HomeKarnatakaBIG NEWS: ಮಂಡ್ಯ ಲೋಕಸಭಾ ಟಿಕೆಟ್ ಕದನ; ಸಂಸದೆ ಸುಮಲತಾ ನಿವಾಸದಲ್ಲಿ ಮಹತ್ವದ ಸಭೆ; ನಟ...

BIG NEWS: ಮಂಡ್ಯ ಲೋಕಸಭಾ ಟಿಕೆಟ್ ಕದನ; ಸಂಸದೆ ಸುಮಲತಾ ನಿವಾಸದಲ್ಲಿ ಮಹತ್ವದ ಸಭೆ; ನಟ ದರ್ಶನ್ ಆಗಮನ

ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಗಾಗಿ ಸಂಸದೆ ಸುಮಲತಾ ಭಾರಿ ಕಸರತ್ತು ನಡೆಸಿದ್ದು, ಒಂದು ವೇಳೆ ಬಿಜೆಪಿ ಹೈಕಮಾಂಡ್ ಟಿಕೆಟ್ ನಿರಾಕರಿಸಿದರೆ ಮುಂದಿನ ನಡೆ ಬಗ್ಗೆ ಚರ್ಚಿಸಲು ಸುಮಲತಾ ಹಾಗೂ ಬೆಂಬಲಿಗರು ಮಹತ್ವದ ಸಭೆ ನಡೆಸಿದ್ದಾರೆ.

ಬೆಂಗಳೂರಿನ ಜೆ.ಪಿ.ನಗರದ ನಿವಾಸದಲ್ಲಿ ಸಂಸದೆ ಸುಮಲತಾ, ಮಂಡ್ಯ ಕ್ಷೇತ್ರದ ಮುಖಂಡರು ಸಭೆಯಲ್ಲಿ ಭಾಗಿಯಾಗಿದ್ದಾರೆ. ಇದೇ ವೇಳೆ ಚಾಲೇಂಜಿಂಗ್ ಸ್ಟಾರ್ ದರ್ಶನ್ ಸಂಸದೆ ಸುಮಲತಾ ನಿವಾಸಕ್ಕೆ ಆಗಮಿಸಿದ್ದು ಸಭೆ ಮತ್ತಷ್ಟು ಮಹತ್ವ ಪಡೆದುಕೊಂಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆರಂಭದಲ್ಲಿ ಸುಮಲತಾ ನಟ ದರ್ಶನ್ ಅವರೊಂದಿಗೆ ಚರ್ಚೆ ನಡೆಸಿದ್ದು, ನಂತರ ಮಂಡ್ಯ ಕ್ಷೇತ್ರದ ಮುಖಂಡರ ಜೊತೆ ಚರ್ಚೆ ನಡೆಸಿದ್ದಾರೆ. ಈ ಮಧ್ಯೆ ಇಂಡವಾಳು ಸಚ್ಚಿದಾನಂದ ಕೂಡ ಸುಮಲತಾ ನಿವಾಸಕ್ಕೆ ಆಗಮಿಸಿದ್ದು, ಸಚ್ಚಿದಾನಂದ ಮನವೊಲಿಕೆ ಯತ್ನ ಕೂಡ ನಡೆದಿದೆ ಎನ್ನಲಾಗಿದೆ.

ಒಂದೆಡೆ ಸಂಧಾನ, ಇನ್ನೊಂದೆಡೆ ಲೋಕಸಭಾ ಚುನಾವಣಾ ಟಿಕೆಟ್ ಮಾತುಕತೆ ನಡೆದಿದ್ದು, ಒಟ್ಟಾರೆ ಸಂಸದೆ ಸುಮಲತಾ ನಿವಾಸದಲ್ಲಿ ನಡೆದಿರುವ ಹೈ ವೋಲ್ಟೇಜ್ ಸಭೆ ತೀವ್ರ ಕುತೂಹಲ ಮೂಡಿಸಿದೆ.

For Latest News Updates, Join Our Whatsapp Community🚩
RELATED ARTICLES

Most Popular