ಕಾರವಾರ: ಭೂ ಕಬಳಿಕೆ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿಯಿಂದ ಬಂಧಿಸಲ್ಪಟ್ಟಿರುವ ಆರೋಪಿ ಸುಲೈಮಾನ್ ಖಾನ್ ಸಿದ್ದಿಕ್ ಮನೆ ಮೇಲೆ ಇಡಿ (ED) ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕೋಡಿಬಾಗ್ ನಲ್ಲಿರುವ ಮಿಡ್ ಮ್ಯಾಕ್ ಆರ್ಕಿಡ್ ಅಪಾರ್ಟ್ ಮೆಂಟ್ ನಲ್ಲಿರುವ ಫ್ಕ್ಯಾಟ್ ಮೇಲೆ ಇಡಿ ಆಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಗೋವಾದ ಪಣಜಿಯಲ್ಲಿ ಅಕ್ರಮ ಭೂ ಕಬಳಿಕೆ ಹಾಗೂ ಅಕ್ರಮ ಹಣ ವರ್ಗಾಣೆ ಆರೋಪ ಸಿದ್ದಿಕ್ ಮೇಲಿದೆ.
ಮೃತರ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿ ಕೋಟ್ಯಂತರ ರೂಪಾಯಿ ವಂಚನೆ ಹಾಗೂ ಭೂ ಕಬಳಿಕೆ ಮಾಡೊದ ಹಿನ್ನೆಲೆಯಲ್ಲಿ ಗೋವಾದಲ್ಲಿ ಸಿದ್ದಿಕ್ ವಿರುದ್ಧ PLMA ಅಡಿ ಪ್ರಕರಣ ದಾಖಲಾಗಿತ್ತು. ಬಳಿಕ ಜುಲೈ 16ರಂದು ಇಡಿ ಅಧಿಜಾರಿಗಳು ಸುಲೈಮಾನ್ ಖಾನ್ ಸಿದ್ದಿಕ್ ನನ್ನು ಬಂಧಿಸಿದ್ದರು. ಸಿದ್ದಿಕ್ ಹೆಸರಲ್ಲಿದ್ದ 62.5 ಎಕೆಅರೆ ಜಮೀನು ಜಪ್ತಿ ಮಾಡಿದ್ದರು.
300 ಕೋಟಿ ಮೌಲ್ಯದ 62.5 ಎಕರೆ ಜಮೀನು ಜಪ್ತಿಯಾಗಿತ್ತು. ಇದೀಗ ಈ ಪ್ರಕರಣ ಸಂಬಂಧ ಹೆಚ್ಚಿನ ವಿಚಾರಣೆಗಾಗಿ ಸಿದ್ದಿಕ್ ನ ಕಾರವಾರದ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ.
ಸುಲೈಮಾನ್ ಖಾನ್ ಸಿದ್ದಿಕ್, ಗೋವಾ, ದೆಹಲಿ ಮತ್ತು ಹೈದರಾಬಾದ್ ಸೇರಿದಂತೆ ಹಲವು ರಾಜ್ಯಗಳಲ್ಲಿ ಸಕ್ರಿಯರಾಗಿದ್ದ ಒಬ್ಬ ಪ್ರಮುಖ ಅಂತರರಾಜ್ಯ ಅಪರಾಧಿಯಾಗಿದ್ದು, ಮುಖ್ಯವಾಗಿ ಗೋವಾದಲ್ಲಿ ನಡೆದ ಬೃಹತ್ ಭೂ ಕಬಳಿಕೆ ಮತ್ತು ಮನಿ ಲಾಂಡರಿಂಗ್ ಹಗರಣಗಳ ಪ್ರಮುಖ ಆರೋಪಿ. ಗೋವಾದ ವಾಲ್ಪೋಯ್ ಮತ್ತು ತಿಸ್ವಾಡಿ ಮುಂತಾದ ಪ್ರದೇಶಗಳಲ್ಲಿ ನಕಲಿ ಮಾರಾಟ ಪತ್ರಗಳು ಮತ್ತು ನಕಲಿ ಸಹಿಗಳನ್ನು ಬಳಸಿ ಸುಮಾರು 2.16 ಲಕ್ಷ ಚದರ ಮೀಟರ್‌ಗಿಂತಲೂ ಹೆಚ್ಚು ಸರ್ಕಾರಿ ಹಾಗೂ ಖಾಸಗಿ ಜಮೀನನ್ನು ಅಕ್ರಮವಾಗಿ ವಶಪಡಿಸಿಕೊಂಡ ಆರೋಪ ಈತನ ಮೇಲಿದೆ. ಭೂ ಕಬಳಿಕೆಯಿಂದ ಬಂದ ಹಣವನ್ನು ತನ್ನ ಪತ್ನಿ ಅಫ್ಸಾನಾ (ಸಾರಿಕಾ ಖಾನ್) ಹೆಸರಿನಲ್ಲಿ ಕರ್ನಾಟಕದ ವಿವಿಧೆಡೆ ಫ್ಲಾಟ್‌ಗಳು ಮತ್ತು ಆಸ್ತಿಗಳ ಮೇಲೆ ಹೂಡಿಕೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ (ED) ಇವರ ವಿರುದ್ಧ ತನಿಖೆ ನಡೆಸುತ್ತಿದೆ.

