HomeBusinessLIC ಪಾಲಿಸಿದಾರರಿಗೆ ಮತ್ತು ಏಜೆಂಟ್‌ಗಳಿಗೆ ಡಬಲ್ ಧಮಾಕಾ: MyLIC ಹಾಗೂ Super Sales Saathi ಆ್ಯಪ್...

LIC ಪಾಲಿಸಿದಾರರಿಗೆ ಮತ್ತು ಏಜೆಂಟ್‌ಗಳಿಗೆ ಡಬಲ್ ಧಮಾಕಾ: MyLIC ಹಾಗೂ Super Sales Saathi ಆ್ಯಪ್ ಬಿಡುಗಡೆ

ಮುಂಬೈ: ದೇಶದ ವಿಮಾ ಕ್ಷೇತ್ರದ ದೈತ್ಯ ಸಂಸ್ಥೆ ಭಾರತೀಯ ಜೀವ ವಿಮಾ ನಿಗಮ (LIC), ತನ್ನ ಸೇವೆಯನ್ನು ಇನ್ನಷ್ಟು ಸರಳಗೊಳಿಸಲು ಡಿಜಿಟಲ್ ಲೋಕಕ್ಕೆ ಭರ್ಜರಿಯಾಗಿ ಎಂಟ್ರಿ ಕೊಟ್ಟಿದೆ. ಮುಂಬೈನಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಗ್ರಾಹಕರಿಗಾಗಿ ‘MyLIC’ ಮತ್ತು ವಿಮಾ ಪ್ರತಿನಿಧಿಗಳಿಗಾಗಿ ‘Super Sales Saathi’ ಎಂಬ ಎರಡು ಹೈಟೆಕ್ ಮೊಬೈಲ್ ಅಪ್ಲಿಕೇಶನ್‌ಗಳನ್ನು ಲೋಕಾರ್ಪಣೆ ಮಾಡಲಾಗಿದೆ.ಕೇಂದ್ರ ಹಣಕಾಸು ಸಚಿವಾಲಯದ ಕಾರ್ಯದರ್ಶಿ ಎಂ. ನಾಗರಾಜು ಅವರು ಈ ಆಪ್‌ಗಳನ್ನು ಬಿಡುಗಡೆ ಮಾಡಿದರು.

ಪಾಲಿಸಿದಾರರಿಗಾಗಿ MyLIC ಆ್ಯಪ್: ಈಗ ಕಚೇರಿಗೆ ಅಲೆಯುವ ಕೆಲಸವಿಲ್ಲ


ಗ್ರಾಹಕರು ತಮ್ಮ ಇನ್ಷೂರೆನ್ಸ್ ಕೆಲಸಗಳನ್ನು ಬೆರಳ ತುದಿಯಲ್ಲೇ ಮಾಡಿಕೊಳ್ಳಲು ಈ ಆಪ್ ಸಹಕಾರಿ. ಇದರ ವಿಶೇಷತೆಗಳು ಹೀಗಿವೆ:

ಪಾಲಿಸಿ ಮ್ಯಾನೇಜ್‌ಮೆಂಟ್: ನಿಮ್ಮ ಎಲ್ಲಾ ಪಾಲಿಸಿಗಳ ವಿವರ ಒಂದೇ ಕಡೆ ಲಭ್ಯ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತಕ್ಷಣದ ಪ್ರೀಮಿಯಂ: ಆನ್‌ಲೈನ್ ಮೂಲಕವೇ ಕ್ಷಣಾರ್ಧದಲ್ಲಿ ಪ್ರೀಮಿಯಂ ಪಾವತಿಸಬಹುದು.

ಮನೆಯಲ್ಲೇ ಕುಳಿತು ಸಾಲ: ಪಾಲಿಸಿ ಮೇಲೆ ಸಾಲ ಪಡೆಯಲು ಇನ್ಮುಂದೆ ಕಚೇರಿಗೆ ಹೋಗಬೇಕಿಲ್ಲ, ಪೇಪರ್‌ಲೆಸ್ ಲೋನ್ ಸೌಲಭ್ಯ ಇಲ್ಲಿವೆ.

ಪಾಲಿಸಿ ನವೀಕರಣ: ಸ್ಥಗಿತಗೊಂಡ ಪಾಲಿಸಿಗಳನ್ನು ಮನೆಯಲ್ಲೇ ಕುಳಿತು ಪುನಶ್ಚೇತನಗೊಳಿಸಬಹುದು (Revival).

ಏಜೆಂಟ್‌ಗಳಿಗಾಗಿ ‘Super Sales Saathi’: ಕೆಲಸ ಇನ್ಮುಂದೆ ಫುಲ್ ಈಸಿ


ಎಲ್‌ಐಸಿ ಏಜೆಂಟ್‌ಗಳು ಮತ್ತು ಮಾರ್ಕೆಟಿಂಗ್ ಸಿಬ್ಬಂದಿಯ ಕಾರ್ಯಕ್ಷಮತೆ ಹೆಚ್ಚಿಸಲು ಈ ಆಪ್ ವಿನ್ಯಾಸಗೊಳಿಸಲಾಗಿದೆ:

AI ಆಧಾರಿತ ನೆರವು: ಕೃತಕ ಬುದ್ಧಿಮತ್ತೆ (AI) ಮೂಲಕ ಗ್ರಾಹಕರಿಗೆ ಯಾವ ಪಾಲಿಸಿ ಸೂಕ್ತ ಎಂದು ತಿಳಿಯಬಹುದು.

ರಿಯಲ್-ಟೈಮ್ ಅಪ್ಡೇಟ್: ಗ್ರಾಹಕರ ಪಾಲಿಸಿ ಸ್ಟೇಟಸ್ ಅನ್ನು ಕ್ಷಣಕ್ಷಣಕ್ಕೂ ಟ್ರ್ಯಾಕ್ ಮಾಡಬಹುದು.

ಡಿಜಿಟಲ್ ಸೇಲ್ಸ್ ಕಿಟ್: ಪಾಲಿಸಿ ವಿವರ ನೀಡಲು ಬೇಕಾದ ಎಲ್ಲಾ ಮಾಹಿತಿ ಈ ಆಪ್‌ನಲ್ಲಿ ಲಭ್ಯವಿರುತ್ತದೆ.

ಏನಿದು ‘ಡೈವ್’ (DIVE) ಯೋಜನೆ?
ಎಲ್‌ಐಸಿ ತನ್ನ ಸೇವೆಯನ್ನು ಸಂಪೂರ್ಣ ಡಿಜಿಟಲೀಕರಣಗೊಳಿಸಲು ‘DIVE’ (Digital Innovation & Value Enhancement) ಎಂಬ ವಿಶೇಷ ಪ್ಲಾಟ್‌ಫಾರ್ಮ್ ರೂಪಿಸಿದೆ. ಇದರ ಭಾಗವಾಗಿಯೇ ಈ ಎರಡು ಆಪ್‌ಗಳನ್ನು ಅಭಿವೃದ್ಧಿಪಡಿಸಲಾಗಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular