HomeKarnatakaBIG NEWS: ರಾಜ್ಯದಲ್ಲಿ ಕತ್ತಲೆ ಹರಡಿ ನಾಪತ್ತೆಯಾದ ಇಂಧನ ಸಚಿವರು; ಕೆ.ಜೆ. ಜಾರ್ಜ್ ರನ್ನು ಹುಡುಕಿ...

BIG NEWS: ರಾಜ್ಯದಲ್ಲಿ ಕತ್ತಲೆ ಹರಡಿ ನಾಪತ್ತೆಯಾದ ಇಂಧನ ಸಚಿವರು; ಕೆ.ಜೆ. ಜಾರ್ಜ್ ರನ್ನು ಹುಡುಕಿ ಕೊಡಿ ಎಂದ ಬಿಜೆಪಿ

ಬೆಂಗಳೂರು: ಒಂದೆಡೆ ಬರದಿಂದ ತತ್ತರಿಸಿದ ರೈತರಿಗೆ ಇನ್ನೊಂದೆಡೆ ಲೋಡ್ ಶೆಡ್ಡಿಂಗ್ ಬರೆ. ರಾಜ್ಯದಲ್ಲಿ ಆರಂಭವಾಗಿರುವ ಲೋಡ್ ಶೆಡ್ಡಿಂಗ್ ವಿಚಾರವಾಗಿ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕಿಡಿ ಕಾರಿದೆ.

ರಾಜ್ಯಕ್ಕೆ ಕತ್ತಲೆ ಹರಡಿ ಇಂಧನ ಸಚಿವರು ನಾಪತ್ತೆಯಾಗಿದ್ದು, ಅವರನ್ನು ಹುಡುಕಿ ಕೊಡಿ ಎಂದು ಬಿಜೆಪಿ ವಾಕ್ಸಮರ ನಡೆಸಿದೆ. ಲೋಡ್ ಶೆಡ್ಡಿಂಗ್ ನಿಂದ ಜನತೆ ಸಂಕಷ್ಟದಲ್ಲಿದ್ದಾರೆ. ಕರ್ನಾಟಕದಲ್ಲೆಲ್ಲಾ ಕತ್ತಲೆ ಹರಡಿ ಇಂಧನ ಸಚಿವರು ನಾಪತ್ತೆಯಾಗಿದ್ದಾರೆ. ಇಂಧನ ಸಚಿವ ಕೆ.ಜೆ.ಜಾರ್ಜ್ ಅವರನ್ನು ಹುಡುಕಿಕೊಟ್ಟವರಿಗೆ ಕನಿಷ್ಟ ಸಿಂಗಲ್ ಫೇಸ್ ವಿದ್ಯುತ್ ಉಚಿತ, ಖಚಿತ, ನಿಶ್ಚಿತ ಎಂದು ಬಿಜೆಪಿ ಟ್ವೀಟ್ ಮೂಲಕ ಪ್ರಕಟಣೆ ಹೊರಡಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಲ್ಲದೇ ಕಾಣೆಯಾಗಿದ್ದ ಬಸ್ ಸ್ಟ್ಯಾಂಡ್ ನ್ನು ಕೊನೆಗೂ ಹುಡುಕಿದ್ದೇವೆ ಎಂದು ನಿಮ್ಮ ಬೆನ್ನನ್ನು ನೀವೇ ತಟ್ಟಿಕೊಳ್ಳುತ್ತಿದ್ದೀರಿ. ಇರಲಿ ನಿಮ್ಮ ಸಾಹಸ ನಿಜಕ್ಕೂ ಶ್ಲಾಘನೀಯ ಎಂದು ಟಾಂಗ್ ನೀಡಿದೆ.

For Latest News Updates, Join Our Whatsapp Community🚩
RELATED ARTICLES

Most Popular