HomeKarnatakaBREAKING NEWS: ಟೈರ್ ಸ್ಫೋಟ; ಬ್ಯಾರಿಕೇಡ್ ಗೆ ಗುದ್ದಿದ ಟಾಟಾ ಸುಮೋ; ಮೂವರು ಟೋಲ್ ಸಿಬ್ಬಂದಿಗಳಿಗೆ...

BREAKING NEWS: ಟೈರ್ ಸ್ಫೋಟ; ಬ್ಯಾರಿಕೇಡ್ ಗೆ ಗುದ್ದಿದ ಟಾಟಾ ಸುಮೋ; ಮೂವರು ಟೋಲ್ ಸಿಬ್ಬಂದಿಗಳಿಗೆ ಗಾಯ

ಬೆಂಗಳೂರು: ಟಾಟಾ ಸುಮೋ ಟೈರ್ ಸ್ಫೋಟಗೊಂಡ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಬ್ಯಾರಿಕೇಡ್ ಗೆ ನುಗ್ಗಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರಿನ ಹೊಸೂರು ಮುಖ್ಯರಸ್ತೆಯ ಅತ್ತಿಬೆಲೆ ಬಳಿ ನಡೆದಿದೆ.

ಅತ್ತಿಬೆಲೆಯ ಟೋಲ್ ಬಳಿ ಈ ಅಪಘಾತ ಸಂಭವಿಸಿದ್ದು, ಟಾಟಾ ಸುಮೋ ಟೈರ್ ಸ್ಫೋಟಗೊಂಡು ನಿಯಂತ್ರಣತಪ್ಪಿ ಬ್ಯಾರಿಕೇಡ್ ಗೆ ಗುದ್ದಿದೆ. ಪರಿಣಾಮ ಪಕ್ಕದಲ್ಲಿಯೇ ಕೆಲಸ ಮಾಡುತ್ತಿದ್ದ ಟೋಲ್ ಸಿಬ್ಬಂದಿಗಳ ಮೇಲೆ ಬ್ಯಾರಿಕೇಡ್ ಬಿದ್ದಿದ್ದು, ಘಟನೆಯಲ್ಲಿ ಮೂವರು ಟೋಲ್ ಸಿಬ್ಬಂದಿಗಳು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಟಾಟಾ ಸುಮೋ ಸಹಿತ ತಮಿಳುನಾಡು ಮೂಲದ ಚಾಲಕ ಮೂರ್ತಿ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular