ಬೇಕಾಗುವ ಪದಾರ್ಥಗಳು: ದೋಸೆ ಅಕ್ಕಿ(ರೇಷನ್ ಅಕ್ಕಿ) 1 ಕಪ್, ಹಲಸಿನ ಹಣ್ಣು 1 ಕಪ್, ½ ಕಪ್ ತೆಂಗಿನ ತುರಿ, ಏಲಕ್ಕಿ 2, ಬೆಲ್ಲ, ರುಚಿಗೆ ತಕ್ಕಷ್ಟು ಉಪ್ಪು, ಕರಿಯಲು ಎಣ್ಣೆ.
ಮಾಡುವ ವಿಧಾನ: ಮೊದಲಿಗೆ ಅಕ್ಕಿಯನ್ನು 2 ಗಂಟೆಗಳ ಕಾಲ ನೆನೆಸಿಡಬೇಕು. ಬಳಿಕ ಹಲಸಿನ ಹಣ್ಣು, ನೆನೆಸಿದ ಅಕ್ಕಿ, ತೆಂಗಿನತುರಿ, 2 ಏಲಕ್ಕಿ ಹಾಕಿ ಗಟ್ಟಿಯಾಗಿ ರುಬ್ಬಿಕೊಳ್ಳಬೇಕು. ಸಿಹಿ ಬೇಕಾದಲ್ಲಿ ¼ ಕಪ್ ಬೆಲ್ಲ ಉಪಯೋಗಿಸಬಹುದು. ಇದನ್ನೂ ಕೂಡ ಒಟ್ಟಿಗೆ ರುಬ್ಬಿಕೊಳ್ಳಬೇಕು. ರುಬ್ಬಿರುವಂತಹ ಮಿಶ್ರಣಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಮಿಕ್ಸ್ ಮಾಡಬೇಕು.
ಕಾದ ಎಣ್ಣೆಯಲ್ಲಿ ಬೋಂಡಾ ಹಿಟ್ಟನ್ನು ಹಾಕಿ ಕರಿಯಬೇಕು. ಮಧ್ಯಮ ಉರಿಯಲ್ಲಿ ಬೋಂಡಾ ಕರಿದರೆ ರುಚಿಕರವಾದ ಹಲಸಿನ ಹಣ್ಣಿನ ಬೋಂಡಾ ಸವಿಯಲು ಸಿದ್ಧ.