HomeLive Newsಕರೆಂಟ್ ಶಾಕ್ ಗೆ ಕಂಬದಲ್ಲಿಯೇ ಸಿಲುಕಿದ ಲೈನ್ ಮ್ಯಾನ್: ವಿದ್ಯುತ್ ಅವಘಡಕ್ಕೆ ಕರುಳು ಕಾಣಿಸುವಷ್ಟು ಸುಟ್ಟುಗಾಯ:...

ಕರೆಂಟ್ ಶಾಕ್ ಗೆ ಕಂಬದಲ್ಲಿಯೇ ಸಿಲುಕಿದ ಲೈನ್ ಮ್ಯಾನ್: ವಿದ್ಯುತ್ ಅವಘಡಕ್ಕೆ ಕರುಳು ಕಾಣಿಸುವಷ್ಟು ಸುಟ್ಟುಗಾಯ: ಸಾವು ಬದುಕಿನ ನಡುವೆ ವ್ಯಕ್ತಿ ಹೋರಾಟ

ಬೆಂಗಳೂರು: ಬೆಂಗಳೂರಿನಲ್ಲಿ ಕರ್ತವ್ಯ ನಿರತ ಲೈನ್ ಮ್ಯಾನ್ ಗೆ ಕರೆಂಟ್ ಶಾಕ್ ಹೊಡೆದು ವ್ಯಕ್ತಿ ಕಂಬದಲ್ಲಿಯೇ ಸಿಲುಕಿಕೊಂಡು ನೇತಾಡಿದ ಘಟನೆ ನಡೆದಿದೆ.

ಬೆಂಗಳೂರಿನ ಸುಂಕದಕಟ್ಟೆ ಬಳಿ ವಿದ್ಯುತ್ ಸಂಪರ್ಕ ಕಲ್ಪಿಸಲೆಂದು ಕಂಬ ಹತ್ತಿದ್ದ ವೇಳೆ ಲೈನ್ ಮ್ಯಾನ್ ಗೆ ಏಕಾಏಕಿ ವಿದ್ಯುತ್ ಪ್ರವಹಿಸಿ ಕರೆಂಟ್ ಶಾಕ್ ಹೊಡೆದಿದೆ. ಲೈನ್ ಮ್ಯಾನ್ ಪ್ರಕಾಶ್ ಕಂಬದಲ್ಲೇ ಸಿಲುಕಿ ನೇತಾಡಿದ್ದಾರೆ. ಗಂಭೀರ ಸ್ಥಿತಿಯಲ್ಲಿರುವ ಪ್ರಕಾಶ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದ ಬುಧವಾರ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕರೆಂಟ್ ಶಾಕ್ ಗೆ ಕರುಳು ಕಾಣಿಸುವಷ್ಟು ಹೊಟ್ಟೆಯ ಭಾಗ ಸುಟ್ಟುಹೋಗಿದೆ. ಲೈನ್ ಮ್ಯಾನ್ ಪ್ರಕಾಶ್ ಕಳೆದ ಒಂದು ವಾರದಿಂದ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದರೂ ಬೆಸ್ಕಾಂ ತನ್ನ ಸಿಬ್ಬಂದಿಯ ನೆರವಿಗೆ ಬಂದಿಲ್ಲ. ಚಿಕಿತ್ಸೆಗೆ ನೆರವು ನೀಡದೇ ವಾರದಿಂದ ನಿರ್ಲಕ್ಷ ಮೆರೆದಿದೆ. ಲೈನ್ ಮೆನ್ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.

For Latest News Updates, Join Our Whatsapp Community🚩
RELATED ARTICLES

Most Popular