HomeKarnatakaಲೋಕಾಯುಕ್ತ ದಾಳಿಯ ವೇಳೆ ನಿವೃತ್ತ ಅಧಿಕಾರಿ ಬಳಿ 9 ಲಕ್ಷ ರೂ. ಹಳೆ ನೋಟುಗಳು ಪತ್ತೆ

ಲೋಕಾಯುಕ್ತ ದಾಳಿಯ ವೇಳೆ ನಿವೃತ್ತ ಅಧಿಕಾರಿ ಬಳಿ 9 ಲಕ್ಷ ರೂ. ಹಳೆ ನೋಟುಗಳು ಪತ್ತೆ

ಕಲಬುರಗಿ: ಲೋಕಾಯುಕ್ತ ದಾಳಿಗೆ ಒಳಗಾದ ನಿವೃತ್ತ ಇಂಜಿನಿಯರ್ ಮಾಣಿಕ್ ಕನಕಟ್ಟಿ ಅವರ ಬ್ಯಾಂಕ್ ಲಾಕರ್ ನಲ್ಲಿ 2016ರಲ್ಲಿ ಅಮಾನ್ಯೀಕರಣಗೊಂಡ 1000 ರೂ. ಮುಖಬೆಲೆಯ 9 ಲಕ್ಷ ರೂ. ಬಂಡಲ್ ಗಳು ಪತ್ತೆಯಾಗಿವೆ.

ಕಲಬುರಗಿಯ ಸಂಗಮೇಶ್ವರ ಬಡಾವಣೆಯ ಎಸ್.ಬಿ.ಐ. ಶಾಖೆಯ ಲಾಕರ್ ನಲ್ಲಿ ಈ ನೋಟುಗಳ ಬಂಡಲ್ ಹಾಗೂ 20 ತೊಲ ಚಿನ್ನಾಭರಣ ಪತ್ತೆಯಾಗಿದೆ. 10 ವರ್ಷದ ಹಿಂದೆ ಅಮಾನ್ಯೀಕರಣಗೊಂಡ ನೋಟುಗಳು ಇಷ್ಟು ದಿನ ಇಟ್ಟಿದ್ದು ಏಕೆ ಎನ್ನುವುದು ಅಚ್ಚರಿ ಮೂಡಿಸಿದೆ.

ಲೋಕಾಯುಕ್ತ ದಾಳಿಯ ವೇಳೆ ನಿವೃತ್ತ ಅಧಿಕಾರಿಯ ಬ್ಯಾಂಕ್ ಲಾಕರ್ ನಲ್ಲಿ ಹಳೆಯ ನೋಟುಗಳು ಚಿನ್ನಾಭರಣ ಪತ್ತೆಯಾಗಿದೆ. ಆದಾಯ ಮೀರಿದ ಆಸ್ತಿ ಗಳಿಕೆಗೆ ಸಂಬಂಧಿಸಿದಂತೆ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಕಲಬುರಗಿ ವೃತ್ತದ ನಿವೃತ್ತ ಅಧೀಕ್ಷಕ ಅಭಿಯಂತರ ಮಾಣಿಕ್ ಕನಕಟ್ಟಿ ಅವರ ಮನೆಯ ಮೇಲೆ ಮಂಗಳವಾರ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬುಧವಾರ ಕಲಬುರಗಿಯ ಸಂಗಮೇಶ್ವರ ಕಾಲೋನಿಯ ಎಸ್‌.ಬಿ.ಐ. ಬ್ಯಾಂಕ್ ನಲ್ಲಿರುವ ಅವರ ಲಾಕರ್ ಪರಿಶೀಲಿಸಿದಾಗ 1000 ರೂ. ಮುಖಬೆಲೆಯ 9 ಲಕ್ಷ ರೂ. ಹಳೆಯ ನೋಟುಗಳು, ಉಂಗುರ ಸೇರಿದಂತೆ 20 ತೊಲ ಚಿನ್ನಾಭರಣ ಪತ್ತೆಯಾಗಿದೆ.

ಕಲಬುರಗಿಯ ಗೋದುತಾಯಿ ನಗರದ ಎರಡು ಮನೆಗಳು, ಬೀದರ್ ಜಿಲ್ಲೆಯ ಹಳ್ಳಿಖೇಡಾ ಬಿ ಗ್ರಾಮದ ಮನೆ, ತೋಟಗಳು, ಹುಮ್ನಾಬಾದ್ ನಲ್ಲಿರುವ ಎರಡು ಕಾಂಪ್ಲೆಕ್ಸ್ ಗಳ ಮೇಲೆ ಮಂಗಳವಾರ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ಪರಿಶೀಲಿಸಿದ್ದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular