HomeKarnatakaದಂಗಾಗಿಸುವಂತಿದೆ ಲೋಕಾಯುಕ್ತ ದಾಳಿ ವೇಳೆ ಪತ್ತೆಯಾದ ಈ ಅಧಿಕಾರಿ ಆಸ್ತಿ...!

ದಂಗಾಗಿಸುವಂತಿದೆ ಲೋಕಾಯುಕ್ತ ದಾಳಿ ವೇಳೆ ಪತ್ತೆಯಾದ ಈ ಅಧಿಕಾರಿ ಆಸ್ತಿ…!

ಬೆಂಗಳೂರು: ಬೆಳಗಾವಿ ಕ್ರೆಡಲ್ ಅಧಿಕಾರಿ ತಿಮ್ಮರಾಜಪ್ಪ ಮನೆ ಮೇಲೆ ಲೋಕಾಯುಕ್ತ ದಾಳಿ ವೇಳೆ ಅಪಾರ ಪ್ರಮಾಣದಲ್ಲಿ ಆದಾಯ ಮೀರಿ ಆಸ್ತಿ ಹೊಂದಿರುವುದು ಗೊತ್ತಾಗಿದೆ.

ಬೆಳಗಾವಿ ಕ್ರೆಡಲ್ ಅಧೀಕ್ಷಕ ಅಭಿಯಂತರ ತಿಮ್ಮರಾಜಪ್ಪ ಅವರು ಕೋಲಾರದ ಮಹದೇವಪುರದಲ್ಲಿ ಮೂರು ಅಂತಸ್ತಿನ ಐಷಾರಾಮಿ ಮನೆ, 15 ಎಕರೆ ಕೃಷಿ ಜಮೀನು, ಒಂದು ಲಕ್ಷ ರೂಪಾಯಿ ನಗದು, 300 ಗ್ರಾಂ ಚಿನ್ನಾಭರಣ, 500 ಗ್ರಾಂ ಬೆಳ್ಳಿ ವಸ್ತುಗಳು, ಬೆಂಗಳೂರಿನಲ್ಲಿ 5 ಭವ್ಯ ಬಂಗಲೆಗಳು, ಮೂರು ಫ್ಲ್ಯಾಟ್, ಬೇನಾಮಿ ಹೆಸರಲ್ಲಿ ಒಂದು ಅಪಾರ್ಟ್ಮೆಂಟ್ ಪತ್ತೆಯಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬೆಂಗಳೂರಿನ 7 ಕಡೆ, ಬೆಳಗಾವಿ ಸೇರಿದಂತೆ 10 ಕಡೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಜಮೀನು ದಾಖಲೆಗಳು ಜಪ್ತಿ ಮಾಡಲಾಗಿದೆ. ಲೋಕಾಯುಕ್ತ ಎಸ್ಪಿ ಉಮೇಶ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular