ಭಾರತದ ಆರ್ಥಿಕ ಅಸಮಾನತೆ: ಕೇವಲ 13 ಕೋಟಿ ಜನರ ಬಳಿ ಮಾತ್ರ ಹೆಚ್ಚುವರಿ ಖರ್ಚು ಮಾಡಲು ಇದೆ ಹಣ ; ಅಧ್ಯಯನ ವರದಿಯಲ್ಲಿ ʼಶಾಕಿಂಗ್‌ʼ ಮಾಹಿತಿ ಬಹಿರಂಗ !

ಭಾರತದ ಆರ್ಥಿಕ ಚಿತ್ರಣ ತೀವ್ರ ಆತಂಕಕಾರಿಯಾಗಿದೆ. “ಬ್ಲೂಮ್ ವೆಂಚರ್ಸ್” ವರದಿಯ ಪ್ರಕಾರ, 140 ಕೋಟಿ ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಕೇವಲ 13-14 ಕೋಟಿ ಜನರ ಬಳಿ ಮಾತ್ರ ಹೆಚ್ಚುವರಿ ಖರ್ಚು ಮಾಡಲು ಹಣವಿದೆ. ಉಳಿದ 100 ಕೋಟಿ ಜನರು ಬಡತನದ ದವಡೆಯಲ್ಲಿ ಸಿಲುಕಿದ್ದಾರೆ. ಈ ಆರ್ಥಿಕ ಅಸಮಾನತೆಯು ಭಾರತದ ಭವಿಷ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ.

ಭಾರತದಲ್ಲಿ “ಪ್ರೀಮಿಯಮೈಸೇಷನ್” ಪ್ರವೃತ್ತಿ ಹೆಚ್ಚುತ್ತಿದೆ. ಶ್ರೀಮಂತರು ಐಷಾರಾಮಿ ವಸ್ತುಗಳತ್ತ ಹೆಚ್ಚು ಗಮನಹರಿಸುತ್ತಿದ್ದಾರೆ. ಆದರೆ, ಬಡವರು ದಿನನಿತ್ಯದ ಅಗತ್ಯ ವಸ್ತುಗಳನ್ನು ಕೊಳ್ಳಲೂ ಪರದಾಡುವಂತಾಗಿದೆ. ಈ ಆರ್ಥಿಕ ಅಸಮಾನತೆಯಿಂದಾಗಿ ಶ್ರೀಮಂತರು ಮತ್ತಷ್ಟು ಶ್ರೀಮಂತರಾಗುತ್ತಿದ್ದಾರೆ, ಬಡವರು ಮತ್ತಷ್ಟು ಬಡವರಾಗುತ್ತಿದ್ದಾರೆ. ಇದು ಭಾರತದ ಆರ್ಥಿಕ ಬೆಳವಣಿಗೆಗೆ ಮಾರಕವಾಗಿದೆ.

ಭಾರತದ ಆರ್ಥಿಕ ಬೆಳವಣಿಗೆ ಕುಂಠಿತವಾಗುತ್ತಿದೆ. ಜನರ ಉಳಿತಾಯ ಕಡಿಮೆಯಾಗುತ್ತಿದೆ, ಸಾಲದ ಪ್ರಮಾಣ ಹೆಚ್ಚುತ್ತಿದೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಸಾಲದ ನಿಯಮಗಳನ್ನು ಬಿಗಿಗೊಳಿಸುತ್ತಿರುವುದರಿಂದ ಜನರ ಖರ್ಚು ಮಾಡುವ ಸಾಮರ್ಥ್ಯ ಮತ್ತಷ್ಟು ಕಡಿಮೆಯಾಗುವ ಸಾಧ್ಯತೆಯಿದೆ. ಮಧ್ಯಮ ವರ್ಗದ ಜನರ ಆದಾಯ ಸ್ಥಗಿತಗೊಂಡಿರುವುದರಿಂದ ಅವರ ಕೊಳ್ಳುವ ಶಕ್ತಿ ಕುಸಿಯುತ್ತಿದೆ.

ಕೃತಕ ಬುದ್ಧಿಮತ್ತೆ (AI) ಮತ್ತು ಯಾಂತ್ರೀಕರಣ (automation) ವೃತ್ತಿಪರ ಉದ್ಯೋಗಗಳಿಗೆ ಕಂಟಕವಾಗುವ ಸಾಧ್ಯತೆ ಇದೆ. ಇದರಿಂದಾಗಿ ಭಾರತದ ಕಾರ್ಮಿಕ ವಲಯ ತೀವ್ರ ಆರ್ಥಿಕತೆಯು ತೀವ್ರ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಯಿದೆ. 2025ರ ಆರ್ಥಿಕ ಸಮೀಕ್ಷೆಯು ಈ ಸವಾಲುಗಳನ್ನು ಎತ್ತಿ ತೋರಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read