HomeLatest Newsಮಧ್ಯರಾತ್ರಿ ಹಸಿವು ನೀಗಿಸಲು ಹೀಗಿರಲಿ ನಿಮ್ಮ ತಿನಿಸುಗಳ ಆಯ್ಕೆ

ಮಧ್ಯರಾತ್ರಿ ಹಸಿವು ನೀಗಿಸಲು ಹೀಗಿರಲಿ ನಿಮ್ಮ ತಿನಿಸುಗಳ ಆಯ್ಕೆ

ರಾತ್ರಿ ಊಟದ ನಂತರ ಸರಿಯಾದ ಸಮಯಕ್ಕೆ ಮಲಗುವುದು ಒಳ್ಳೆಯ ಅಭ್ಯಾಸ. ಆದರೆ ಕೆಲವರು ಕಚೇರಿ ಕೆಲಸ ಅಥವಾ ಇತರ ಕಾರಣಗಳಿಗಾಗಿ ತಡರಾತ್ರಿ ಮಲಗುತ್ತಾರೆ. ಮಧ್ಯರಾತ್ರಿವರೆಗೂ ಎಚ್ಚರವಾಗಿದ್ದರೆ ಹಸಿವಾಗುವುದು ಸಹಜ. ಮಧ್ಯರಾತ್ರಿ ಹಸಿವಾದಾಕ್ಷಣ ಸಿಹಿ ಪದಾರ್ಥ, ಕರಿದ ತಿಂಡಿಗಳು ಅಥವಾ ಜಂಕ್‌ ಫುಡ್‌ಗಳನ್ನು ಸೇವಿಸುತ್ತಾರೆ. ಆದರೆ ರಾತ್ರಿ ಇವನ್ನೆಲ್ಲ ತಿನ್ನುವುದು ಆರೋಗ್ಯಕರ ಅಭ್ಯಾಸವಲ್ಲ. ತಡರಾತ್ರಿಯಲ್ಲಿ ನಮಗೆ ಹಸಿವಾದರೆ ಏನೆಲ್ಲಾ ತಿನ್ನಬಹುದು ಅನ್ನೋದನ್ನು ನೋಡೋಣ.

ಹಣ್ಣುಗಳು: ರಾತ್ರಿ ಹೊಟ್ಟೆ ಹಸಿದರೆ ಹಣ್ಣುಗಳನ್ನು ತಿನ್ನಿರಿ. ಏಕೆಂದರೆ ಅವು ತುಂಬಾ ಆರೋಗ್ಯಕರ. ಚಳಿಗಾಲದಲ್ಲಿ, ಫ್ರಿಜ್‌ನಿಂದ ಹೊರತೆಗೆದ ತಕ್ಷಣ ಹಣ್ಣನ್ನು ತಿನ್ನಬೇಡಿ. ಅದು ಸಾಮಾನ್ಯ ತಾಪಮಾನಕ್ಕೆ ಬರುವವರೆಗೆ ಕಾಯಿರಿ. ಮಧುಮೇಹ ರೋಗಿಗಳು ಅವರಿಗೆ ಸೂಕ್ತವಾದ ಹಣ್ಣುಗಳನ್ನೇ ಸೇವಿಸಬೇಕು.

ಸೂಪ್ : ತಡರಾತ್ರಿ ಹಸಿವು ಕಾಡುತ್ತಿದ್ದರೆ ಮನೆಯಲ್ಲಿಯೇ ಆರೋಗ್ಯಕರವಾದ ಸೂಪ್ ತಯಾರಿಸಬಹುದು. ಸೂಪ್‌ ಮಾಡುವುದು ಸುಲಭ, ಜೊತೆಗೆ ರುಚಿಕರವಾಗಿಯೂ ಇರುತ್ತದೆ. ಸೂಪ್‌ ಕುಡಿಯುವುದರಿಂದ ಹಸಿವು ಕೂಡ ಬೇಗನೆ ಕಡಿಮೆಯಾಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಡ್ರೈಫ್ರೂಟ್ಸ್‌: ಡ್ರೈ ಫ್ರೂಟ್ಸ್‌ನಲ್ಲಿ ಪೌಷ್ಟಿಕಾಂಶ ಹೆಚ್ಚಾಗಿರುತ್ತದೆ. ಹಾಗಾಗಿ ಆಹಾರ ತಜ್ಞರು ಇದನ್ನು ತಿನ್ನಲು ಶಿಫಾರಸು ಮಾಡುತ್ತಾರೆ. ಇದರಲ್ಲಿ ಪ್ರೊಟೀನ್ ಪ್ರಮಾಣ ತುಂಬಾ ಹೆಚ್ಚಿರುವುದರಿಂದ ರಾತ್ರಿ ತಿಂದರೆ ಹೊಟ್ಟೆ ಬೇಗನೇ ತುಂಬುತ್ತದೆ. ಹೆಚ್ಚು ಹೊತ್ತು ಹಸಿವಾಗದೇ ಇದ್ದರೆ ತೂಕವನ್ನು ಕೂಡ ನಿಯಂತ್ರಿಸಬಹುದು. ರಾತ್ರಿ ಹಸಿವಾದರೆ ನೀವು ಬಾದಾಮಿ, ಪಿಸ್ತಾ, ಗೋಡಂಬಿ ಮತ್ತು ವಾಲ್‌ನಟ್‌ಗಳನ್ನು ಸೇವಿಸಿ.

For Latest News Updates, Join Our Whatsapp Community🚩
RELATED ARTICLES

Most Popular