಿ ಪುಳಕಿತಳಾಗಿದ್ದಾಳೆ.
ಆ ವ್ಯಕ್ತಿ ಬ್ಯಾನರ್ ಹಿಡಿದು ನಿಂತುಕೊಂಡು, “ನಾನು ಶಾಶ್ವತವಾಗಿ ನಿನ್ನ ಜೊತೆ ಇರಲು ಬಯಸುತ್ತೇನೆ. ನೀವು ನನ್ನೊಂದಿಗೆ ನಡೆಯಲು ಬಯಸುತ್ತೀರಾ? ” ಎಂದು ರೊಮ್ಯಾಂಟಿಕ್ ಆಗಿ ಕೇಳಿದಾಗ ಯುವತಿ ಹೌದು ಎಂದಿದ್ದಾಳೆ.
ಇದನ್ನು ನೋಡಿ ಹಲವು ನೆಟ್ಟಿಗರು ಇದು ತೀರಾ ಹಳೆಯ ಸ್ಟೈಲ್. ಈಗ ಎಲ್ಲವೂ ಪ್ರೀಪ್ಲ್ಯಾನ್ಡ್. ಇದರಲ್ಲಿ ಅಚ್ಚರಿಯ ವಿಷಯ ಏನೂ ಇಲ್ಲ, ಇಬ್ಬರೂ ನಾಟಕ ಮಾಡುತ್ತಿದ್ದಾರೆ ಎಂದಿದ್ದರೆ, ಕೆಲವರು ಎಂಥ ಸುಮಧುರ ಪ್ರೀತಿ ಎಂದು ಶ್ಲಾಘಿಸಿದ್ದಾರೆ.
Marriage Proposal Made in Heaven
Love is in the Air
Wedding bells were ringing for a couple onboard an #AirIndia flight to #Mumbai when a man got down on one knee mid-air and proposed to his #fiancee, who was taken aback by the romantic gesture #AirI…https://t.co/ETqzEBzjKH
— rameshkotnana (@rameshkotnana1) January 11, 2023

